ಪೇಯ್ಡ್ ಆಗಲಿದೆ ಗೂಗಲ್ ಮೀಟ್! ; ಆನ್‌ಲೈನ್ ಶಿಕ್ಷಣದ ಮೇಲೂ ಪ್ರತಿಕೂಲ ಪರಿಣಾಮ
Team Udayavani, Sep 29, 2020, 6:22 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: “ಗೂಗಲ್ ಮೀಟ್’ನಲ್ಲಿ ಗಂಟೆಗಟ್ಟಲೆ ಸಭೆಗಳನ್ನು, ವೆಬಿನಾರ್‌ಗಳನ್ನು ನಡೆಸುವ ಉಚಿತ ಸೌಲಭ್ಯಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ.
ಅ. 1ರಿಂದ “ಗೂಗಲ್ ಮೀಟ್ ಫ್ರೀ ವರ್ಷನ್’ನಡಿ ನಡೆಸಲಾಗುವ ಸಭೆಗಳು, ವೆಬಿನಾರ್‌ಗಳು ಅಥವಾ ಆನ್‌ಲೈನ್ ತರಗತಿಗಳ ಕಾಲಾವಧಿ ಕೇವಲ 60 ನಿಮಿಷಕ್ಕೆ ಸೀಮಿತವಾಗಲಿವೆ.
ಈ ಹೊಸ ನಿಯಮ “ಜಿ ಸೂಟ್’ ಹಾಗೂ “ಜಿ ಸೂಟ್ ಫಾರ್ ಎಜುಕೇಷನ್’ ಗ್ರಾಹಕರಿಗೂ ಅನ್ವಯವಾಗಲಿದೆ.
“ಜಿ ಸೂಟ್’ ಹಾಗೂ “ಜಿ ಸೂಟ್ ಫಾರ್ ಎಜುಕೇಷನ್’ ಸೌಲಭ್ಯಗಳನ್ನು ಪಡೆಯ ಬಯಸುವ ಯಾವುದೇ ಸಂಸ್ಥೆ ಮಾಸಿಕ ಅಂದಾಜು 1,800 ರೂ.ಗಳನ್ನು ನೀಡಿ ಚಂದಾದಾರರಾಗಬೇಕಿದೆ. ಆ ಸೌಲಭ್ಯಗಳಡಿ, ಏಕಕಾಲದಲ್ಲಿ 250 ಸಭಿಕರನ್ನು ಸೇರಿಸಿ ಸಭೆ ನಡೆಸಲು, ಲೈವ್ ಸ್ಟ್ರೀಮಿಂಗ್ ಮೂಲಕ 1 ಲಕ್ಷ ಜನರನ್ನು ತಲುಪುವ ಅವಕಾಶ ಸಿಗಲಿದೆ.
ಜತೆಗೆ, ಆನ್‌ಲೈನ್ ಸಭೆ, ವೆಬಿನಾರ್ ಅಥವಾ ತರಗತಿಗಳನ್ನು ಗೂಗಲ್ ಡ್ರೈವ್‌ನಲ್ಲಿ ಸಂರಕ್ಷಿಸಿಡುವ ಸೌಲಭ್ಯವೂ ದೊರಕಲಿದೆ.
ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚು ಪ್ರವರ್ಧಮಾನಕ್ಕೇರಿದ ಗೂಗಲ್ ಮೀಟ್‌ನಡಿ ಅನೇಕ ತರಗತಿಗಳು, ಸಭೆಗಳು ಜರಗಿವೆ. ದಿನವೊಂದಕ್ಕೆ 1 ಕೋಟಿ ಜನ ಗೂಗಲ್ ಮೀಟ್ ಬಳಸುತ್ತಿದ್ದರೆಂದು ಏಪ್ರಿಲ್‌ನ ಅಂಕಿ-ಅಂಶಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.