ಒಪ್ಪೋ ರೆನೋ 6 ಪ್ರೊ ಮತ್ತು ರೆನೋ 6 ಭಾರತದಲ್ಲಿ ಬಿಡುಗಡೆ
Team Udayavani, Jul 15, 2021, 8:39 PM IST
ನವ ದೆಹಲಿ: ಸ್ಮಾರ್ಟ್‌ಫೋನ್ ವಿಡಿಯೊಗ್ರಫಿಯಲ್ಲಿ ವಿಭಿನ್ನವಾದ ತಂತ್ರಜ್ಞಾನ ಉಳ್ಳ ಒಪ್ಪೊ ರೆನೊ6 ಪ್ರೊ 5ಜಿ ಮತ್ತು ರೆನೊ6 5ಜಿ ಎಂಬ ರೆನೊ ಸರಣಿಯ ಎರಡು ಮೊಬೈಲ್ ಫೋನ್ ಗಳನ್ನು ಒಪ್ಪೋ ಕಂಪೆನಿ ಭಾರತದಲ್ಲಿ ಬಿಡುಗಡೆ ಮಾಡಿದೆ.
ರೆನೊ6 ಪ್ರೊ 5ಜಿ ಮೊಬೈಲ್ ಫೋನ್ , ಮಾರಾಟ ಮಳಿಗೆಗಳು ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ರೂ. 39990 ಗೆ ಹಾಗೂ ರೆನೊ6 5ಜಿ ಫ್ಲಿಪ್‌ಕಾರ್ಟ್‌ನಲ್ಲಿ ರೂ.29990 ಗೆ ಜುಲೈ 20 ರಿಂದ ದೊರಕಲಿವೆ.
ಒಪ್ಪೊ ರೆನೊ ಸರಣಿಗಳಲ್ಲಿ ಉದ್ಯಮದಲ್ಲೇ ಮೊದಲು ಎನಿಸಿದ ಬೊಕೆ ಫ್ಲೇರ್ ಪೋರ್ಟೈಟ್ ವಿಡಿಯೊ, ಉದ್ಯಮದಲ್ಲೇ ಮುಂಚೂಣಿ ರೆನೊ ಗ್ಲೊ ವಿನ್ಯಾಸ ಮತ್ತು ಅಗ್ರಶ್ರೇಣಿಯ ಅನುಭವ ನೀಡುವ ಎಐ ಹೈಲೈಟ್ ವಿಡಿಯೊನಂಥ ವಿಶೇಷತೆಗಳನ್ನು ಹೊಂದಿದೆ. ರೆನೊ 6 ಸರಣಿಯ ರೆನೊ6 5ಜಿಯಲ್ಲಿ ಶಕ್ತಿಶಾಲಿ ಚಿಪ್‌ಸೆಟ್ ಎನಿಸಿದ ಮೀಡಿಯಾಟೆಕ್ ಡೈಮೆನ್ಸಿಟಿ 1200 ಹಾಗೂ ರೆನೊ6 5ಜಿಯಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 900 ಚಿಪ್‌ಸೆಟ್ ಅಳವಡಿಸಲಾಗಿದೆ. ರೆನೊ6 5ಜಿ ಮೀಡಿಯಾಟೆಕ್ ಡೈಮೆನ್ಸಿಟಿ 900 ಚಿಪ್‌ಸೆಟ್ ಹೊಂದಿರುವ ಭಾರತದ ಮೊಟ್ಟಮೊದಲ ಸ್ಮಾರ್ಟ್‌ಫೋನ್ ಆಗಿದೆ.
ಇದನ್ನೂ ಓದಿ : ಕ್ರೈಸ್ತ ಉದ್ಯಮಿ ಕಟ್ಟಿಸಿದ ವಿನಾಯಕ ದೇಗುಲ ಸಮಾಜಕ್ಕೆ ಸಿದ್ಧಿಯನ್ನು ನೀಡಲಿ: ಪಲಿಮಾರು ಶ್ರೀ
ರೆನೊ6 ಪ್ರೊ 5ಜಿ ಮತ್ತು ರೆನೋ6 5ಜಿ ಎರಡೂ ಹಿಂಭಾಗದಲ್ಲಿ ಎಐ 64ಎಂಪಿ ಕ್ವಾಡ್-ಕ್ಯಾಮೆರಾ ಸೆಟಪ್ ಮತ್ತು 32 ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿವೆ.
ಒಪ್ಪೋದ 10 ದಶಲಕ್ಷಕ್ಕಿಂತಲೂ ಹೆಚ್ಚು ಪೋರ್ಟೈಟ್ ಡೇಟಾಸೆಟ್‌ಗಳು ಮತ್ತು ಎಐ ಬೊಕೆ ಫ್ಲೇರ್ ಪೋರ್ಟೈಟ್ ವಿಡಿಯೋ ರಿಯಲ್‌ಟೈಮ್ ವಿಡಿಯೊ ಸಂಸ್ಕರಣಾ ವ್ಯವಸ್ಥೆಯ ಮೂಲಕ ಪೋರ್ಟೈಟ್ ವಿಡಿಯೊಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಇವೆಲ್ಲವೂ ಪೋರ್ಟೈಟ್ ವ್ಯಕ್ತಿಯನ್ನು ಸಹಜ ಮತ್ತು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತದೆ. ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳಲ್ಲಿ ಇದು ಲಭ್ಯವಿದೆ.
ಎಐ ಹೈಲೈಟ್ ವೀಡಿಯೊ ಸ್ವಯಂಚಾಲಿತವಾಗಿ ಪರಿಸರದ ಬೆಳಕನ್ನು ಪತ್ತೆ ಮಾಡುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ವೀಡಿಯೊ ಆಪ್ಟಿಮೈಸೇಶನ್ ಮಾಡಿಕೊಳ್ಳುತ್ತದೆ. ನೀವು ರಾತ್ರಿಯಲ್ಲಿ ಚಿತ್ರೀಕರಣ ಮಾಡುತ್ತಿರಲಿ, ಅಥವಾ ಹಗಲಿನ ವೇಳೆ ಪ್ರಬಲ ಬ್ಯಾಕ್‌ಲೈಟ್‌ನೊಂದಿಗೆ ಚಿತ್ರೀಕರಣ ಮಾಡುತ್ತಿರಲಿ, ಎಐ ಹೈಲೈಟ್ ವೀಡಿಯೊ ನಿಮಗೆ ಸ್ಪಷ್ಟವಾದ, ಪ್ರಖರವಾದ ಮತ್ತು ಹೆಚ್ಚು ಸ್ಪಷ್ಟವಾಗಿ ಬಣ್ಣದ ಪೋರ್ಟೈಟ್ ವೀಡಿಯೊಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ.
ಫೋನ್ ಗಳು 6.5-ಇಂಚಿನ 3ಡಿ ಬಾಗಿದ ಡಿಸ್‌ಪ್ಲೇ ಹೊಂದಿದ್ದು, 90ಎಚ್‌ಝೆಡ್ ರಿಫ್ರೆಶ್ ದರ ಮತ್ತು 180ಎಚ್‌ಝೆಡ್ ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಎದ್ದುಕಾಣುವ ದೃಶ್ಯ ಅನುಭವಕ್ಕಾಗಿ ಡಿಸ್‌ಪ್ಲೇ, ಎಚ್‌ಡಿಆರ್10+ ಪ್ರಮಾಣಿತವಾಗಿದೆ. ಈ ಡಿಸ್‌ಪ್ಲೇ ಉತ್ತಮ ಗುಣಮಟ್ಟದ ದೃಶ್ಯ ಅಂಶಕ್ಕಾಗಿ ನೆಟ್‌ಫ್ಲಿಕ್‌ಸ್ ಎಚ್‌ಡಿ ಮತ್ತು ಅಮೆಜಾನ್ ಪ್ರೆಮ್ ವಿಡಿಯೋ ಎಚ್‌ಡಿ / ಎಚ್‌ಡಿಆರ್ ಪ್ರಮಾಣೀಕರಿಸಲ್ಪಟ್ಟಿದೆ. ರೆನೋ6 ಪ್ರೊ 5ಜಿ ಕೇವಲ 7.6 ಮಿಮೀ ದಪ್ಪ ಮತ್ತು ಮತ್ತು 177 ಗ್ರಾಂ ತೂಕ ಹೊಂದಿದ್ದು, ರೆನೊ6 5ಜಿ 7.59 ಮಿಲಿಮೀಟರ್ ದಪ್ಪ ಹಾಗೂ 182 ಗ್ರಾಂ ತೂಕವನ್ನು ಹೊಂದಿದೆ.
ರೆನೊ6 ಪ್ರೊ 5ಜಿ, 12 ಜಿಬಿ ರ್ಯಾಮ್ ಮತ್ತು 256 ಜಿಬಿ ಆಂತರಿಕ ಸಂಗ್ರಹ ಹೊಂದಿದ್ದು, ರೆನೋ6 5ಜಿ 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸಂಗ್ರಹವನ್ನು ಹೊಂದಿದೆ.
ಇವೆರಡೂ 4500ಎಂಎಎಚ್ ಮತ್ತು 4300ಎಂಎಎಚ್ ಬ್ಯಾಟರಿ ಮತ್ತು 65ಡಬ್ಲ್ಯು ಸೂಪರ್ ವೂಕ್ 2.0 ಚಾರ್ಜರ್ ಅನ್ನು ಹೊಂದಿದೆ. ಕೇವಲ 31 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ ಎಂದು ಕಂಪನಿ ತಿಳಿಸಿದೆ.
ಇದರ ಜತೆಗೆ ಎಂಕೋ ಎಕ್ಸ್ ಟ್ರೂ ವೈರ್‌ಲೆಸ್ ಶಬ್ದ ನಿರೋಧಕ ಇಯರ್‌ಫೋನ್‌ಗಳ ನೀಲಿ ಬಣ್ಣದ ಆವೃತ್ತಿ ಬಿಡುಗಡೆ ಮಾಡಿದೆ.
ಇದಕ್ಕೆ 7 ದಿನಗಳವರೆಗೆ 1000 ರೂ.ಗಳ ಬೆಲೆಕಡಿತ ಇದ್ದು ಈಗ ರೂ. 8990 ಕ್ಕೆ ಲಭ್ಯವಿರುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ
ಇದನ್ನೂ ಓದಿ : ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆ : ಕಪಿಲ ನದಿ ಪಾತ್ರದಲ್ಲಿ ಪ್ರವಾಹ ಭೀತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
MUST WATCH
ಹೊಸ ಸೇರ್ಪಡೆ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.