ಥಾಮ್ಸನ್ ಕಂಪನಿಯಿಂದ ಭಾರತದ ಅತಿ ಅಗ್ಗದ ಸ್ಮಾರ್ಟ್ ಟಿವಿ ಬಿಡುಗಡೆ
Team Udayavani, Jun 28, 2018, 6:13 PM IST
ಕಳೆದ ಒಂದೂವರೆ ದಶಕಗಳ ಹಿಂದೆ ಭಾರತದ ದೂರದರ್ಶನ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದ ಫ್ರಾನ್ಸ್ ಮೂಲದ ಥಾಮ್ಸನ್ ಕಂಪನಿ ಅನಂತರ ಹೇಳ ಹೆಸರಿಲ್ಲದೆ ಹೋಗಿತ್ತು ಆದರೆ ಈಗ ಮತ್ತೆ ಅದೇ ಕಂಪನಿ ಭಾರತದಲ್ಲಿ 5 ವಿವಿಧ ಬಗೆಯ ಅತಿ ಅಗ್ಗದ ಟಿವಿಯನ್ನು ಬಿಡುಗಡೆಗೊಳಿಸಿ ಇತರ ಪ್ರಖ್ಯಾತ ಕಂಪನಿಗಳಿಗೆ ಸೆಡ್ಡು ಹೊಡೆದಿದೆ. ಇವುಗಳಲ್ಲಿ 3 ಸ್ಮಾರ್ಟ್ ಎಲ್.ಇ.ಡಿ ಟಿವಿ ಹಾಗೂ 3 ಸ್ಮಾರ್ಟ್ ಅಲ್ಲದ ಮಾಮೂಲಿ ಎಲ್.ಇ.ಡಿ ಟಿವಿಯನ್ನು ಬಿಡುಗಡೆಗೊಳಿಸಿದೆ.
B 9 ಶ್ರೇಣಿಯಲ್ಲಿ 2 ಸ್ಮಾರ್ಟ್ ಟಿವಿ ಇದ್ದು
◆ 32 ಇಂಚಿನ ಹೆಚ್.ಡಿ – 720p ನ ಬೆಲೆ – 13,499 ರೂ.
◆ 40 ಇಂಚಿನ ಫುಲ್ ಹೆಚ್.ಡಿ ಬೆಲೆ – 19,999 ರೂ.
UD 9 ಶ್ರೇಣಿಯಲ್ಲಿ
◆ 43 ಇಂಚಿನ 4k ಹೆಚ್.ಡಿ ಟಿವಿ – 27,999 ರೂ. ಲಭ್ಯವಿದೆ.
ಇವುಗಳಲ್ಲಿ ಯೌಟ್ಯೂಬ್, ಹಾಟ್ ಸ್ಟಾರ್ ಸೇರಿದಂತೆ ಅನೇಕ ಆಪ್ಸ್ ಮುಂಗಡವಾಗಿ ಇರಲಿದ್ದು ಹಾಗೂ ಆಪ್ ಸ್ಟೋರ್’ನಿಂದ ನಮಗೆ ಬೇಕಾದ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದು.
ವೈ-ಫೈ / RJ 45 ಕೇಬಲ್ ಬ್ರಾಡ್ಬ್ಯಾಂಡ್ ಮೂಲಕ ಇಂಟರ್ನೆಟ್ ಚಲಾಯಿಸಬಹುದಾಗಿದೆ.
1GB ಯ Ram ಹಾಗೂ 8 GB ಯ ಆಂತರಿಕ ಸಂಗ್ರಹವನ್ನು ನೀಡಲಾಗಿದೆ.
ಉತ್ತಮ ಗುಣಮಟ್ಟದ ಪರದೆ ಹೊಂದಿದ್ದು,
20 W ನ ಉತ್ಕೃಷ್ಟ ಗುಣಮಟ್ಟದ ಧ್ವನಿವರ್ಧಕಗಳಿವೆ.
ಸದ್ಯ ಇದು ಒನ್ಲೈನ್’ಲ್ಲಿ ಫ್ಲಿಪ್ಕಾರ್ಟ್’ನ ಮೂಲಕ ಮಾರಾಟ ಮಾಡಲಾಗುತ್ತಿದ್ದು ಕೆಳಗಿನ ಲಿಂಕ್ ಮೂಲಕ ಭೇಟಿ ಕೊಟ್ಟು ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು ಹಾಗೂ ಖರೀದಿಸಬಹುದು.
http://fkrt.it/TlzLxLuuuN
ಹಾಗೆಯೇ ಇದರೊಂದಿಗೆ ಸ್ಮಾರ್ಟ್ ರಹಿತ ಹೆಚ್.ಡಿ ಟಿವಿಗಳನ್ನು ಬಿಡುಗಡೆ ಮಾಡಿದ್ದು ಅವುಗಳ ಬೆಲೆ
24 ಇಂಚಿನ ಹೆಚ್. ಡಿ – 720p ಬೆಲೆ – 8,999 ರೂ.
32 ಇಂಚಿನ ಹೆಚ್.ಡಿ – 720p ಬೆಲೆ – 11,499 ರೂ.
48 ಇಂಚಿನ ಫುಲ್ ಹೆಚ್.ಡಿ ಬೆಲೆ – 26,999ರೂಗೆ ಲಭ್ಯವಿದೆ.
ದೇಶಾದ್ಯಂತ 350ಕ್ಕೂ ಹೆಚ್ಚು ಗ್ರಾಹಕ ಕೇಂದ್ರಗಳಿದ್ದು.ಈ ಎಲ್ಲ ಉತ್ಪನ್ನಗಳ ಮೇಲೂ 1 ವರ್ಷದ ವ್ಯಾರಂಟಿ ಇದ್ದು, ಇನ್ನೂ 2 ವರ್ಷಗಳ ಹೆಚ್ಚುವರಿ ವ್ಯಾರಂಟಿಯನ್ನು ಹೆಚ್ಚುವರಿ ಹಣ ಕೊಟ್ಟು ಕೊಳ್ಳಬಹುದು.
*ಸೂರಜ್ ಅಣ್ವೇಕರ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.