ಕ್ಲಚ್ ಬೇರಿಂಗ್ ಸಮಸ್ಯೆಗೆ ಪರಿಹಾರ
Team Udayavani, Jun 28, 2019, 5:00 AM IST
ಕಾರುಗಳಲ್ಲಿ ಅಟೋಮ್ಯಾಟಿಕ್ ಮತ್ತು ಮ್ಯಾನುವಲ್ ಟ್ರಾನ್ಸ್ ಮಿಷನ್ (ಗಿಯರ್) ವ್ಯವಸ್ಥೆ ಇರುವುದು ಸಾಮಾನ್ಯ. ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಳನ್ನು ಬಳಸುವ ಕಾರುಗಳಲ್ಲಿ ಕ್ಲಚ್ ಇರುತ್ತದೆ. ಕ್ಲಚ್ ಎನ್ನುವುದು ಕಾರಿನ ಚಕ್ರ ಮತ್ತು ಎಂಜಿನ್‌ಗೆ ಸಂಪರ್ಕ ಬೆಸೆಯುತ್ತದೆ. ಈ ಸಂಪರ್ಕವನ್ನು ತಪ್ಪಿಸುವಂತೆ ಮಾಡುವುದು ಕ್ಲಚ್ ಪೆಡಲ್ ಕ್ಲಚ್ ಅದುಮಿದ ಕೂಡಲೇ ಎಂಜಿನ್ ಸಂಪರ್ಕ ತಪ್ಪಿ, ಕಾರಿನ ಚಕ್ರ ಸುಲಭವಾಗಿ ತಿರುಗುವಂತೆ ಮಾಡುತ್ತದೆ. ಕ್ಲಚ್ ಹೀಗೆ ಬೇಕೆಂದಾಗ ಸಂಪರ್ಕ ತಪ್ಪಿಸಲು, ಮರುಜೋಡಿಸಲು ಕಾರ್ಯನಿರ್ವಹಿಸುವುದು ಅದರಲ್ಲಿರುವ ಬೇರಿಂಗ್ ಇದಕ್ಕೆ ಕ್ಲಚ್ ಬೇರಿಂಗ್ ಎಂದು ಹೆಸರು. ಕ್ಲಚ್ ಒಳಗಿನ ಪ್ರಶರ್ ಪ್ಲೇಟನ್ನು ಒಳಕ್ಕೆ ತಳ್ಳಿ ಚಕ್ರಕ್ಕೆ ಎಂಜಿನ್ ಸಂಪರ್ಕ ತಪ್ಪಿಸಿ, ಸುಗಮವಾಗಿ ಗಿಯರ್ ಹಾಕುವಂತೆ ಮಾಡುವುದು ಕ್ಲಚ್ ಬೇರಿಂಗ್ ಕೆಲಸ. ಕ್ಲಚ್ ಬೇರಿಂಗ್ ಸಮಸ್ಯೆ ಸೃಷ್ಟಿಯಾದದ್ದೇ ಆದಲ್ಲಿ ಕೂಡಲೇ ಅದು ಗಮನಕ್ಕೆ ಬರುತ್ತದೆ.
ಕ್ಲಚ್ ಪೆಡಲ್ ವೈಬ್ರೇಷನ್
ಕ್ಲಚ್ ಪೆಡಲ್ ಅನ್ನು ಒತ್ತಿದಾಗಲೆಲ್ಲ ಮೃದುವಾದ ಅನುಭವ ಆಗಬೇಕು. ಯಾವುದೇ ಕಾರಣಕ್ಕೂ ಕ್ಲಚ್ ಪೆಡಲ್‌ನಲ್ಲಿ ವೈಬ್ರೇಷನ್ ಬರಬಾರದು. ಪ್ರಶರ್ ಪ್ಲೇಟ್ ಅನ್ನು ಒತ್ತಲು ಬೇರಿಂಗ್‌ಗೆ ಸಾಧ್ಯವಾಗ ದಂತಿದ್ದರೆ, ಹೆಚ್ಚು ವೈಬ್ರೇಷನ್ ಬರುತ್ತದೆ. ಕಾಲನ್ನು ನಿರಂತರವಾಗಿ ಕ್ಲಚ್ ಮೇಲೆ ಇಟ್ಟು ಚಾಲನೆ ಮಾಡುತ್ತಿದ್ದರೆ ಈ ಸಮಸ್ಯೆ ಬರಲು ಕಾರಣವಾಗುತ್ತದೆ. ಕಾರನ್ನು ಸರಿಯಾಗಿ ನಿಲ್ಲಿಸಿ ಸೂಕ್ಷ್ಮವಾಗಿ ಗಮನಿ ಸಿದರೆ, ಈ ವೈಬ್ರೇಷನ್ ಗಮನಕ್ಕೆ ಬರುತ್ತದೆ.
ಗಿಯರ್ ಹಾಕಲು ಸಮಸ್ಯೆ
ಬೇರಿಂಗ್ ಸುಗಮ ಕಾರ್ಯನಿರ್ವಹಣೆಗಾಗಿ ವಿಶೇಷ ಲ್ಯೂಬ್ರಿಕೇಷನ್ ಹಾಕಲಾಗಿರುತ್ತದೆ. ಲ್ಯೂಬ್ರಿಕೇಷನ್ ಕಡಿಮೆಯಾಗಿ ಸಮಸ್ಯೆಯಾದರೆ, ಕ್ಲಚ್ ತೀರಾ ಬಿಗಿಯಾಗಿದೆ ಎಂದು ನಿಮಗೆ ಅನಿಸಹುದು. ಕ್ಲಚ್ ಬಿಗಿಯಾದ್ದರಿಂದ ಸುಗಮವಾಗಿ ಗಿಯರ್ ಹಾಕುವುದಕ್ಕೂ ಸಮಸ್ಯೆಯಾಗಬಹುದು. ಬಿಗಿಯಾದ ಗಿಯರ್ ಇದ್ದರೆ ಟ್ರಾನ್ಸ್ ಮಿಷನ್‌ಗೆ ಹಾನಿಯಾಗಬಹುದು. ಸಮಸ್ಯೆ ಕಂಡುಬಂದ ಕೂಡಲೇ ಮೆಕ್ಯಾನಿಕ್ ಬಳಿ ತೋರಿಸಿ, ಇದಕ್ಕೆ ಪರಿಹಾರವೆಂದರೆ ಬೇರಿಂಗ್ ಬದಲಾಯಿಸುವುದು. ವಿವಿಧ ಮಾಡೆಲ್ ಕಾರುಗಳಿಗೆ ಅನುಗುಣವಾಗಿ 200ರೂ.ಗಳಿಂದ ಸಾವಿರ ರೂ.ವರೆಗೆ ದರವಿದೆ.
ಲಟಲಟ ಶಬ್ದ
ಬೇರಿಂಗ್ ಹಾಳಾದ್ದರಿಂದ ಲಟಲಟ ಶಬ್ದವೂ ಬರಬಹುದು. ಬೇರಿಂಗ್‌ನ ರೋಲರ್‌ಗಳು ಹತ್ತಿರವಾಗಿ ಅಥವಾ ಮಧ್ಯೆ ಜಾಗ ಸೃಷ್ಟಿಯಾಗಿ ಲಟಲಟ ಶಬ್ದ ಬರಬಹುದು. ಬೇರಿಂಗ್ ಹಳತಾದಷ್ಟೂ ಈ ಶಬ್ದ ಜೋರಾಗುತ್ತಾ ಹೋಗುತ್ತದೆ. ಜತೆಗೆ ಕೀ..ಕೀ.. ಎಂಬ ಗ್ರೈಂಡರ್ ರೀತಿ ಶಬ್ದ ಸೃಷ್ಟಿಯಾಗಬಹುದು. ಈ ಶಬ್ದಗಳು ವಾಹನದ ಟ್ರಾನ್ಸ್ ಮಿಷನ್ ಜಾಗದಿಂದ ಬರುವುದನ್ನು ಕೇಳಿ ಖಚಿತಪಡಿಸಿಕೊಳ್ಳಬಹುದಾಗಿದೆ. ಅಲ್ಲದೇ ಕ್ಲಚ್ ಪೆಡಲ್ ಒತ್ತಿದಾಗ ಈ ಶಬ್ದ ಹೆಚ್ಚಾಗುತ್ತದೆ.
- ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.