ಸ್ಮಾರ್ಟ್ ವಾಚ್ ತಯಾರಿಕೆಗೆ ಮುಂದಾದ ಫೇಸ್ ಬುಕ್
Team Udayavani, Jun 12, 2021, 4:09 PM IST
ಜನಪ್ರಿಯ ಸೋಷಿಯಲ್ ಮೀಡಿಯಾ ಆಪ್ ಫೇಸ್ ಬುಕ್ ಇದೀಗ ಮತ್ತೊಂದು ಮಹತ್ತರ ಹೆಜ್ಜೆಯೊಂದನ್ನು ಇಟ್ಟಿದೆ. ಸ್ಮಾರ್ಟ್ ವಾಚ್ ತಯಾರಿಕೆಗೆ ಫೇಸ್ ಬುಕ್ ಮುಂದಡಿ ಇಟ್ಟಿದೆ.
ಹೌದು, ಡ್ಯುಯೆಲ್ ಕ್ಯಾಮೆರಾ ಇರುವ ಸ್ಮಾರ್ಟ್ ವಾಚ್ ಒಂದನ್ನು ತಯಾರಿಸುತ್ತಿದೆ. ಈ ವಾಚ್ ಹಲವು ವೈಶಿಷ್ಟ್ಯಗಳನ್ನೂ ಒಳಗೊಂಡಿದೆ.
ವೈಶಿಷ್ಟ್ಯಗಳೇನು ?
ಫೇಸ್‌ಬುಕ್ ಸ್ಮಾರ್ಟ್‌ವಾಚ್ ಡಿಸ್‌ಪ್ಲೇಯೊಂದಿಗೆ ಎರಡು ಕ್ಯಾಮೆರಾಗಳನ್ನು ಹೊಂದಿರುತ್ತದೆಯಂತೆ. ಅಲ್ಲದೆ, ಈ ಎರಡು ಕ್ಯಾಮೆರಾಗಳನ್ನು ಫೋಟೋ, ವಿಡಿಯೋ ತೆಗೆಯಲು ಬೇರ್ಪಡಿಸಬಹುದು. ಒಂದು ಕ್ಯಾಮರಾ ವಾಚ್ ಡಿಸ್‌ಪ್ಲೇಯ ಮುಂಭಾಗದಲ್ಲಿ ಇದ್ದರೆ, ವಾಚ್‌ನ ಹಿಂಭಾಗದಲ್ಲಿ ಮತ್ತೊಂದು ಕ್ಯಾಮರಾ ಇರುತ್ತದೆ ಎನ್ನಲಾಗಿದೆ.
ಇನ್ನು ಯುಎಸ್‌ನಲ್ಲಿ ನೆಟ್‌ವರ್ಕ್ ವಾಹಕಗಳೊಂದಿಗೆ ಪಾಲುದಾರರಾಗಲು ಫೇಸ್‌ಬುಕ್ ಯೋಜಿಸುತ್ತಿದೆ. ಇದರಿಂದಾಗಿ ಮುಂಬರುವ ಸ್ಮಾರ್ಟ್ ವಾಚ್ ಎಲ್ ಟಿಇ ಸಂಪರ್ಕವನ್ನು ಬೆಂಬಲಿಸುತ್ತದೆ ಎನ್ನಲಾಗಿದೆ. ಸದ್ಯದ ಪ್ರಕಟಣೆಯ ಪ್ರಕಾರ, ಸ್ಮಾರ್ಟ್ ವಾಚ್ ಕಪ್ಪು, ಚಿನ್ನ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಸ್ಮಾರ್ಟ್ ವಾಚ್ ಅನ್ನು ಫಿಟ್ನೆಸ್ ಸಾಧನವಾಗಿ ಮಾರಾಟ ಮಾಡುವ ನಿರೀಕ್ಷೆಯಿರುವುದರಿಂದ ಹೃದಯ ಬಡಿತ ಮಾನಿಟರ್ ಅನ್ನು ಸಹ ಹೊಂದಿರಲಿದೆ ಎನ್ನಲಾಗಿದೆ.
ಮುಂದಿನ ವರ್ಷದ ಬೇಸಿಗೆ ವೇಳೆಗೆ ಅಂದರೆ 2022ರಲ್ಲಿ ಈ ಸ್ಮಾರ್ಟ್ವಾಚ್ ಬಿಡುಗಡೆಯೂ ಆಗಲಿದೆ ಎಂದು ಹೇಳಲಾಗಿದೆ. ಕಂಪನಿಯು ಈಗಾಗಲೇ ಈ ಸ್ಮಾರ್ಟ್‌ವಾಚಿನ 2ನೇ ಮತ್ತು 3ನೇ ತಲೆಮಾರಿನ ಆವೃತ್ತಿಗಳನ್ನು ನಂತರದ ವರ್ಷಗಳಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್ ಮಾಡಿದ್ದು, ಸದ್ಯಕ್ಕೆ ಈ ಫೇಸ್‌ಬುಕ್ ಸ್ಮಾರ್ಟ್‌ವಾಚ್ ಬೆಲೆ 400 ಡಾಲರ್ ಅಂದರೆ ಭಾರತದಲ್ಲಿ ಸುಮಾರು 29,000 ರೂ. ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.