ಆ್ಯಪಲ್ ನ ಮೊದಲ Headphone ಬಿಡುಗಡೆ: ಇದರ ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ
Team Udayavani, Dec 9, 2020, 1:57 PM IST
![apple-headphone](https://www.udayavani.com/wp-content/uploads/2020/12/apple-headphone-620x372.jpg)
![apple-headphone](https://www.udayavani.com/wp-content/uploads/2020/12/apple-headphone-620x372.jpg)
ನವದೆಹಲಿ: ಹಲವು ವಾರಗಳ ವದಂತಿಗಳಿಗೆ ತೆರ ಬಿದ್ದಿದ್ದು, ಆ್ಯಪಲ್ ಸಂಸ್ಥೆ ಕೊನೆಗೂ ತನ್ನ ಹೊಸ ಉತ್ಪನ್ನ ‘ಹೆಡ್ ಫೋನ್’ ಬಿಡುಗಡೆಗೊಳಿಸಿದೆ. ಆ್ಯಪಲ್ ನ ಮೊದಲ ಹೆಡ್ ಫೋನ್ ಸೀರೀಸ್ ಅನ್ನು Airpods Max ಎಂದು ಕರೆಯಲಾಗಿದೆ.
ಸುಧಾರಿತ ಸಾಫ್ಟ್ ವೇರ್ ತಂತ್ರಾಂಶವನ್ನು ಹೊಂದಿರುವ ಈ ಹೆಡ್ ಫೋನ್ ನಲ್ಲಿ ಆಡಿಯೋ ಗುಣಮಟ್ಟ ಅತ್ಯುತ್ತಮವಾಗಿದೆ.ಇದರ ಬೆಲೆ $549 (ಭಾರತ-59,900) ಎಂದು ವರದಿಯಾಗಿದ್ದು, ಡಿಸೆಂಬರ್ 15ರಿಂದ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಆ್ಯಡಾಪ್ಟಿವ್ ಈಕ್ಯೂ ಹೊಂದಿರುವ ಏರ್ ಪಾಡ್ಸ್ ಮ್ಯಾಕ್ಸ್ ನಲ್ಲಿ ಆಡಿಯೋ ಅತ್ಯಧ್ಬುತವಾಗಿ ಕೇಳಿಬರಲಿದೆ. ಇದಕ್ಕಾಗಿ Active Noise Cancellation, Transparency mode, and spatial audio ಮುಂತಾದ ಸೌಲಭ್ಯ ನೀಡಲಾಗಿದೆ. ಈ ಹೆಡ್ ಫೋನ್ ಸ್ಪೇಸ್ ಗ್ರೇ, ಸಿಲ್ವರ್, ಸ್ಕೈ ಬ್ಲೂ, ಗ್ರೀನ್ ಮತ್ತು ಪಿಂಕ್ ಕಲರಿನಲ್ಲಿ ಲಭ್ಯವಿದೆ.
ಇದನ್ನೂ ಓದಿ: ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಪಾರ್ಥಿವ್ ಪಟೇಲ್
ಏರ್ ಪಾಡ್ ಮ್ಯಾಕ್ಸ್, ಬಳಕೆದಾರರಿಗೆ ಆರಾಮದಾಯಕ ಅನುಭವ ನೀಡಲಿದೆ. ಫ್ಲೆಕ್ಸಿಬಿಲಿಟಿ ಇರುವುದರಿಂದ ಇದರ ಬಳಕೆ ಸುಲಭ. ಹೆಡ್ ಪೋನ್ ನಲ್ಲಿ ವಾಲ್ಯೂಮ್ ಕಂಟ್ರೋಲ್, ಪ್ಲೇ ಮತ್ತು Pause, ಸ್ಕಿಪ್ ಬಟನ್, ಸಿರಿ ಆಕ್ಟಿವೇಟ್ ಬಟನ್, ಫೋನ್ ಕರೆಗಳನ್ನು ಆನ್ ಮತ್ತು ಎಂಡ್ ಮಾಡುವ ಫೀಚರ್ ಗಳನ್ನು ನೀಡಲಾಗಿದೆ.
ಮಾತ್ರವಲ್ಲದೆ ಹೆಡ್ ಪೋನ್ ನಲ್ಲಿ ಆಟೋಮ್ಯಾಟಿಕ್ ಸೆನ್ಸಾರ್ ಆಯ್ಕೆ ನೀಡಲಾಗಿದ್ದು, ಒಮ್ಮೆ ಧರಿಸಿದ ಕೂಡಲೇ ಸ್ಮಾರ್ಟ್ ಪೋನ್, ವಾಚ್ ಅಥವಾ ‘ಸಿರಿ’ಗೆ ಕನೆಕ್ಟ್ ಆಗುವುದು.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ಕಿರುತೆರೆ ನಟಿ, ನಿರೂಪಕಿ ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್](https://www.udayavani.com/wp-content/uploads/2025/02/jio-150x100.jpg)
![JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್](https://www.udayavani.com/wp-content/uploads/2025/02/jio-150x100.jpg)
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
![drdo](https://www.udayavani.com/wp-content/uploads/2025/02/drdo-150x83.jpg)
![drdo](https://www.udayavani.com/wp-content/uploads/2025/02/drdo-150x83.jpg)
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
![PM-Modi-Paris](https://www.udayavani.com/wp-content/uploads/2025/02/PM-Modi-Paris-150x90.jpg)
![PM-Modi-Paris](https://www.udayavani.com/wp-content/uploads/2025/02/PM-Modi-Paris-150x90.jpg)
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
![India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!](https://www.udayavani.com/wp-content/uploads/2025/02/Fast1-150x76.jpg)
![India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!](https://www.udayavani.com/wp-content/uploads/2025/02/Fast1-150x76.jpg)
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
![GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್](https://www.udayavani.com/wp-content/uploads/2025/02/aaa-150x88.jpg)
![GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್](https://www.udayavani.com/wp-content/uploads/2025/02/aaa-150x88.jpg)
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್