ಟ್ವಿಟ್ಟರ್ ನಲ್ಲಿ ಬಂದಿದೆ ವಾಯ್ಸ್ ಫೀಚರ್: ವಿಶೇಷತೆಗಳೇನು ಗೊತ್ತಾ ?
Team Udayavani, Jun 18, 2020, 9:56 AM IST
ನ್ಯೂಯಾರ್ಕ್: ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟ್ಟರ್ ಹೊಸ ಹೊಸ ಫೀಚರ್ ಗಳನ್ನು ಬಳಕೆಗೆ ತರುತ್ತಿದ್ದು ಇದೀಗ ‘ವಾಯ್ಸ್ ಟ್ವೀಟ್” ಅನ್ನು ಪರೀಕ್ಷೆಗೆ ಒಳಪಡಿಸಿದೆ.
ಬುಧವಾರ(17-06-2020) ರಂದು 140 ಸೆಕೆಂಡುಗಳ ವಾಯ್ಸ್ ಫೀಚರ್ ಅನ್ನು ಪರೀಕ್ಷೆಗೊಳಪಡಿಸಿದ್ದು, ಇನ್ನು ಮುಂದೆ ವಾಯ್ಸ್ ಮೂಲಕ ಟ್ವೀಟ್ ಮಾಡುವ ಅವಕಾಶ ಲಭ್ಯವಾಗಲಿದೆ. ಸದ್ಯ ಈ ಫೀಚರ್ ಆ್ಯಪಲ್ ಐಓಎಸ್ ನ ನಿರ್ದಿಷ್ಟ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಮುಂದಿನ ಕೆಲವು ವಾರಗಳಲ್ಲಿ ಹಲವು ಐಓಎಸ್ ಬಳಕೆದಾರರಿಗೆ ದೊರಕಲಿದೆ ಎಂದು ಟ್ವಿಟ್ಟರ್ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ.
ಬಳಕೆದಾರರು ಟ್ವೀಟ್ ಕಂಫೋಸರ್ ಸ್ಕ್ರೀನ್ ನಲ್ಲಿರುವ ‘ವೇವ್ ಲೆಂಥ್’ ಐಕಾನ್ ಕ್ಲಿಕ್ ಮಾಡಿ 140 ಸೆಕೆಂಡ್ ಗಳ ವಾಯ್ಸ್ ಟ್ವೀಟ್ ಮಾಡಬಹುದು.
ಟ್ವಿಟ್ಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ನೀತಿ ನಿಯಮಗಳ ಉಲ್ಲಂಘನೆಯಾಗುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು ವಾಯ್ಸ್ ಟ್ವೀಟ್ ಅನ್ನು ಹಲವು ಬಾರಿ ಮೇಲ್ವಿಚಾರಣೆ ಮಾಡಿ ಸಮರ್ಪಕವಾಗಿ ಬಳಕೆಗೆ ತರಲಾಗುವುದು. ಮಾತ್ರವಲ್ಲದೆ ಯಾವುದಾದರೂ ವಾಯ್ಸ್ ಟ್ವೀಟ್ ರಿಪೋರ್ಟ್ ಆದರೇ ನಮ್ಮ ನಿಯಮಗಳಿಗೆ ಅನುಸಾರವಾಗಿ ಪರಿಶೀಲಿಸುತ್ತೇವೆ ಮತ್ತು ಪ್ರತ್ಯೇಕ ಲೇಬಲ್ ಅಳವಡಿಸಲಾಗುವುದು ಎಂದು ಟ್ವಿಟ್ಟರ್ ವಕ್ತಾರರೊಬ್ಬರು ರಾಯ್ ಟರ್ಸ್ ಗೆ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.