ಟ್ರೈಂಫ್ ಸ್ಟ್ರೀಟ್ ಸ್ಕ್ಯಾಂಬ್ಲರ್ ಬಿಡುಗಡೆ
ಸಂಸ್ಥೆಯು ತನ್ನ ಬಿಎಸ್4 ಬೈಕಿಗಿಂತ ಈ ಬೈಕಿನ ಬೆಲೆಯಲ್ಲಿ 80 ಸಾವಿರ ರೂ. ಹೆಚ್ಚಳ ಮಾಡಿದೆ.
Team Udayavani, Oct 13, 2021, 4:09 PM IST
ನವದೆಹಲಿ:ಟ್ರೈಂಫ್ ಮೋಟಾರ್ ಸೈಕಲ್ ಸಂಸ್ಥೆಯು ಟ್ರಿಯಂಪ್ ಸ್ಟ್ರೀಟ್ ಸ್ಕ್ಯಾಂಬ್ಲರ್ ಬೈಕನ್ನು ಬಿಡುಗಡೆ ಮಾಡಿದೆ. ಈ ಬೈಕು 900ಸಿಸಿ ಪ್ಯಾರೆಲಲ್ ಟ್ವಿನ್ ಇಂಜಿನ್ ಹೊಂದಿದೆ. ಜೆಟ್ ಬ್ಲಾಕ್, ಅರ್ಬನ್ ಗ್ರೇ, ಡುಯಲ್ ಟೋನ್ ಮ್ಯಾಟ್ ಖಾಕಿ ಮತ್ತು ಮ್ಯಾಟ್ ಐರನ್‌ಸ್ಟೋನ್ ಎಂಬ ಬಣ್ಣಗಳು ಇದರಲ್ಲಿ ಲಭ್ಯ.
5 ಗೇರ್ ಟ್ರಾನ್ಸ್‌ಮಿಷನ್ ಇರುವ ಈ ಬೈಕ್‌ನ ಬೆಲೆ 9.35 ಲಕ್ಷ ರೂ.(ಎಕ್ಸ್ ಶೋ ರೂಂ). ಸಂಸ್ಥೆಯು ತನ್ನ ಬಿಎಸ್4 ಬೈಕಿಗಿಂತ ಈ ಬೈಕಿನ ಬೆಲೆಯಲ್ಲಿ 80 ಸಾವಿರ ರೂ. ಹೆಚ್ಚಳ ಮಾಡಿದೆ.
ಇದನ್ನೂ ಓದಿ:ಅಪ್ರಾಪ್ತ ಮಗಳ ಮೇಲೆ ಸತತ ಅತ್ಯಾಚಾರ; ತಂದೆ ಸೇರಿ 28 ಮಂದಿ ಬಂಧನ
ದಶಮಿಯಂದು 7ರಕ್ಷಣಾ ಪಿಎಸ್‌ಯುಗೆ ಚಾಲನೆ
ಏಳು ಹೊಸ ಸಾರ್ವಜನಿಕ ವಲಯದ ರಕ್ಷಣಾ ಕಂಪನಿಗಳನ್ನು ಇದೇ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ದೇಶದ ರಕ್ಷಣಾ ಉತ್ಪಾದನಾ ವಲಯದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಆರ್ಡನನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್ಬಿ) ಅನ್ನು ವಿಸರ್ಜಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದ 4 ತಿಂಗಳಲ್ಲೇ ಈ ಬೆಳವಣಿಗೆ ನಡೆದಿದೆ.
ಒಎಫ್ಬಿ ವ್ಯಾಪ್ತಿಯಲ್ಲಿದ್ದ 41 ಫ್ಯಾಕ್ಟರಿಗಳನ್ನು ವಿಭಜಿಸಿ ರಚಿಸಲಾದ ಈ 7 ಪಿಎಸ್‌ಯುಗಳನ್ನು ವಿಜಯದಶಮಿ ದಿನ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಪಿಎಸ್‌ಯುಗಳಿಗಾಗಿ ಬರೋಬ್ಬರಿ 65 ಸಾವಿರ ಕೋಟಿ ರೂ.ಗಳ ಕಾಂಟ್ರ್ಯಾಕ್ಟ್ಗಳಿಗೆ ರಕ್ಷಣಾ ಸಚಿವಾಲಯ ಅನುಮತಿ ನೀಡಿದೆ.
ಈ ಕಂಪನಿಗಳು ದೇಶದ ರಕ್ಷಣೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ವಾಹನಗಳು, ಅಸ್ತ್ರಗಳು ಹಾಗೂ ಇತರೆ ಸಲಕರಣೆಗಳು, ಸೇನಾಪಡೆಗಳಿಗೆ ಬೇಕಾಗುವ ವಸ್ತುಗಳು, ಆಪ್ಟೋ- ಎಲೆಕ್ಟ್ರಾನಿಕ್ಸ್ ಗೇರ್‌ಗಳು, ಪ್ಯಾರಾಚೂಟ್‌ನಂತಹ ಉತ್ಪನ್ನಗಳನ್ನು ತಯಾರಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.