ಸಿಗ್ನಲ್‌ಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಸಿಗ್ನಲ್‌ ಬಳಸಲು ಹೆಚ್ಚುಕಡಿಮೆ ವಾಟ್ಸ್‌ ಆ್ಯಪ್‌ ನಂತೆಯೇ ಇದೆ.

Team Udayavani, Jan 18, 2021, 10:23 AM IST

ಸಿಗ್ನಲ್‌ಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಮೊಬೈಲ್‌ ಫೋನ್‌ ಬಳಕೆದಾರರ ಅಚ್ಚುಮೆಚ್ಚಿನ ಆಪ್‌ ಆಗಿದ್ದ ವಾಟ್ಸ್‌ಆ್ಯಪ್‌ ಇದೀಗ ತನ್ನ ಪ್ರೈವೇಸಿ ಪಾಲಿಸಿಯನ್ನು ಅಪ್‌ಡೇಟ್‌ ಮಾಡಿದೆ. ವಾಟ್ಸ್‌ಆ್ಯಪ್‌ ಬಳಕೆದಾರರ ಕೆಲ ಮಾಹಿತಿಗಳನ್ನು ಫೇಸ್‌ಬುಕ್‌ ಕುಟುಂಬದ ಇತರ ಆ್ಯಪ್‌ ಗಳು ಸಹ ತಮ್ಮ ಜಾಹೀರಾತುದಾರರ ಸಲುವಾಗಿ ಬಳಸಿಕೊಳ್ಳಬಹುದು ಎಂಬುದು ಅಪ್‌ಡೇಟ್‌ ಆದ ಹೊಸ ಪಾಲಿಸಿಯ ಒಂದು ಸಾಲಿನ ಸಾರಾಂಶ.

ತನ್ನ ಮಾಹಿತಿ ಇತರೆಡೆಗೆ ಸೋರಿಕೆಯಾಗಬಾರದು ಎಂದು ಬಹುತೇಕ ಆನ್‌ಲೈನ್‌ ಬಳಕೆದಾರರು ಬಯಸುತ್ತಾರೆ. ವಾಟ್ಸ್‌ಆ್ಯಪ್‌ನ ನೂತನ ನೀತಿಯನ್ನು ಅನೇಕರು ಇಷ್ಟಪಡುತ್ತಿಲ್ಲ. ಅದಕ್ಕಾಗಿ ವಾಟ್ಸ್‌ಆ್ಯಪ್‌ನಂಥದೇ ಇನ್ನೊಂದು ಪರ್ಯಾಯ ಆ್ಯಪ್‌ ಮೊರೆ ಹೋಗುತ್ತಿದ್ದಾರೆ. ಟೆಲಿಗ್ರಾಂ, ಸಿಗ್ನಲ್‌ ಅಂಥ ಪರ್ಯಾಯಗಳು. ಆದರೆ ಇವೆರಡರ ಪೈಕಿ ಬಳಕೆ ದಾರರ ಮಾಹಿತಿಗಳನ್ನು ಸಂರಕ್ಷಿಸು ವಲ್ಲಿ ಸಿಗ್ನಲ್‌ ಅತ್ಯುತ್ತಮ ಆ್ಯಪ್‌ ಎಂದು ಅನೇಕ ಮಂದಿ ಈಗ ಸಿಗ್ನಲ್‌ ಅನ್ನು ಇನ್‌ ಸ್ಟಾಲ್‌ ಮಾಡಿಕೊಳ್ಳಲಾರಂಭಿಸಿದ್ದಾರೆ. ನಿನ್ನೆ ಮೊನ್ನೆಯವರೆಗೆ ಇಂಥದ್ದೊಂದು ಆ್ಯಪ್‌ ಇದೆ ಎಂದೇ ಬಹುತೇಕ ಮಂದಿಗೆ ಗೊತ್ತಿರಲಿಲ್ಲ. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಿಗ್ನಲ್‌ ಜಗತ್ಪ್ರಸಿದ್ಧವಾಗಿದೆ!

ಇದನ್ನೂ ಓದಿ:ಬಾಂಗ್ಲಾದೇಶ ಕಂಟ್ರಿ ಫೋಕಸ್‌: ನೋಡಲು ಮರೆಯಬೇಡಿ ‘ಇತಿ, ತೊಮಾರಿ ಢಾಕಾ‘

ವಾಟ್ಸ್‌ಆ್ಯಪ್‌ ಸ್ಥಾಪಿಸಿದಾತನಿಂದ ಸಿಗ್ನಲ್‌ಗೆ ಧನ ಸಹಾಯ!
ಈ ಸಿಗ್ನಲ್‌ ಆ್ಯಪ್‌ 2014ರಿಂದಲೂ ಅಸ್ತಿತ್ವದಲ್ಲಿದೆ! ಸೇ ಹಲೋ ಟು ಪ್ರೈವೇಸಿ ಎಂಬುದು ಇದರ ಧ್ಯೇಯವಾಕ್ಯ. ಇದು ಐಫೋನ್‌, ಐಪ್ಯಾಡ್‌, ಅಂಡ್ರಾಯ್ಡ್, ವಿಂಡೋಸ್‌, ಮ್ಯಾಕ್‌ ಮತ್ತು ಲಿನಕ್ಸ್ ಎಲ್ಲ ಫ್ಲಾಟಾಫಾರಂಗಳಲ್ಲೂ ಲಭ್ಯ. ಇದನ್ನು ಸಿಗ್ನಲ್‌ ಫೌಂಡೇಶನ್‌ ಮತ್ತು ಸಿಗ್ನಲ್‌ ಮೆಸೆಂಜರ್‌ ಎಲ್ ಎಲ್ಸಿ ಅಭಿವೃದ್ಧಪಡಿಸಿವೆ. ಇದೊಂದು ಲಾಭ ಬಯಸದ ಕಂಪೆನಿ. ಸಿಗ್ನಲ್‌ ಮೆಸೆಂಜರ್‌ ಅನ್ನು ಅಮೆರಿಕಾದ ಮೋಕ್ಸಿ ಮಾರ್ಲಿನ್‌ ಸ್ಪೈಕ್‌ ಎಂಬಾತ ಸೃಷ್ಟಿಸಿದ. ಈತ ಇದರ ಸಿಇಓ ಕೂಡ.

ಸಿಗ್ನಲ್‌ ಫೌಂಡೇಶನ್‌ ಅನ್ನು ವಾಟ್ಸಪ್‌ ನ ಸಹಸ್ಥಾಪಕ ಬ್ರಿಯಾನ್‌ ಆಕ್ಟನ್‌ ಹಾಗೂ ಸಿಗ್ನಲ್‌ ಸೃಷ್ಟಿಕರ್ತ ಮಾರ್ಲಿನ್‌ ಸ್ಪೈಕ್‌ ಸ್ಥಾಪಿಸಿದ್ದಾರೆ. ಇದಕ್ಕೆ ವಾಟ್ಸಪ್‌ ಸಹಸ್ಥಾಪಕ ಬ್ರಿಯಾನ್‌ ಆಕ್ಟನ್‌ 50 ಮಿಲಿಯನ್‌ ಡಾಲರ್‌ ಧನ ಸಹಾಯ ನೀಡಿದ್ದಾರೆ.

ಮೆಸೇಜ್, ಆಡಿಯೋ, ವಿಡಿಯೋ ಕಾಲ್: ಸಿಗ್ನಲ್‌ ಸಂಪೂರ್ಣ ಉಚಿತ. ಇದರಲ್ಲಿ ಮೆಸೇಜ್, ಫೋಟೋ, ವಿಡಿಯೋ ಕಳಿಸಬಹುದು, ಆಡಿಯೋ, ವಿಡಿಯೋ ಕಾಲ್‌
ಗಳನ್ನು ಮಾಡಬಹುದು. 150 ಜನರ ಗ್ರೂಪ್‌ ಅನ್ನು ಮಾಡಬಹುದು. ಇದರಲ್ಲಿ ಗ್ರೂಪ್‌ ಮಾಡಬೇಕಾದರೆ ಸೇರುವವರ ಅನುಮತಿ ಇಲ್ಲದೇ ಆ್ಯಡ್‌ ಮಾಡುವಂತಿಲ್ಲ. ಅವರಿಗೆ ಆಹ್ವಾನ ಕಳಿಸಬೇಕು. ಅವರು ಅದಕ್ಕೆ ಸಮ್ಮತಿಸಿ ಗ್ರೂಪ್‌ಗೆ ಸೇರಬಹುದು. ಸಿಗ್ನಲ್‌ ಬಳಸಲು ಹೆಚ್ಚುಕಡಿಮೆ ವಾಟ್ಸ್‌ ಆ್ಯಪ್‌ ನಂತೆಯೇ ಇದೆ. ಸುಮಾರು ಅಲ್ಲಿರುವ ಫೀಚರ್‌ಗಳೇ ಇದರಲ್ಲೂ ಇವೆ. ಒಬ್ಬೊಬ್ಬ ಗೆಳೆಯರ ಚಾಟ್‌ ಒಂದೊಂದು ಬಣ್ಣದಲ್ಲಿರುವಂತೆ ವಿನ್ಯಾಸವಿದೆ.

ನಿಮ್ಮ ಮಾಹಿತಿ ಸುರಕ್ಷಿತ
ಇದು ಸಂಪೂರ್ಣ ಸುರಕ್ಷತೆ (ಎಂಡ್‌ ಟು ಎಂಡ್‌ ಎನ್ಕ್ರಿಪ್ಷನ್‌) ಅಂಶ ಹೊಂದಿದೆ. ಇದು ಸಿಗ್ನಲ್‌ನ ಧ್ಯೇಯ ಕೂಡ. ಯಾವುದೇ ಮೂರನೇ ವ್ಯಕ್ತಿ ನಿಮ್ಮ ಮೆಸೇಜ್‌
ಓದಲಾಗುವುದಿಲ್ಲ ಅಲ್ಲದೇ ಸಿಗ್ನಲ್‌ ಕಂಪೆನಿ ಸಹ ನಿಮ್ಮ ಮೆಸೇಜ್‌ ಅಥವಾ ನಿಮ್ಮ ಮಾಹಿತಿ ಓದಲು ಸಾಧ್ಯವಿಲ್ಲ. ಸಿಗ್ನಲ್‌ ಅನ್ಯ ಕ್ಲೌಡ್‌ ಬ್ಯಾಕಪ್‌ ವ್ಯವಸ್ಥೆ ಹೊಂದಿಲ್ಲ. ನಿಮ್ಮ ಮೆಸೇಜು, ನಿಮ್ಮ ಫೋಟೋ ನಿಮ್ಮ ಫೋನ್ನಲ್ಲೇ ಬ್ಯಾಕಪ್‌ ಆಗುತ್ತವೆ. ನಿಮ್ಮ ಫೋನ್‌ ಕಳೆದುಹೋದರೆ, ನಿಮ್ಮ ಚಾಟ್‌ ಬ್ಯಾಕ್…ಅಪ್‌ ದೊರಕುವುದಿಲ್ಲ! ಆದರೆ ನಿಮ್ಮ ಫೋನ್‌ನಲ್ಲಿ ಮೆಸೇಜ್‌ಗಳನ್ನು ರೆಸ್ಟೋರ್‌ ಮಾಡಬಹುದು. ಚಾಟ್‌ ಬ್ಯಾಕಪ್‌ ಆಯ್ಕೆಗೆ ಹೋಗಿ, ಫೋಲ್ಡರ್‌ ಆಯ್ಕೆ
ಮಾಡಿಕೊಂಡು ಅಲ್ಲಿ ರೆಸ್ಟೋರ್‌ ಮಾಡಿಕೊಳ್ಳಬಹುದು.

ಮೆಸೇಜ್ ಗ ಳು ಕಣ್ಮರೆಯಾಗುವ ಸೌಲಭ್ಯ!
ನಿಮ್ಮ ಯಾವುದೇ ಗೆಳೆಯರ ಚಾಟ್‌ಗೆ ಹೋಗಿ, ಮೂರು ಚುಕ್ಕಿಗಳ ಮೇಲೆ ಒತ್ತಿದರೆ ಕಣ್ಮರೆಯಾಗುವ ಸಂದೇಶ ಅಥವಾ ಇಂಗ್ಲಿಷಿನಲ್ಲಾದರೆ ಡಿಸಪಿಯರಿಂಗ್‌ ಮೆಸೇಜ್‌ ಅಂತಿರುವ ಆಯ್ಕೆ ಒತ್ತಿದರೆ 5 ಸೆಕೆಂಡಿನಿಂದ ಮೊದಲುಗೊಂಡು 1 ವಾರದ ನಂತರ ನಿಮ್ಮ ಹಾಗೂ ಆ ಗೆಳೆಯನ ಮೆಸೇಜ್‌ಗಳು ಕಣ್ಮರೆಯಾಗುವ ಆಯ್ಕೆ ಇದೆ! (ಇದು ಪ್ರೇಮಿಗಳಿಗೆ ಅನುಕೂಲವಾಗಬಹುದು! ತಾವು ಮಾಡಿದ ಚಾಟ್‌ಗಳನ್ನು ಅಳಿಸದೇ ಮರೆತುಬಿಟ್ಟರೆ ತಾನಾಗೇ ಅಳಿಸಿಹೋಗುತ್ತದೆ!) ಸ್ಕ್ರೀನ್‌ ಅನ್‌ಲಾಕ್‌ ಸಿಗ್ನಲ್‌ ಇನ್‌ಸ್ಟಾಲ್‌ ಮಾಡಿಕೊಳ್ಳುವಾಗ ನಾಲ್ಕು ಅಂಕೆಗಳ ಪಿನ್‌ ನೀಡಬೇಕು. ಆ ಪಿನ್‌ ಅನ್ನು ನೆನಪಿನಲ್ಲಿಟ್ಟುಕೊಂಡಿಬೇಕು.

ಆಗಾಗ ಈ ಪಿನ್‌ ಎಂಟರ್‌ ಮಾಡಲು ಸಿಗ್ನಲ್‌ ಕೇಳುತ್ತದೆ. ನಿಮ್ಮ ಮೆಸೇಜ್‌ಗಳ ಸುರಕ್ಷತೆಗಾಗಿ ಈ ವಿಧಾನ. ನೀವು ಇನ್ನೊಂದು ಫೋನ್‌ನಲ್ಲಿ ಸಿಗ್ನಲ್‌ ಇನ್ಸ್ಟಾಲ್‌ ಮಾಡಿಕೊಳ್ಳುವಾಗ ಈ ಪಿನ್‌ ನೀಡಬೇಕು. ಸಿಗ್ನಲ್‌ ಆ್ಯಪ್‌ ಆಂಡ್ರಾಯ್ಡ್ ಪ್ಲೇಸ್ಟೋರ್‌ ಹಾಗೂ ಐಒಎಸ್‌ನ ಆ್ಯಪ್‌ನಲ್ಲಿ ಲಭ್ಯವಿದೆ. ಇನ್‌ಸ್ಟಾಲ್‌ ಮಾಡಿದ ಬಳಿಕ ಈಗಾಗಲೇ ನಿಮ್ಮ ಕಾಂಟಾಕ್ಟ್‌ನಲ್ಲಿ ಯಾರ್ಯಾರು ಸಿಗ್ನಲ್‌ ಬಳಸುತ್ತಿದ್ದಾರೆ ಎಂದು ತೋರಿಸುತ್ತದೆ. ಅವರಿಗೆ ಹಾಯ್‌ ಹೇಳುವ ಮೂಲಕ ನೀವು ಸಿಗ್ನಲ್‌ ಅನ್ನು ಶುಭಾರಂಭ ಮಾಡಬಹುದು!
ಗೌರಿ

ಟಾಪ್ ನ್ಯೂಸ್

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

WhatsApp ಚಾಟ್‌ ಡಿಲೀಟ್‌ ಆಗಿದ್ಯಾ? ಚಾಟ್‌ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.