ಹ್ಯುಂಡೈನಿಂದ ವಿದ್ಯುತ್ ಚಾಲಿತ ಕಾರು ಬಿಡುಗಡೆ
Team Udayavani, Jul 11, 2019, 10:41 AM IST
ಬೆಂಗಳೂರು: ಪರಿಸರ ಕಾಳಜಿಗೆ ಒತ್ತು ನೀಡುತ್ತಿರುವ ಭಾರತದ ಜನತೆಯ ಅಭಿರುಚಿ ಅರಿತಿರುವ ಹ್ಯುಂಡೈ ಸಂಸ್ಥೆ, ಮೊದಲ ಬಾರಿಗೆ ವಿದ್ಯುತ್ ಚಾಲಿತ “ಕೋನಾ ಎಲೆಕ್ಟ್ರಿಕ್’ ಎಸ್ ಯುವಿ ಬಿಡುಗಡೆ ಮಾಡಿದೆ.
ನವದೆಹಲಿಯಲ್ಲಿ ಮಂಗಳವಾರ ಹ್ಯುಂಡೈ ಮೋಟಾರ್ ಇಂಡಿಯಾ ಲಿ., (ಎಚ್‌ಎಂಐಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಸ್. ಎಸ್.ಕಿಮ್ ಹಾಗೂ ಹಿರಿಯ ಅಧಿಕಾರಿಗಳು ವಾಹನವನ್ನು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಕಿಮ್, ಕೋನಾ ಎಲೆಕ್ಟ್ರಿಕ್ ವಾಹನ ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿದ್ದು ಆರು ಗಂಟೆಗಳಲ್ಲಿ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಎಂದರು.
ಪರಿಸರದ ಕಾಳಜಿಯುಳ್ಳ ಇಂದಿನ ಯುವಜನತೆಗೆ ಇಷ್ಟವಾಗುವಂತೆ ಎಸ್‌ಯುವಿಯನ್ನು
ವಿನ್ಯಾಸಗೊಳಿಸಲಾಗಿದೆ. ಆಧುನಿಕ ಎಸ್‌ಯುವಿ ತಂತ್ರಜ್ಞಾನದೊಂದಿಗೆ ದೂರ ಪ್ರಯಾಣದ ಚಾಲನೆಗೆ ಕೋನಾ ಪೂರಕವಾಗಿದೆ. ಪಶ್ಚಿಮ ಕರಾವಳಿಯ ಅತಿ ದೊಡ್ಡ ದ್ವೀಪ ನಿಸಿರುವ ಹವಾಯಿ ಸೂಚಕವಾಗಿ ಕೋನಾ ಎಂದು ಹೆಸರಿಡಲಾಗಿದೆ.
ಚೆನ್ನೈನಲ್ಲಿರುವ ಘಟಕದಲ್ಲಿ ಇದರ ಬಿಡಿಭಾಗಗಳ ಜೋಡಣೆಯಾಗಲಿದ್ದು, ಕ್ರಮೇಣ ಬಿಡಿ ಭಾಗಗಳು
ಮತ್ತು ಬ್ಯಾಟರಿ ಪ್ಯಾಕ್‌ಗಳನ್ನು ಸ್ಥಳೀಯವಾಗಿಯೇ ತಯಾರಿಸಲಾಗುವುದು. ಆದರೆ, ಚಾರ್ಜಿಂಗ್
ವ್ಯವಸ್ಥೆ ದೇಶದ 11 ನಗರಗಳಲ್ಲಿ ಮಾತ್ರವೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ವಿಶಿಷ್ಟತೆಗಳು: ಆಕರ್ಷಕ ವಿನ್ಯಾಸದ ಕೋನಾ, 6 ಏರ್‌ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,
ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಟಯರ್ ಪ್ರಷರ್, ಉದ್ದನೆಯ ವೀಲ್ ಬೇಸ್,
ಏರೋ ಟ್ಯೂನ್ ವೀಲ್ ಆರ್ಚ್, ಸುಪೀರಿಯರ್ ಡ್ರೈವಿಂಗ್ ಸ್ಟೆಬಿಲಿಟಿ, ಎಲ್‌ಇಡಿ ಲೈಟ್ ಸೇರಿ
ಇನ್ನಿತರ ವಿಶೇಷತೆಗಳನ್ನು ಹೊಂದಿದೆ. ವಿನೂತನ ಫ್ರಂಟ್ ಗ್ರಿಲ್, ಗ್ರಾಫಿಕ್ಸ್, ಕಟ್ಟಿಂಗ್ ಎಡ್ಜ್ ವಿನ್ಯಾಸ, ಚಾರ್ಜಿಂಗ್ ಪೋರ್ಟ್, ಮಾನಿಟರಿಂಗ್ ಸಿಸ್ಟಂ, ರಿಯರ್ ಕ್ಯಾಮೆರಾ ಇದರಲ್ಲಿದೆ. ಕೋನಾ ವಾಹನದ ಬೆಲೆ 25.3 ಲಕ್ಷ ರೂ.ನಿಂದ ಆರಂಭವಾಗಲಿದ್ದು, ಐದು ಬಣ್ಣಗಳಲ್ಲಿ ಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.