ಪಾಸ್ ವರ್ಡ್ ಬದಲಾಯಿಸಿ 8 ಖಾತೆಗಳಿಂದ ಮಾಹಿತಿ ಕದ್ದ ಹ್ಯಾಕರ್ಸ್: ಟ್ವಿಟ್ಟರ್ ಹೇಳಿದ್ದೇನು ?
Team Udayavani, Jul 19, 2020, 12:14 PM IST
ನ್ಯೂಯಾರ್ಕ್: ಈ ವಾರದಲ್ಲಿ ಎಂಟು ಟ್ವಿಟ್ಟರ್ ಅಕೌಂಟ್ ಗಳನ್ನು ಹ್ಯಾಕ್ ಮಾಡಿ ಅದರಲ್ಲಿರುವ ಮಾಹಿತಿಯನ್ನು ಡೌನ್ ಲೋಡ್ ಮಾಡುವಲ್ಲಿ ಹ್ಯಾಕರ್ ಗಳು ಸಫಲರಾಗಿದ್ದಾರೆ. ಆದರೇ ಇದಾವುದು ವೆರಿಫೈಡ್ ಅಕೌಂಟ್ ಗಳಲ್ಲ ಎಂದು ಟ್ವಿಟ್ಟರ್ ಸಂಸ್ಥೆ ಮಾಹಿತಿ ನೀಡಿದೆ.
ಹ್ಯಾಕರ್ ಗಳ ಗುರುತು ಪತ್ತೆಯಾಗಿಲ್ಲವಾಗಿದ್ದು ಇವರು ಸುಮಾರು 130 ಅಕೌಂಟ್ ಗಳನ್ನು ಹ್ಯಾಕ್ ಮಾಡಲು ಪ್ರಯತ್ನ ನಡೆಸಿದ್ದರು. ಮಾತ್ರವಲ್ಲದೆ ಪಾಸ್ ವರ್ಡ್ ಮರು ರೂಪಿಸಿ, ಖಾತೆಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಸುಮಾರು 45 ಅಕೌಂಟ್ ಗಳಿಂದ ಟ್ವೀಟ್ ಮಾಡಿದ್ದರು.
ಟ್ವಿಟ್ಟರ್ ಸಂಸ್ಥೆಯ ಆಂತರಿಕ ವ್ಯವಸ್ಥೆಗೆ ಕೂಡ ಹ್ಯಾಕರ್ ಗಳು ಪ್ರವೇಶ ಪಡೆದಿದ್ದರು. ಅದರ ಜೊತೆಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಜೋ ಬಿಡೆನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಮುಂತಾದವರ ಖಾತೆಗೆ ಪ್ರವೇಶಿಸಿ ಡಿಜಿಟಲ್ ಕರೆನ್ಸಿಗೆ ಬೇಡಿಕೆ ಇಟ್ಟಿದ್ದರು. ಕೆಲವು ಟ್ವಿಟ್ಟರ್ ಅಕೌಂಟ್ ಗಳ ಯೂಸರ್ ನೇಮ್ ಕೂಡ ಮಾರಾಟ ಮಾಡಲು ಯತ್ನಿಸಿದ್ದರು.
ಈ ರೀತಿಯಾಗಿಯೇ ಹ್ಯಾಕರ್ ಗಳ ಸುಮಾರು 1 ಲಕ್ಷ ಡಾಲರ್ ನಷ್ಟು ಕ್ರಿಪ್ಟೋ ಕರೆನ್ಸಿ ಪಡೆದಿದ್ದಾರೆ ಎಂಬುದು ಬ್ಲಾಕ್ ಚಿನ್ ದಾಖಲೆಗಳು ತಿಳಿಸಿದೆ. ಅದೇ ರೀತಿಯಲ್ಲಿ ಹ್ಯಾಕರ್ ಗಳು ಟ್ವಿಟ್ಟರ್ ಸಂಸ್ಥೆಯ ಸಣ್ಣ ಸಂಖ್ಯೆಯ ಸಿಬ್ಬಂದಿಯ ಸಹಾಯ ಪಡೆದು ಆಂತರಿಕ ಭದ್ರತಾ ವ್ಯವಸ್ಥೆಯೊಳಗೆ ಪ್ರವೇಶಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಟ್ವಿಟ್ಟರ್ ಇಂಕ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.