Threads vs Twitter;ಟ್ವಿಟರ್ ಪ್ರತಿಸ್ಪರ್ಧಿ ಥ್ರೆಡ್ಸ್ ಕಣಕ್ಕೆ
Team Udayavani, Jul 11, 2023, 8:15 AM IST
ಫೇಸ್‌ಬುಕ್ ಮಾಲಕ ಮಾರ್ಕ್ ಜುಕರ್‌ಬರ್ಗ್ ಮತ್ತು ಟ್ವಿಟರ್ ಮಾಲಕ ಎಲಾನ್ ಮಸ್ಕ್ ನಡುವೆ ನೇರಾನೇರ ಕದನ ಬಿರುಸು ಗೊಂಡಿದೆ. ಇತ್ತೀಚೆಗೆ ಇವರಿಬ್ಬರೂ ಕುಸ್ತಿಗಿಳಿಯುವ ಮಟ್ಟಿಗೆ ಹೇಳಿಕೆ, ಪ್ರತಿಹೇಳಿಕೆ ನೀಡಿದ್ದರು. ಈಗ ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಥ್ರೆಡ್ಸ್ ಎಂಬ ಮೆಸೇಜಿಂಗ್ ಆ್ಯಪ್ ಕಣಕ್ಕಿಳಿದಿದೆ. ಥ್ರೆಡ್ಸ್ ನ ಈಗಿನ ಓಟ ನೋಡಿದರೆ, ಟ್ವಿಟರ್‌ಗೆ ಸಮಬಲದ ಸ್ಪರ್ಧೆ ನೀಡುವ ಎಲ್ಲ ಲಕ್ಷಣಗಳಿವೆ. ಈ ನಿಟ್ಟಿನಲ್ಲಿ ನೂತನ ಥ್ರೆಡ್ಸ್ ಹೇಗಿದೆ ಎಂದು ನೋಡೋಣ…
10 ಕೋಟಿ ಬಳಕೆದಾರರು ಸೇರ್ಪಡೆ
ಥ್ರೆಡ್ಸ್ ಅನ್ನು ಜುಕರ್‌ಬರ್ಗ್ ಬಿಡುಗಡೆ ಮಾಡಿದ್ದೇ ತಡ ಸರಸರನೆ ಡೌನ್‌ಲೋಡ್ ಆಗಿದೆ.ಬಿಡುಗಡೆ ಮಾಡಿದ ದಿನ ಕೇವಲ 7 ಗಂಟೆಗಳಲ್ಲಿ 1 ಕೋಟಿ ಬಳಕೆದಾರರು ಸೇರ್ಪಡೆಗೊಂಡಿದ್ದರು. ಈಗ ಐದು ದಿನದಲ್ಲಿ 10 ಕೋಟಿ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಇದಕ್ಕೆ ವಿಶೇಷ ಕಾರಣವೆಂದರೆ ಇನ್‌ಸ್ಟಾಗ್ರಾಂ ಬಳಕೆದಾರರು ನೇರವಾಗಿ ಥ್ರೆಡ್ಸ್ ಸೇರಿಕೊಳ್ಳಲು ಅವಕಾಶವಿರುವುದು. ಥ್ರೆಡ್ಸ್ ನಲ್ಲಿ ಖಾತೆ ಸೃಷ್ಟಿಸುವಾಗ ಇನ್‌ಸ್ಟಾದ ಅಷ್ಟೂ ಮಾಹಿತಿಗಳನ್ನು ಸಹಜವಾಗಿ ಎಳೆದುಕೊಳ್ಳಬಹುದು.
ಟ್ವಿಟರ್‌ಗೂ ಥ್ರೆಡ್ಸ್ ಗೂ ಹೋಲಿಕೆ, ವ್ಯತ್ಯಾಸ
-ಟ್ವಿಟರ್‌ನಲ್ಲಿ ಒಮ್ಮೆಗೆ 280 ಅಕ್ಷರಗಳನ್ನು ಬರೆಯಬಹುದು. ಥ್ರೆಡ್ಸ್ ನಲ್ಲಿ 500 ಅಕ್ಷರಗಳಿಗೆ ಅವಕಾಶವಿದೆ.
-ಇನ್‌ಸ್ಟಾದಲ್ಲಿ ನಿಮಗೆ ಅಧಿಕೃತ ಖಾತೆಯಿದ್ದರೆ, ಆ ಅಧಿಕೃತ ಬ್ಲೂಟಿಕ್ ಅನ್ನು ಥ್ರೆಡ್ಸ್ ಗೂ ಬಳಸಬಹುದು. ಆದರೆ ಟ್ವಿಟರ್‌ನಲ್ಲಿ ಅಧಿಕೃತತೆಗೆ ತಿಂಗಳಿಗೆ 8 ಡಾಲರ್ ನೀಡಬೇಕು! ಹಣ ಕೊಟ್ಟವರು ಒಮ್ಮೆಗೆ 25,000 ಅಕ್ಷರ ಬರೆಯಲು ಟ್ವಿಟರ್ ಅವಕಾಶ ನೀಡಿದೆ.
-ಥ್ರೆಡ್ಸ್ ನಲ್ಲಿ ಖಾತೆ ಬೇಕೆಂದರೆ ಇನ್‌ಸ್ಟಾಗ್ರಾಂನಲ್ಲೂ ಒಂದು ಖಾತೆಯಿರಬೇಕಾಗುತ್ತದೆ.
ಇನ್‌ಸ್ಟಾದಿಂದ ಬಳಕೆದಾರರು, ಪ್ರೊಫೈಲ್ ವಿವರಗಳನ್ನು ನೇರ ಎಳೆದುಕೊಳ್ಳಬಹುದು.
-ಥ್ರೆಡ್ಸ್ ನಲ್ಲಿ 5 ನಿಮಿಷಗಳ ವೀಡಿಯೋ ಪೋಸ್ಟ್ ಮಾಡಬಹುದು. ಬ್ಲೂಟಿಕ್ ಇಲ್ಲದ ಟ್ವಿಟರ್ ಬಳಕೆದಾರರು 2 ನಿಮಿಷ 20 ಸೆಕೆಂಡ್‌ಗಳ ವೀಡಿಯೋ ಮಾತ್ರ ಪೋಸ್ಟ್ ಮಾಡಲು ಸಾಧ್ಯ.
-ಥ್ರೆಡ್ಸ್ ನಲ್ಲಿ ಪೋಸ್ಟ್ ಅನ್ನು ಕರಡು ರೂಪದಲ್ಲಿ (ಡ್ರಾಫ್ಟ್) ಮಾಡಿಟ್ಟುಕೊಳ್ಳಲು ಅವಕಾಶವಿಲ್ಲ. ಟ್ವಿಟರ್‌ನಲ್ಲಿ ಆ ಅವಕಾಶವಿದೆ.
-ಇತರ ಖಾತೆಗಳನ್ನು ಬ್ಲಾಕ್ ಮಾಡಲು, ಮ್ಯೂಟ್ ಮಾಡಲು ಇನ್‌ಸ್ಟಾದಲ್ಲಿ ಇರುವ ನಿಯಮಗಳೇ ಇಲ್ಲೂ ಅನ್ವಯವಾಗುತ್ತವೆ.
-ಸದ್ಯ ಆ್ಯಪ್ ಸ್ಟೋರ್, ಪ್ಲೇಸ್ಟೋರ್‌ನಲ್ಲಿ ಮಾತ್ರ ಥ್ರೆಡ್ಸ್ ಲಭ್ಯವಿದೆ. ವೆಬ್ ಮಾದರಿಯಲ್ಲಿ ಈಗ ಲಭ್ಯವಿಲ್ಲ.
-ಥ್ರೆಡ್ಸ್ ಖಾತೆಯನ್ನು ಅಳಿಸಲು ಸಾಧ್ಯವಿಲ್ಲ, ಬೇಕಿದ್ದರೆ ನಿಷ್ಕ್ರಿಯ ಮಾಡಬಹುದು. ಒಂದು ವೇಳೆ ಥ್ರೆಡ್ಸ್ ಪ್ರೊಫೈಲನ್ನು ಅಳಿಸಬೇಕಿದ್ದರೆ, ಇನ್‌ಸ್ಟಾ ಖಾತೆಯನ್ನೇ ಅಳಿಸಬೇಕಾಗುತ್ತದೆ.
ಜುಕರ್‌ಬರ್ಗ್ ಮೊದಲ ಟ್ವೀಟ್!
ವಿಚಿತ್ರವೆಂದರೆ ಕಳೆದ ಒಂದು ದಶಕದಲ್ಲೇ ಮೊದಲ ಬಾರಿಗೆ ಜುಕರ್‌ಬರ್ಗ್ ಟ್ವೀಟ್ ಮಾಡಿದ್ದರು. ಅವರು ಒಂದೇ ರೀತಿಯ ಇಬ್ಬರು ಸ್ಪೈಡರ್‌ಮ್ಯಾನ್‌ಗಳು ಪರಸ್ಪರ ಕುಸ್ತಿಗೆ ಸಜ್ಜಾಗಿರುವ ಚಿತ್ರ ಹಾಕಿದ್ದರು.
ಎಲಾನ್ ಮಸ್ಕ್ ಲೇವಡಿ
ಟ್ವಿಟರ್ ಅನ್ನುಥ್ರೆಡ್ಸ್ ನಕಲು ಮಾಡಿದೆ, ಕೇವಲ ಕಾಪಿ, ಪೇಸ್ಟ್ ಕೆಲಸ ಎಂದು ಟ್ವಿಟರ್ ಮಾಲಕ ಎಲಾನ್ ಮಸ್ಕ್ ಲೇವಡಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.