ದೀರ್ಘ ಬರಹಕ್ಕೂ ಟ್ವಿಟರ್‌ನಲ್ಲೂ ಅವಕಾಶ?
Team Udayavani, Feb 4, 2022, 6:58 AM IST
ವಾಷಿಂಗ್ಟನ್: ಟ್ವಿಟರ್‌ನಲ್ಲಿ ಹೆಚ್ಚೆಂದರೆ 280 ಕ್ಯಾರೆಕ್ಟರ್‌ಗಳ ಟ್ವೀಟ್ ಮಾಡಬಹುದು. ಅದಕ್ಕಿಂತ ದೀರ್ಘ ಟ್ವೀಟ್ ಮಾಡಬೇಕೆಂದರೆ ಅದನ್ನು ಎಲ್ಲಾದರೂ ಬರೆದು ಅದರ ಸ್ಕ್ರೀನ್‌ಶಾಟ್ ಮಾತ್ರ ಹಂಚಿಕೊಳ್ಳಬಹುದಷ್ಟೇ. ಆದರೆ ಇನ್ನು ಮುಂದೆ ಹಾಗಿರುವುದಿಲ್ಲ. ಫೇಸ್‌ಬುಕ್ ರೆಡ್ಡಿಟ್ ರೀತಿಯಲ್ಲೇ ದೀರ್ಘ ಬರಹಗಳನ್ನು ನೀವು ಟ್ವಿಟರ್‌ನಲ್ಲೂ ಹಂಚಿಕೊಳ್ಳಬಹುದು. ಅದಕ್ಕೆಂದು ಸಂಸ್ಥೆ ಹೊಸ ಅಪ್‌ಡೇಟ್ ಒಂದರ ಮೇಲೆ ಕೆಲಸ ಮಾಡುತ್ತಿದೆ.
ಡಿಜಿಟಲ್ ಪತ್ತೆದಾರಿಕೆ ಕೆಲಸ ಮಾಡುವುದಕ್ಕೆ ಪ್ರಸಿದ್ಧರಾಗಿರುವ ಜಾನೆ ಮಂಚುನ್ ವೊಂಗ್ ಈ ಬಗ್ಗೆ ಟ್ವಿಟರ್‌ನಲ್ಲೇ ಮಾಹಿತಿ ಹಂಚಿ ಕೊಂಡಿದ್ದಾರೆ. “ಟ್ವಿಟರ್ ಆರ್ಟಿಕಲ್’ ಹೆಸರಿನ ನೂತನ ಆಯ್ಕೆಯ ಸ್ಕ್ರೀನ್‌ಶಾಟ್ ಹಂಚಿಕೊಂಡಿ ರುವ ಅವರು, “ಇದು ಟ್ವಿಟರ್‌ನಲ್ಲಿ ದೊಡ್ಡ ಬರಹಗಳನ್ನು ಬರೆಯುವುದಕ್ಕೆ ಅವಕಾಶ ಮಾಡಿಕೊಡಬಲ್ಲ ಅಪ್‌ಡೇಟ್ ಆಗಿರುವ ಸಾಧ್ಯತೆಯಿದೆ’ ಎಂದು ಬರೆದುಕೊಂಡಿದ್ದಾರೆ. ಅದಾಗ್ಯೂ ಟ್ವಿಟರ್ ಈ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಟ್ವಿಟರ್ ಪ್ರಾರಂಭಿಕ ವರ್ಷಗಳಲ್ಲಿ ಒಂದು ಟ್ವೀಟ್‌ಗೆ 140 ಕ್ಯಾರೆಕ್ಟರ್‌ಗಳ ಗಡಿ ಇಟ್ಟಿತ್ತು. ಅನಂತರ ಅದನ್ನು 280 ಕ್ಯಾರೆಕ್ಟರ್‌ಗೆ ಏರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
MUST WATCH
ಹೊಸ ಸೇರ್ಪಡೆ
Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.