ಹಾರುವ ಕಾರು ನನಸಾಗುವ ದಿನಗಳು ಹತ್ತಿರದಲ್ಲಿ
Team Udayavani, Jul 6, 2021, 5:02 PM IST
ಕಾರ್ಟೂನ್ ಶೋ ಗಳಲ್ಲಿ ತೋರಿಸುವಂತೆ, ಎಂದಾದರೂ ಕಾರು/ಬೈಕಿನಲ್ಲಿ ಆಕಾಶದೆತ್ತರಕ್ಕೆ ಹಾರಿ ಸಂಚಾರ ಮಾಡಬೇಕು ಎಂದು ಎಂದಾದರೂ ಕನಸು ಕಂಡಿದ್ದೀರಾ? ವಿಮಾನ, ಹೆಲಿಕಾಪ್ಟರ್ ಅಲ್ಲದೇ ನಮ್ಮದೇ ಆದ ವಾಹನದಲ್ಲಿ ಹಾರಾಡಬೇಕು ಎಂದು ನೀವು ಕನಸು ಕಾಣುತ್ತಿದ್ದರೆ, ಅದು ಶೀಘ್ರದಲ್ಲೇ ನನಸಾಗಬಹುದು ಎಂಬುವುದನ್ನು ನೀವು ನಂಬಲೇಬೇಕು!
ಕ್ಲೈನ್ ವಿಷನ್ ಎಂಬ ಕಂಪನಿಯು ಒಂದು ಹಾರುವ ಕಾರನ್ನು ತಯಾರಿಸಿದ್ದು, ಕಳೆದ ಜೂನ್ 28 ರಂದು ಸ್ಲೊವಾಕಿಯಾದ ನೈಟ್ರಾ ಮತ್ತು ಬ್ರಾಟಿಸ್ಲಾವಾ ನಗರಗಳ ನಡುವೆ ಒಂದು ಯಶಸ್ವಿ ಪರೀಕ್ಷಾ ಹಾರಾಟವನ್ನು ಪೂರ್ಣಗೊಳಿಸಿದೆ. ಈ ಮೂಲಕ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯುವತ್ತ ದಾಪುಗಾಲನ್ನು ಇಡುತ್ತಿದೆ. ಎರಡು ನಗರಗಳ ನಡುವೆ, ಈ ಹಾರುವ ಕಾರು ಸುಮಾರು 35 ನಿಮಿಷಗಳ ಕಾಲ ಗಾಳಿಯಲ್ಲಿ ಹಾರಾಡಿದೆ ಎಂದು ಅದರ ವಿನ್ಯಾಸಕರೊಬ್ಬರು, ಕ್ಲೈನ್ ವಿಷನ್‌ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಹೇಳುವಂತೆ, ರಸ್ತೆಯಲ್ಲಿ ತೆಗೆದುಕೊಳ್ಳುವ ಸಮಯಕ್ಕಿಂತಲೂ ವೇಗವಾಗಿ, ಹಾರುವ ಕಾರು ತನ್ನ ಪ್ರಯಾಣವನ್ನು ಪೂರ್ಣಗೊಳಿಸಿದೆ.
ಏನಿದು ಹಾರುವ ಕಾರು?
ಹಾರುವ ಕಾರು ಎನ್ನುವುದು ಒಂದು ರೀತಿಯ ವೈಯಕ್ತಿಕ ವಾಯು ವಾಹನ ಅಥವಾ ರಸ್ತೆಯಲ್ಲೂ ಸಂಚರಿಸಬಹುದಾದ ವಿಮಾನವೆಂದು ಹೇಳಬಹುದು. ಇದು ರಸ್ತೆ ಮತ್ತು ಗಾಳಿ, ಎರಡರಲ್ಲೂ ಸಂಚಾರಯೋಗ್ಯ ವಾಹನ ಎನಿಸಿದೆ. ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು, 20ನೇ ಶತಮಾನದ ಆರಂಭದಿಂದಲೂ ಅನೇಕ ಪ್ರಯೋಗಗಳು ನಡೆದಿವೆ. ಆದರೆ, ಇದುವರೆಗೆ ಯಾವುದೂ ಸಹ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡು ಮಾರುಕಟ್ಟೆಗೆ ಬರಲಿಲ್ಲ. ಇದೀಗ ಕ್ಲೈನ್ ವಿಷನ್ ಸಂಸ್ಥೆಯು ಹೊಸ ಭರವಸೆಯನ್ನು ಮೂಡಿಸಿದೆ.
ಪರಿಕಲ್ಪನೆ:
ಕ್ಲೈನ್ ವಿಷನ್ ಅವರ ಏರ್‌ಕಾರ್ ಹಲವಾರು ಕ್ರಿಯಾತ್ಮಕ ಘಟಕಗಳಿಂದ ಕೂಡಿದೆ. ಕುಳಿತುಕೊಳ್ಳುವ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವನ್ನು ನೀಡುವುದಲ್ಲದೆ, ಹಾರಾಟದ ಸಮಯದಲ್ಲಿ ಯಾವುದೇ ಅಲುಗಾಟವಿಲ್ಲದೆ, ರಸ್ತೆಯಲ್ಲಿ ಸಂಚರಿಸಿದ ಅನುಭವವನ್ನೇ ನೀಡಲಿದೆ. ಮಡಚುವ ರೆಕ್ಕೆಗಳು, ಪ್ಯಾರಾಚೂಟ್ ವ್ಯವಸ್ಥೆ ಇತ್ಯಾದಿ ತಂತ್ರಜ್ಞಾನಗಳೂ ಇದರಲ್ಲಿ ಕಾಣ ಸಿಗುತ್ತದೆ. ಸಾಂಪ್ರದಾಯಿಕ ವಿಮಾನದಲ್ಲಿರುವಂತೆ, ಉತ್ತಮ ರೇಖಾಂಶದ ಸ್ಥಿರತೆ ಮತ್ತು ಟೇಕ್-ಆಫ್ ಗುಣಲಕ್ಷಣಗಳೂ ಸಹ ಇದರಲ್ಲಿ ಕಾಣಬಹುದು.
ಏರ್ ಕಾರ್ ಗೆ ಒಂದು ಆಕರ್ಷಕ ರೂಪವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮೂರು, ನಾಲ್ಕು ಆಸನಗಳ ವಾಹನ,ಅವಳಿ ಇಂಜಿನ್ ಇತ್ಯಾದಿ ವೈಶಿಷ್ಟ್ಯಗಳನ್ನು ಪರಿಚಯಿಸುವುದಾಗಿ ಕಂಪನಿಯು ವಿಶ್ವಾಸ ವ್ಯಕ್ತಪಡಿಸಿದೆ. ಕಂಪನಿಯ ಸ್ಥಾಪಕ ಮತ್ತು ಏರ್‌ಕಾರ್ ಸಂಶೋಧಕ ಸ್ಟೀಫನ್ ಕ್ಲೈನ್ ಅವರು, ಈ ಕಾರು, ರಸ್ತೆ ಹಾಗೂ ಆಕಾಶ ಪ್ರಯಾಣದ “ಹೊಸ ಯುಗ”ವನ್ನು ಪ್ರಾರಂಭಿಸುತ್ತದೆ ಎಂದು ಆಶಿಸಿದ್ದಾರೆ.
ಕಾರು ಹಾಗೂ ವಿಮಾನ ಎರಡರ ವೈಶಿಷ್ಟ್ಯಗಳನ್ನು ಹೊಂದಿರುವ, ಏರ್‌ಕಾರ್‌ನಲ್ಲಿ, ಬಿಎಂಡಬ್ಲ್ಯು ಎಂಜಿನ್ ಹೊಂದಿದ್ದು, ಸಾಮಾನ್ಯ ಪೆಟ್ರೋಲ್-ಪಂಪ್ ಇಂಧನದಲ್ಲಿ ಚಲಿಸುತ್ತದೆ. ಕ್ಲೈನ್ ಅವರ ಪ್ರಕಾರ, ಇದು ಸುಮಾರು 1,000 ಕಿ.ಮೀ ದೂರ ಹಾಗೂ ಗರಿಷ್ಠ 8,200 ಅಡಿ ಎತ್ತರ ಹಾರಬಲ್ಲದು. ಇದುವರೆಗೆ, ಒಂದು ಹಾರಾಟದಲ್ಲಿ ಗರಿಷ್ಠ 40 ಗಂಟೆಗಳ ಕಾಲ ಗಾಳಿಯಲ್ಲಿ ಸಂಚಾರ ನಡೆಸಿದೆ. ಗಂಟೆಗೆ 170 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ರಸ್ತೆಯಲ್ಲಿಯೂ ಚಲಿಸಬಲ್ಲ ಈ ಏರ್‌ಕಾರ್, ಕಾರಿನಿಂದ ವಿಮಾನವಾಗಿ ರೂಪಾಂತರಗೊಳ್ಳಲು 2 ನಿಮಿಷ 15 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.
ಮರಳಿ ಕಾರಿನ ರೂಪ ಪಡೆಯುವಾಗ, ಅದರ ರೆಕ್ಕೆಗಳು ಕಾರಿನ ಬದಿಗಳಲ್ಲಿ ಮಡಚಿಕೊಳ್ಳುತ್ತದೆ. ಪ್ರಸ್ತುತ ಟ್ರಯಲ್ ನಡೆಸಿರುವ ಏರ್‌ಕಾರಿನಲ್ಲಿ ಟು-ಸೀಟರ್ (ಇಬ್ಬರು ಕುಳಿತುಕೊಂಡು ಹೋಗುವ ವಾಹನ) ಆಗಿದ್ದು, ಒಟ್ಟು 200 ಕೆಜಿ ಭಾರವನ್ನು ತಡೆದುಕೊಳ್ಳುವ ಶಕ್ತಿಯಿದೆ.
ಯಶಸ್ವಿ ಪರೀಕ್ಷಾ ಹಾರಾಟವನ್ನು ನಡೆಸಿರುವ ಏರ್‌ಕಾರ್ ಬಗ್ಗೆ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಬಹಳಷ್ಟು ನಿರೀಕ್ಷೆಗಳಿವೆ. ಪ್ರಸ್ತುತ ರಸ್ತೆ ಸಾರಿಗೆಯು ವಾಹನ ದಟ್ಟಣೆಯಿಂದ ಕೂಡಿದ್ದು, ವಾಯು ಸಾರಿಗೆಯು ಇದಕ್ಕೆ ಪರಿಹಾರವಾಗುವ ನಿರೀಕ್ಷೆಯಿದೆ.
2040 ರ ವೇಳೆಗೆ ಈ ಕ್ಷೇತ್ರದ ಮೌಲ್ಯ 1.5 ಟ್ರಿಲಿಯನ್ ಡಾಲರ್ (112 ಲಕ್ಷ ಕೋಟಿ ರೂಪಾಯಿ) ನಷ್ಟು ಆಗಬಹುದು ಎಂದು ಒಂದು ಕಂಪನಿ ಮೋರ್ಗನ್ ಸ್ಟಾನ್ಲಿ 2019ರಲ್ಲಿ ಊಹಿಸಿದ್ದರು. ಹೀಗಾಗಿ, ಪ್ರಸ್ತುತ ಅಸ್ತಿತ್ವದಲ್ಲಿರುವ ಸಾರಿಗೆ ಮೂಲಸೌಕರ್ಯಗಳ ದಟ್ಟಣೆಗೆ ಇದು ಸಂಭಾವ್ಯ ಪರಿಹಾರವೆಂದು ಪರಿಗಣಿಸಲಾಗಿದೆ.
ಏರ್‌ಕಾರ್ ಕಂಪನಿಯಾದ ಕ್ಲೈನ್ ವಿಷನ್ ಅವರು ಹೇಳಿಕೊಳ್ಳುವಂತೆ, ಅವರು ತಮ್ಮ ಹಾರುವ ಕಾರಿನ ಮೂಲಮಾದರಿಯನ್ನು ಅಭಿವೃದ್ಧಿಪಡಿಸಲು 2 ಮಿಲಿಯನ್ ಯೂರೋ (ರೂ.17 ಕೋಟಿ) ಗಿಂತಲೂ ಕಡಿಮೆ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ.
“ಕಂಪನಿಯು ಜಾಗತಿಕ ವಿಮಾನಯಾನ ಅಥವಾ ಟ್ಯಾಕ್ಸಿ ಮಾರಾಟದ ಒಂದು ಸಣ್ಣ ಪ್ರಮಾಣವನ್ನು ಸಹ ಆಕರ್ಷಿಸುವಲ್ಲಿ ಸಫಲವಾದರೆ, ಏರ್‌ಕಾರ್ ಭಾರಿ ಯಶಸ್ಸನ್ನು ಪಡೆಯುತ್ತದೆ. ಅಮೇರಿಕಾದಲ್ಲಿಯೇ, ಸುಮಾರು 40,000 ವಿಮಾನಗಳಿಗೆ ಬೇಡಿಕೆಗಳಿವೆ. ಅದರಲ್ಲಿ ಕನಿಷ್ಠ ಶೇ.5 ರಷ್ಟು ಬೇಡಿಕೆಯನ್ನು ನಾವು ಹಾರುವ ಕಾರಿನ ಕಡೆ ಸೆಳೆದರೆ, ನಮ್ಮ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಬಹುದು” ಎಂದು ಕ್ಲೈನ್ ವಿಷನ್‌ನ ಸಲಹೆಗಾರ ಮತ್ತು ಹೂಡಿಕೆದಾರ ಆಂಟನ್ ಜಜಾಕ್ ಅಭಿಪ್ರಾಯಪಟ್ಟಿದ್ದಾರೆ.
“ಇದು ಹೊಸ ವರ್ಗದ ಸಾರಿಗೆಯನ್ನು ತೆರೆಯುತ್ತದೆ ಮತ್ತು ಮೂಲತಃ ಕಾರುಗಳಿಗೆ ಕಾರಣವಾದ ಸ್ವಾತಂತ್ರ‍್ಯವನ್ನು ವ್ಯಕ್ತಿಗೆ ಹಿಂದಿರುಗಿಸುತ್ತದೆ” ಎಂದು ಕ್ಲೈನ್ ಹೇಳಿದರು. “ಇದು ವೈಜ್ಞಾನಿಕ ಕಾದಂಬರಿಯನ್ನು ವಾಸ್ತವಕ್ಕೆ ತಿರುಗಿಸಿದೆ.”
ಇನ್ನೂ ಮಾರುಕಟ್ಟೆ ಪ್ರವೇಶಿಸಿಲ್ಲ ಫ್ಲೈಯಿಂಗ್ ಬೈಸಿಕಲ್ಲು!
2013ರಲ್ಲಿ ಪ್ಯಾರಾವೆಲೊ ಎಂಬ ಬ್ರಿಟಿಷ್ ಕಂಪನಿಯೊಂದು ನಿರ್ಮಿಸಿದ್ದ ಹೊಸ ವಿನ್ಯಾಸದ ಬೈಸಿಕಲ್ ಒಂದು, ವಿಮಾನವಾಗಿ ರೂಪಾಂತರಗೊಂಡು ಹಾರಾಟ ನಡೆಸುವಲ್ಲಿ ಯಶಸ್ವಿಯಾಗಿತ್ತು. ಸುಮಾರು 4,000 ಅಡಿ ಎತ್ತರಕ್ಕೆ ಹಾರಬಲ್ಲ ಶಕ್ತಿಯಿದ್ದ ಬೈಸಿಕಲ್ ಅಂದು ಹಲವರ ಕನಸಿಗೆ ಆಶಾಕಿರಣವಾಗಿತ್ತು ಆದರೆ, ಅದು ಇನ್ನೂ ಮಾರುಕಟ್ಟೆ ಪ್ರವೇಶಿಸಿಲ್ಲ. ಈಗ ಎಲ್ಲಿದೆ ಎಂಬುವುದು ತಿಳಿದಿಲ್ಲ. ಹೀಗಿರುವಾಗ, ಕ್ಲೈನ್ ವಿಷನ್ ಕಂಪನಿಯ ಹಾರುವ ಕಾರು ಯಾವಾಗ ಮಾರುಕಟ್ಟೆಗೆ ಬರಬಹುದು ಎಂದು ಊಹಿಸಲೂ ಅಸಾಧ್ಯ.
ಸದ್ಯ ಕಾಲ್ಪನಿಕ, ಕಾರ್ಟೂನ್ ಚಿತ್ರಗಳಲ್ಲಿ ಮಾತ್ರ ನಮಗೆ ಕಾಣಸಿಗುವ ಹಾರುವ ಕಾರು, ಬೈಕುಗಳು ಮುಂದಿನ ದಿನಗಳಲ್ಲಿ ನಮ್ಮ ಕಣ್ಣ ಮುಂದೆ ಹಾರಿ ಹೋದರೂ ಅಚ್ಚರಿಯಿಲ್ಲ. ಆದರೆ, ಅಷ್ಟೇನೂ ಸುಲಭವಲ್ಲದಿದ್ದರೂ, ಸಾರಿಗೆ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಬಂದರೆ ಉತ್ತಮ.
– ಇಂದುಧರ ಹಳೆಯಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.