ಶಾಪ್ಸಿ ಮೂಲಕ ಬೇರೆಯವರಿಗೆ ವಸ್ತುಗಳನ್ನು ಬುಕ್ ಮಾಡಿಕೊಡಿ, ನೀವು ಕಮಿಷನ್ ಪಡೆಯಿರಿ!
ಫ್ಲಿಪ್ ಕಾರ್ಟ್ ನಿಂದ ಶಾಪ್ಸಿ ಎಂಬ ಹೊಸ ವಿಧಾನ: ಏನಿದು?
Team Udayavani, Jul 7, 2021, 3:44 PM IST
ಬೆಂಗಳೂರು: ಭಾರತದ ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ಶಾಪ್ಸಿ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.
ಶಾಪ್ಸಿ ಎಂಬುದು ಆ್ಯಪ್ ಆಧಾರಿತ ಸೇವೆಯಾಗಿದ್ದು, ಇದರ ಮೂಲಕ ಯಾವುದೇ ಬಂಡವಾಳ ತೊಡಗಿಸದೇ ಆನ್‍ಲೈನ್ ಮೂಲಕ ಆದಾಯಗಳಿಸಬಹುದಾಗಿದೆ.
ಇದು ತುಂಬಾ ಸರಳವಾಗಿದ್ದು, ಶಾಪ್ಸಿ ಆಪ್ ಅನ್ನು ನಿಮ್ಮಲ್ಲಿರುವ ಸ್ಮಾರ್ಟ್ ಫೋನ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಬೇಕು.ಅದು ಫ್ಲಿಪ್ ಕಾರ್ಟ್ ಆಪ್‍ನೊಂದಿಗೆ ಲಿಂಕ್ ಆಗಿದ್ದು, ಅದರಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ದೊರಕುವ ಎಲ್ಲ ಉತ್ಪನ್ನಗಳ ವಿವರ ಇರುತ್ತದೆ.
ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್, ಮನೆಬಳಕೆ ಸಾಮಗ್ರಿಗಳು, ಉಡುಪುಗಳು.. ಹೀಗೆ ಫ್ಲಿಪ್‍ಕಾರ್ಟ್ ಆನ್‍ಲೈನ್ ಮಾರಾಟದಲ್ಲಿ ಲಭ್ಯವಾಗುವ ವಿವಿಧ ಬಗೆಯ ಉತ್ಪನ್ನಗಳು ಅಲ್ಲಿಯೂ ಸಹ ಲಿಸ್ಟಿಂಗ್ ಆಗಿರುತ್ತವೆ.
ಇದನ್ನೂ ಓದಿ: ಹೊಸ ಮೊಬೈಲ್ ಬಿಡುಗಡೆ ಮಾಡಿದ ನೋಕಿಯಾ
ನಿಮ್ಮ ಗೆಳೆಯರು ನನಗೊಂದು ಮೊಬೈಲ್ ಫೋನ್ ಬೇಕು ಎಂದು ನಿಮ್ಮನ್ನು ಕೇಳಿದರೆ ಅದನ್ನು ನೀವು ಶಾಪ್ಸಿ ಮೂಲಕ ಆರ್ಡರ್ ಮಾಡುವುದು. ಆ ಫೋನ್ ಡೆಲಿವರಿ ಆದ ಬಳಿಕ ನಿಮಗೆ ಫ್ಲಿಪ್ ಕಾರ್ಟ್ ಕಮಿಷನ್ ನೀಡುತ್ತದೆ!
ಶಾಪ್ಸಿ ಆಪ್‍ನಲ್ಲಿ ಮೊಬೈಲ್ ಫೋನ್ ವಿಭಾಗಕ್ಕೆ ಹೋದರೆ, ಬ್ರಾಂಡ್ ವೈಸ್ ಮೊಬೈಲ್‍ಗಳ ವಿವರ ಇರುತ್ತದೆ. ನೀವು ಸ್ಯಾಮ್ ಸಂಗ್ ವಿಭಾಗಕ್ಕೆ ಹೋಗಿ ಒತ್ತಿದರೆ, ಅದು ಫ್ಲಿಪ್‍ಕಾರ್ಟ್ ಆಪ್ ನಲ್ಲಿ ಬಂದಂತೆಯೇ ಎಲ್ಲ ವಿವರಗಳನ್ನೂ ನೀಡುತ್ತದೆ. ಅಲ್ಲಿ ಅದನ್ನು ಕಾರ್ಟ್ ಗೆ ಹಾಕಿ, ನಿಮ್ಮ ಗೆಳೆಯರ ವಿಳಾಸಕ್ಕೆ ಆರ್ಡರ್ ಪ್ಲೇಸ್ ಮಾಡಬೇಕು. ಆ ಮೊಬೈಲ್ ನಿಮ್ಮ ಗೆಳೆಯರಿಗೆ ತಲುಪಿ, ಅದರ ರಿಟರ್ನ್ ಅವಧಿ ಮುಗಿದ ಬಳಿಕ ನಿಮ್ಮ ಶಾಪ್ಸಿ ಅಕೌಂಟಿಗೆ ಕಮಿಷನ್ ರೂಪದಲ್ಲಿ ಫ್ಲಿಪ್ ಕಾರ್ಟ್ ವೋಚರ್ ನಿಮಗೆ ದೊರಕುತ್ತದೆ!
ನೀವು ಶಾಪ್ಸಿಯಲ್ಲಿ ಲಭ್ಯವಾಗುವ ಉತ್ಪನ್ನಗಳ ವಿವರ, ಕ್ಯಾಟಲಾಗನ್ನು ನಿಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬಹುದು.
ನಿಮ್ಮ ಗೆಳೆಯರು ಅದನ್ನು ಗಮನಿಸಿ, ನಿಮಗೆ ಅದನ್ನು ಆರ್ಡರ್ ಮಾಡಲು ಹೇಳಿದಾಗ ಆರ್ಡರ್ ಮಾಡಿಕೊಡಬಹುದು.
ಎಷ್ಟು ಕಮಿಷನ್ ದೊರಕುತ್ತದೆ?:
ಕಮಿಷನ್ ಒಂದು ಉತ್ಪನ್ನದಿಂದ ಇನ್ನೊಂದಕ್ಕೆ ವಿಭಿನ್ನವಾಗಿದೆ. ಉದಾಹರಣೆಗೆ ಮೊಬೈಲ್ ಫೋನ್ ಗೆ 75 ರೂ. ಕಮಿಷನ್ ಇದ್ದರೆ, ಒಂದು ಕಂಪೆನಿಯ ಇಯರ್ ಫೋನ್ ಗೆ 235 ಕಮಿಷನ್ ಇದೆ. ಪವರ್ ಬ್ಯಾಂಕ್ ಗಳಿಗೆ 30 ರೂ. ಇದೆ. ವಾಶಿಂಗ್ ಮೆಷೀನ್ ಗಳಿಗೆ 500 ರೂ. ಗಳಿಂದ 800 ರೂ.ಗಳವರೆಗೂ ಕಮಿಷನ್ ದೊರಕುತ್ತದೆ.
ಗ್ರಾಹಕರು ಕೊಂಡ ಪದಾರ್ಥಗಳು ದೋಷದಿಂದ ಕೂಡಿದ್ದರೆ, ಅದಕ್ಕೆ ನಿಗದಿಪಡಿಸಿರುವ ರಿಟರ್ನ್ ದಿನಾಂಕದೊಳಿಗೆ ಹಿಂದಿರುಗಿಸುವ ಅವಕಾಶವೂ ಇದೆ. ರಿಟರ್ನ್ ಆದರೆ ಅದರ ಕಮಿಷನ್ ನಿಮಗೆ ದೊರಕುವುದಿಲ್ಲ.
ಈ ಮೂಲಕ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರನ್ನು ಇನ್ನಷ್ಟು ಜನರಿಗೆ ತಲುಪುವ ವಿಶ್ವಾಸ ಹೊಂದಿದೆ. ಎಷ್ಟೋ ಜನರಿಗೆ ಆನ್‍ಲೈನ್ ಮೂಲಕ ಹೇಗೆ ಬುಕ್ ಮಾಡುವುದು ಎಂದು ತಿಳಿದಿರುವುದಿಲ್ಲ. ಅಂಥವರ ಪರವಾಗಿ ಬುಕ್ ಮಾಡಿಕೊಡುವವರು ಇದರಿಂದ ಆದಾಯ ಗಳಿಸಬಹುದಾಗಿದೆ.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.