650ಸಿಸಿ ಬೈಕ್; 2022 ಕವಾಸಾಕಿ ನಿಂಜಾ ಬಿಡುಗಡೆ
ಹಿಂದಿನ ಮಾಡೆಲ್‌ಗಿಂತ ಈ ಮಾಡೆಲ್‌ನ ಬೆಲೆಯಲ್ಲಿ 7 ಸಾವಿರ ರೂ. ಏರಿಕೆ ಮಾಡಲಾಗಿದೆ
Team Udayavani, Aug 18, 2021, 3:02 PM IST
ನವದೆಹಲಿ: ಕವಾಸಾಕಿ ಸಂಸ್ಥೆಯು ತನ್ನ 650ಸಿಸಿ ಬೈಕ್‌ನ 2022ರ ಮಾಡೆಲ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದಿನ ಮಾಡೆಲ್‌ನಲ್ಲಿರುವ ಸೌಲಭ್ಯಗಳನ್ನೇ 2022 ಕವಾಸಾಕಿ ನಿಂಜಾ 650 ಬೈಕ್‌ನಲ್ಲಿ ಮುಂದುವರಿಸಿದೆ.
ಇದನ್ನೂ ಓದಿ:ಯುದ್ಧ ಪೀಡಿತ ಅಫ್ಗಾನಿಸ್ತಾನದಲ್ಲಿ ಸಿಲುಕಿದ ಭಾರತೀಯರನ್ನು ಕರೆತರಲು ಪ್ರಯತ್ನ : ಸಿಂಧಿಯಾ
ಹೊಸದಾಗಿ ಪರ್ಲ್ ರೊಬೋಟಿಕ್ ವೈಟ್ ಕಲರ್ ಪರಿಚಯಿಸಲಾಗಿದೆ. ಮ್ಯಾಟ್ ಬ್ಲಾಕ್, ವೈಟ್ ಮತ್ತು ಹಸಿರು ಬಣ್ಣವಿರುವ ಈ ಬೈಕ್‌ನ ಬೆಲೆ 6.61 ಲಕ್ಷ ರೂ. ಈ ಹಿಂದಿನ ಮಾಡೆಲ್‌ಗಿಂತ ಈ ಮಾಡೆಲ್‌ನ ಬೆಲೆಯಲ್ಲಿ 7 ಸಾವಿರ ರೂ. ಏರಿಕೆ ಮಾಡಲಾಗಿದೆ. ಲೈಮ್ ಗ್ರೀನ್‌ಕಲರ್ ಬೈಕ್‌ನಲ್ಲೂ ಕೊಂಚ ಬದಲಾವಣೆ ಮಾಡ ಲಾಗಿದೆ. ಹಳದಿ ಹನಿಕಾಂಬ್ ಪ್ಯಾಟರ್ನ್ನ ಲ್ಲಿದ್ದ ಬೆಲ್ಲಿ ಪ್ಯಾನೆಲ್‌ನನ್ನು ಬಿಳಿ ಮತ್ತುಕೆಂಪು ಬಣ್ಣಕ್ಕೆ ಬದಲಿಸಲಾಗಿದೆ.
ವಾಟ್ಸ್‌ಆ್ಯಪ್ ಎಡಿಟಿಂಗ್ ಟೂಲ್
ವಾಟ್ಸ್‌ಆ್ಯಪ್ ಸಂಸ್ಥೆಯು ಹೊಸ ಫೀಚರ್‌ವೊಂದನ್ನು ಪರಿಚಯಿಸಿದೆ. ವಾಟ್ಸ್‌ಆ್ಯಪ್ ವೆಬ್‌ನಲ್ಲಿ ಚಿತ್ರಗಳನ್ನು ಎಡಿಟ್ ಮಾಡುವ ಟೂಲ್ ವೊಂದನ್ನು ಹೊಸ ಅಪ್‌ಡೇಟ್‌ನಲ್ಲಿ ಸೇರ್ಪಡೆ ಮಾಡಲಾಗಿದೆ.
ಬಳಕೆದಾರರು ಇದರ ಮೂಲಕ ಇಮೋಜಿಗಳು, ಸ್ಟಿಕರ್‌ಗಳು, ಸಂದೇಶಗಳನ್ನು ಸೇರಿಸಬಹು ದಲ್ಲದೇ, ಚಿತ್ರಗಳನ್ನುಕ್ರಾಪ್ ಮಾಡುವ, ತಿರುಗಿಸುವ(ರೊಟೇಟ್) ಅವಕಾಶವನ್ನೂ ನೀಡಲಾಗಿದೆ. ಈವರೆಗೆಕೇವಲ ಮೊಬೈಲ್‌ನ ಆ್ಯಂಡ್ರಾಯ್ಡ ಮತ್ತು ಐಒಎಸ್ ಆವೃತ್ತಿಗಳಲ್ಲಿ ಮಾತ್ರ ಎಡಿಟಿಂಗ್ ಫೀಚರ್ ನೀಡಲಾಗಿತ್ತು. ಈಗ ವೆಬ್/ಡೆಸ್ಕ್ ಟಾಪ್ ಆವೃತ್ತಿಯಲ್ಲೂ ಈ ಫೀಚರ್ ಲಭ್ಯವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.