ಫೇಸ್‌ಬುಕ್, ವಾಟ್ಸ್‌ಆ್ಯಪ್ ,ಇನ್‌ಸ್ಟಾಗ್ರಾಂ ಸ್ಥಗಿತದಿಂದ ಟೆಲಿಗ್ರಾಂಗೆ ಲಾಭ
ಮೂರು ಸಾಮಾಜಿಕ ಜಾಲತಾಣಗಳ ನಿಷ್ಕ್ರಿಯತೆಯಿಂದ ಟೆಲಿಗ್ರಾಂಗೆ ಲಾಭ!
Team Udayavani, Oct 6, 2021, 9:00 PM IST
Telegram gains from Facebook, WhatsApp, Instagram shutdown
ನವದೆಹಲಿ: ಅ.3ರ ರಾತ್ರಿ 9 ಗಂಟೆಯಿಂದ ಫೇಸ್‌ಬುಕ್, ವಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣಗಳು ಜಗತ್ತಿನಾದ್ಯಂತ ನಿಷ್ಕ್ರಿಯವಾಗಿ, ಅಂದು ಮಧ್ಯರಾತ್ರಿ ಸುಮಾರು 2:30 ಸುಮಾರಿಗೆ ಪುನಃ ಚಾಲನೆಗೊಂಡಿದ್ದವು. ಇದಕ್ಕೆ ಡಿಎನ್‌ಎಸ್ ಸರ್ವರ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಕಾರಣವಾಗಿತ್ತು. ಆದರೆ, ಈ ಅವಧಿಯಲ್ಲಿ ಮತ್ತೂಂದು ಸಾಮಾಜಿಕ ಜಾಲತಾಣ ಟೆಲಿಗ್ರಾಂಗೆ 7 ಕೋಟಿ ಹೊಸ ಗ್ರಾಹಕರು ಸೇರ್ಪಡೆಗೊಂಡಿದ್ದಾರೆ!.
ಮೂರು ಪ್ರಮುಖ ಜಾಲತಾಣಗಳು ನಿಷ್ಕ್ರಿಯವಾದಾಗ ಟೆಲಿಗ್ರಾಂ ಕಾರ್ಯನಿರ್ವಹಿಸುತ್ತಿತ್ತು. ಅಲ್ಲದೆ, ಟೆಲಿಗ್ರಾಂ ವಾಟ್ಸ್‌ಆ್ಯಪ್‌ಗೆ ಸರಿಸಮಾನವಾಗಿದ್ದರಿಂದ ವಿಶ್ವದ ಅನೇಕರು ತಮ್ಮ ಸಂದೇಶ, ಚಿತ್ರಗಳು, ವಿಡಿಯೋಗಳನ್ನು ತಮಗೆ ಬೇಕಾದವರಿಗೆ ರವಾನಿಸಲು ಟೆಲಿಗ್ರಾಂನತ್ತ ಹೊರಳಿದ್ದಾರೆ.
ಟೆಲಿಗ್ರಾಂನ ಮಾಸಿಕ ಬಳಕೆದಾರರ ಸಂಖ್ಯೆ ಸರಾಸರಿ 50 ಕೋಟಿ. ಇದರ ಶೇ.10ರಷ್ಟು ಹೊಸ ಗ್ರಾಹಕರು ಆ ಐದಾರು ಗಂಟೆಗಳಲ್ಲಿ ಟೆಲಿಗ್ರಾಂಗೆ ಸಿಕ್ಕಿದ್ದಾರೆ! ಅಲ್ಲಿಗೆ, ಸಾಮಾಜಿಕ ಜಾಲತಾಣಗಳ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದು ವ್ಯವಸ್ಥೆ ನಿಷ್ಕ್ರಿಯವಾದರೆ ಮತ್ತೂಂದು ವ್ಯವಸ್ಥೆಗೆ ಅದು ಹೇಗೆ ಲಾಭವಾಗುತ್ತದೆ ಎಂಬುದಕ್ಕೆ ಇದು ಸಾಕ್ಷ್ಯ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.