ಜಪಾನ್‌ ರಾಜಧಾನಿ ಟೋಕಿಯೊದಲ್ಲಿದೆ ಪಾರದರ್ಶಕ ಶೌಚಾಲಯ


Team Udayavani, Sep 25, 2020, 5:27 PM IST

Japan 3

ಮಣಿಪಾಲ: ಹಲವು ಆವಿಷ್ಕಾರ ಮತ್ತು ಜನರ ಪರಿಶ್ರಮಗಳಿಗೆ ಹೆಸರುವಾಸಿಯಾಗಿರುವ ಜಪಾನ್‌ ಇದೀಗ ಮತ್ತೆ ಸುದ್ದಿಯಲ್ಲಿದೆ.

ರಾಜಧಾನಿ ಟೋಕಿಯೊದಲ್ಲಿನ ಉದ್ಯಾನವನಗಳಲ್ಲಿ ಪಾರದರ್ಶಕ ಸಾರ್ವಜನಿಕ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ.

ಅಯ್ಯೋ ಪಾರದರ್ಶಕ ಶೌಚಾಲಯವಾ? ಅದನ್ನು ಹೇಗೆ ಬಳಸುವುದು? ಎಂದು ಮೂಗುಮುರಿಯಬೇಡಿ.

ಹೌದು ಇಂತಹದೊಂದು ಜಪಾನ್‌ನಲ್ಲಿ ಇದೆ. ಮಾತ್ರವಲ್ಲದೇ ಜನರು ಬಳಸುತ್ತಿದ್ದಾರೆ.

ಶೌಚಾಲಯ ಸ್ವಚ್ಛವಾಗಿದೆಯೇ ಮತ್ತು ಒಳಗೆ ಯಾರೂ ಇಲ್ಲ ಎಂಬುದನ್ನು ಜನರು ಸುಲಭವಾಗಿ ತಿಳಿದುಕೊಳ್ಳಬೇಕು ಎಂಬ ಕಾರಣಕ್ಕೆ ಪಾರದರ್ಶಕ ಶೌಚಾಲಯವನ್ನು ಸ್ಥಾಪಿಸಲಾಗಿದೆ.

ಶೌಚಾಲಯದ ಸಂಪೂರ್ಣ ಚಿತ್ರಣವನ್ನು ಜನರು ಹೊರಗಿನಿಂದ ನೋಡಬಹುದು. ಆದರೆ ಒಳಗೆ ಜನರು ಇರುವಾಗ ನೋಡಲು ಸಾಧ್ಯವಾಗುವುದಿಲ್ಲ. ಇದು ಜಪಾನ್‌ ಟಾಯ್ಲೆಟ್‌ನ ವಿಶೇಷತೆ. ಶೌಚಾಲಯದ ನಿರ್ಮಾಣದಲ್ಲಿ ಸ್ಮಾರ್ಟ್‌ ಗ್ಲಾಸ್‌ ಅನ್ನು ಬಳಸಲಾಗಿದೆ. ಅವುಗಳನ್ನು ವಿಶ್ವದ ಹೆಸರಾಂತ ಸೃಜನಶೀಲ ವಾಸ್ತುಶಿಲ್ಪಿ ಶಿಗೇರು ಬೆನ್‌ ಅಭಿವೃದ್ಧಿಪಡಿಸಿದ್ದಾರೆ. ಇವರು ಮರುಬಳಕೆಯ ವಸ್ತುಗಳಲ್ಲಿ ನಿರ್ಮಾಣ ಕಾರ್ಯವನ್ನು ಮಾಡುವುದರಲ್ಲಿ ಪ್ರವೀಣರು.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ
ಪಾರದರ್ಶಕ ಶೌಚಾಲಯ ಎಂದ ಕೂಡಲೇ ಬಸ್‌, ವಿಮಾನ ಅಥವ ರೈಲು ನಿಲ್ದಾಣದ ಒಳಗೆ ಪಾರದರ್ಶಕ ವಿಶ್ರಾಂತಿ ಕೋಣೆಗಳಲ್ಲಿ ಕುಳಿತಿರುವ  ಜನರ ದೃಶ್ಯ ನೆನಪಿಗೆ ಬರುತ್ತದೆ. ಒಳಗೆ ಕುಳಿತುಕೊಳ್ಳುವ ಜನರು ನಿಮ್ಮನ್ನು ನೋಡುವ ದೃಶ್ಯ ನಿಮ್ಮ ಮನಸ್ಸಿನಲ್ಲಿ ಪ್ರತಿಫ‌ಲನಗೊಳ್ಳುತ್ತದೆ. ಹೆಚ್ಚಿನ ಜನರು ಇದೇ ರೀತಿ ಅರ್ಥಮಾಡಿಕೊಂಡಿರುತ್ತಾರೆ.

ಆದರೆ ಅದು ಹಾಗಲ್ಲ. ಈ ಶೌಚಾಲಯದ ನಿರ್ಮಾಣದಲ್ಲಿ ಸ್ಮಾರ್ಟ್‌ ಗ್ಲಾಸ್‌ ಬಳಸಲಾಗಿದೆ. ಒಬ್ಬ ವ್ಯಕ್ತಿಯು ಶೌಚಾಲಯದೊಳಗೆ ಹೋಗಿ ಬಾಗಿಲು ಲಾಕ್‌ ಮಾಡಿದಾಗ, ಪಾರದರ್ಶಕವಾಗಿರುವ ಶೌಚಾಲಯದ ಗೋಡೆಯು ಬದಲಾಗುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ಒಳಗೆ ಕುಳಿತ ವ್ಯಕ್ತಿಯು ಹೊರ ಭಾಗದಲ್ಲಿ ನಡೆಯುತ್ತಿರುವ ಚಟುವಟಿಕೆ ಮತ್ತು ಜನರ ಚಲನವಲನಗಳನ್ನು ನೋಡಬಹುದು. ಆದರೆ ಹೊರಗಿನ ವ್ಯಕ್ತಿಗೆ ಒಳಗೆ ನೋಡಲು ಸಾಧ್ಯವಾಗುವುದಿಲ್ಲ. ಇದು ಜಪಾನ್‌ ಟಾಯ್ಲೆಟ್‌ ಯೋಜನೆಯ ವಿಶೇಷ ಭಾಗವಾಗಿದೆ.

ಇದನ್ನು ನಿಪ್ಪಾನ್‌ ಫೌಂಡೇಶನ್‌ ಉದ್ಯಾನವನಗಳಲ್ಲಿ ಸ್ಥಾಪಿಸಲಾಗಿದೆ. ಜನರ ಅಗತ್ಯಕ್ಕೆ ತಕ್ಕಂತೆ ಈ ಶೌಚಾಲಯಗಳನ್ನು ಯೆಯೋಗಿ ಫ‌ುಕಮಾಚಿ ಮಿನಿ ಪಾರ್ಕ್‌ ಮತ್ತು ಹರು-ನೋ-ಒಗಾವಾ ಸಮುದಾಯ ಉದ್ಯಾನವನದಲ್ಲಿ ಸ್ಥಾಪಿಸಲಾಗಿದೆ. ಜನರ ಅಗತ್ಯಕ್ಕೆ ಅನುಗುಣವಾಗಿ ಇದನ್ನು ತಯಾರಿಸಲಾಗಿದೆ. ಪಾರದರ್ಶಕ ಗಾಜಿನ ಗೋಡೆಗಳು ಹೊರಗಿನ ಜನರಿಗೆ ಗೋಚರಿಸುತ್ತವೆ ಮತ್ತು ಅದು ಸ್ವಚ್ಛವಾಗಿದೆಯೇ ಎಂದು ನಿರ್ಧರಿಸಲು ಅವರಿಗೆ ಸಹಾಯ ಮಾಡುತ್ತದೆ.

ಅವನು ಶೌಚಾಲಯಕ್ಕೆ ಪ್ರವೇಶಿಸಿ ಬಾಗಿಲು ಮುಚ್ಚಿದ ಬಳಿಕ 4 ಗೋಡೆಗಳು ಅಪಾರದರ್ಶಕವಾಗುತ್ತವೆ. ಟೋಕಿಯೊ ಟಾಯ್ಲೆಟ್‌ ಪ್ರಾಜೆಕ್ಟ್ ವೆಬ್‌ಸೈಟ್‌ ಪ್ರಕಾರ, ಯಾರಾದರೂ ಸಾರ್ವಜನಿಕ ರೆಸ್ಟ್‌ ರೂಂಗೆ ಹೋದಾಗ ಮಾಡುವ ಎರಡು ಮುಖ್ಯ ವಿಷಯಗಳ ನೋಡುತ್ತಾರೆ. ಮೊದಲನೆಯದಾಗಿ ಅದು ಸ್ವಚ್ಛವಾಗಿದೆಯೇ? ಎರಡನೆಯದಾಗಿ ಯಾರಾದರೂ ಒಳಗೆ ಇದ್ದಾರೆಯೇ ಎಂಬುದಾಗಿ ಜನ ತಿಳಿದುಕೊಳ್ಳಲು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಜಪಾನ್‌ ಈ ಹೊಸ ಮಾದರಿಯ ಟಾಯ್ಲೆಟ್‌ ಅನ್ನು ಪರಿಚಯಿಸಿದೆ.

 

 

 

ಟಾಪ್ ನ್ಯೂಸ್

Ashok-haranahalli

Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ

1-udu

Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ

1-BINIL

Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

ಜ. 14-16: ಮಾರಣಕಟ್ಟೆಯಲ್ಲಿ ಮಕರ ಸಂಕ್ರಾಂತಿ

ಜ. 14-16: ಮಾರಣಕಟ್ಟೆಯಲ್ಲಿ ಮಕರ ಸಂಕ್ರಾಂತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ ಇನ್ನು ಎಲ್ಲರಿಗೂ ಲಭ್ಯ

WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ ಇನ್ನು ಎಲ್ಲರಿಗೂ ಲಭ್ಯ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Ashok-haranahalli

Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ

Mahakumbaha1

Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ

1-udu

Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ

1-palak

ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್‌

suicide (2)

Kota ಸರಣಿ ಸುಸೈ*ಡ್‌ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.