ಒಲಿಂಪಿಕ್ಸ್ ನಲ್ಲೂ ಹೊಸ ತಂತ್ರಜ್ಞಾನ ಅಳವಡಿಸಲಿರುವ ಜಪಾನ್ ಏನೆಲ್ಲಾ ವಿಶೇಷತೆಗಳಿವೆ..?
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬಳಕೆಯಾಗಲಿರುವ ಗೆಜೆಟ್ – ತಂತ್ರಜ್ಞಾನ
Team Udayavani, Jul 22, 2021, 1:13 PM IST
ಟೋಕಿಯೋ ಒಲಿಂಪಿಕ್ಸ್ ಗೆ ಕೌಂಟ್ ಡೌನ್ ಈಗಾಗಲೇ ಪ್ರಾರಂಭವಾಗಿದೆ. 2020ರಲ್ಲಿಯೇ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು. ಇದೀಗ ಒಲಿಂಪಿಕ್ಸ್ ನಡೆಸಲು ಜಪಾನ್ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಎಲ್ಲಾ ಕೋವಿಡ್ ಪ್ರೊಟೋಕಾಲ್ ಗಳನ್ನು ಅನುಸರಿಸಿಕೊಂಡು ಕ್ರೀಡಾಕೂಟ ನಡೆಯಲಿದೆ.
ಚೀನಾದ ಪ್ರಾಬಲ್ಯ ಈ ಬಾರಿಯೂ ಮುಂದುವರೆಯುತ್ತಾ? ಭಾರತ ಎಷ್ಟು ಪದಕಗಳನ್ನು ಗೆಲ್ಲಬಹುದು? ಎಂಬ ಲೆಕ್ಕಾಚಾರಗಳು ಒಂದೆಡೆಯಾದರೆ, ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಏನೆಲ್ಲ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ? ಯಾವೆಲ್ಲಾ ಗೆಜೆಟ್ ಗಳನ್ನು ಬಳಸಲಾಗಿದೆ ? ಎಂಬ ಕುತೂಹಲಗಳು ಮತ್ತೊಂದೆಡೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಜಪಾನ್ ಎಷ್ಟು ಮುಂದುವರೆದಿದೆ ಎಂಬುವುದು ಎಲ್ಲರಿಗೂ ತಿಳಿದಿರುವಂತದ್ದೆ. ಒಲಿಂಪಿಕ್ಸ್ ನಲ್ಲೂ ಹೊಸ, ಸುಧಾರಿತ ತಂತ್ರಜ್ಞಾನಗಳು ಅಳವಡಿಸಿ, ಕ್ರೀಡಾಪಟುಗಳಿಗೆ ಹೆಚ್ಚು ನವೀನ ಅನುಭವ ನೀಡಲು ಜಪಾನ್ ಸರ್ಕಾರ ಮುಂದಾಗಿದೆ.
ಇದನ್ನೂ ಓದಿ : ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾವು ಬದ್ಧ: ಸಚಿವ ಗೋಪಾಲಯ್ಯ
ಸ್ವಯಂ ಚಾಲಿತ ವಾಹನಗಳು
ಟೋಕಿಯೊದಲ್ಲಿ, ಪ್ರಮುಖವಾಗಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುವ ಪ್ರದೇಶಗಳಲ್ಲಿ, ಕ್ರೀಡೆಗೆ ಸಂಬಂಧಿತ ಮಾರ್ಗಗಳಲ್ಲಿ ಸ್ವಯಂ ಚಾಲಿತ ವಾಹನಗಳನ್ನು ಬಳಸಲಾಗುತ್ತಿದೆ. ವರದಿಗಳ ಪ್ರಕಾರ, ಒಲಿಂಪಿಕ್ಸ್ ನಡೆಯುವ ದಿನಗಳಲ್ಲಿ ಸುಮಾರು 100 ಸ್ವಯಂ ಚಾಲಿತ ವಾಹನಗಳನ್ನು ಸೇವೆಯಲ್ಲಿಡಲು ಸರ್ಕಾರ ಯೋಜಿಸಿದೆ.
ನಿಯೋಫೇಸ್ ಫೇಸ್ ರೆಕಗ್ನಿಷನ್ ಸಿಸ್ಟಮ್ (ಮುಖ ಗುರುತಿಸುವ ವ್ಯವಸ್ಥೆ)
ಕ್ರೀಡೆ ನಡೆಯುವ ಸ್ಥಳಗಳಲ್ಲಿ ಮುಖ ಗುರುತಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕ್ರೀಡಾಪಟುಗಳು, ಸಿಬ್ಬಂದಿಗಳು ಮತ್ತು ಇತರ ವ್ಯಕ್ತಿಗಳ ಭದ್ರತಾ ತಪಾಸಣೆ-ಸಂಬಂಧಿತ ಕಾರ್ಯಗಳಿಗಾಗಿ ಇದನ್ನು ಬಳಸಲಾಗುತ್ತಿದೆ. ಈ ವರ್ಷದ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಇರುವ ಕಾರಣ, ಕ್ರೀಡಾಪಟುಗಳು ಹಾಗೂ ಅವರ ಸಿಬ್ಬಂದಿಗಳನ್ನು ಹೊರತುಪಡಿಸಿ, ಇತರರ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ. ಭದ್ರತಾ ಉದ್ದೇಶ ಮಾತ್ರವಲ್ಲದೆ ಕೋವಿಡ್ ಮಾರ್ಗಸೂಚಿಗಳನ್ವಯ ಸ್ಪರ್ಶರಹಿತ ಭದ್ರತಾ ಸ್ಕ್ರೀನಿಂಗ್ ಪ್ರಕ್ರಿಯೆ ಜಾರಿಗೊಳಿಸಲು ಇದನ್ನು ಬಳಸಲಾಗುತ್ತಿದೆ. ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಇರುವುದರ ಬಗ್ಗೆಯೂ ಇದು ಪತ್ತೆ ಹಚ್ಚಲಿದೆ.
ರೋಬೋಟ್ ಗಳು
ಒಲಿಂಪಿಕ್ಸ್ ಗ್ರಾಮದಲ್ಲಿ, ಕ್ರೀಡಾಪಟುಗಳಿಗೆ ಸಹಾಯ ಮಾಡಲೆಂದೇ ವಿಶೇಷ ರೋಬೋಟ್‌ಗಳನ್ನು ತಯಾರಿಸಲಾಗಿದೆ. ವಿವಿಧ ಪ್ರಕಾರದ ರೋಬೋಟ್‌ಗಳಿರಲಿದ್ದು, ಎಲ್ಲರಿಗೂ ಸಹಾಯ ಮಾಡಲಿದೆ. ಕ್ರೀಡಾಗ್ರಾಮದ ಬಗ್ಗೆ ಮಾರ್ಗದರ್ಶನ ಮಾಡಲು, ಸಾಮಾಗ್ರಿಗಳನ್ನು ಸಾಗಿಸಲು, ನಡೆಯುವ ಈವೆಂಟ್ ಗಳ ಬಗ್ಗೆ ಮಾಹಿತಿ ನೀಡಲು ರೋಬೋಟ್ ಸಹಕಾರಿಯಾಗಲಿದೆ. ಈ ರೋಬೋಟ್‌ಗಳನ್ನು ಟೋಕಿಯೋ ನಗರದ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕೆಲವು ರೋಬೋಟ್‌ಗಳು ಕ್ರೀಡಾಂಗಣ/ಮೈದಾನದಲ್ಲೂ ಇರಲಿದ್ದು, ಶಾಟ್ ಪುಟ್, ಡಿಸ್ಕಸ್, ಜಾವೆಲಿನ್ ಇತ್ಯಾದಿ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಎಸೆದಿರುವುದನ್ನು ಸಂಯೋಜಕರ ಕೈಗೆ ತಂದುಕೊಡಲಿದೆ.
ವರ್ಚುವಲ್ ರಿಯಾಲಿಟಿ ಲೈವ್ ವೀಕ್ಷಣೆ
ಕ್ರೀಡಾಂಗಣದೊಳಗೆ ಪ್ರೇಕ್ಷಕರಿಗೆ ಅನುಮತಿ ಇಲ್ಲದಿರುವುದರಿಂದ ಕ್ರೀಡಾಪ್ರೇಮಿಗಳಿಗೆ ಬೇಸರ ಆಗಿರುವುದಂತು ನಿಜ. ಆದರೆ, ಅದಕ್ಕೆ ಪರಿಹಾರ ಎಂಬಂತೆ, ಎಲ್ಲಾ ಈವೆಂಟ್‌ಗಳು ವರ್ಚುವಲ್ ರಿಯಾಲಿಟಿ ಮೋಡ್‌ನಲ್ಲಿ ಲೈವ್ ಆಗಲಿದ್ದು, ಕ್ರೀಡಾಂಗಣದಲ್ಲಿಯೇ ಕೂತು ವೀಕ್ಷಿಸಿದ ಅನುಭವ ಸಿಗುತ್ತದೆ. 8ಕೆ ರೆಸಲ್ಯೂಷನ್ ಇಮೇಜಿಂಗ್ ತಂತ್ರಜ್ಞಾನದೊಂದಿಗೆ ಒಲಿಂಪಿಕ್ಸ್ ಕ್ರೀಡಾಕೂಟ ಪ್ರಸಾರಗೊಳ್ಳಲಿದೆ.
ತ್ವರಿತ ಭಾಷಾ ಅನುವಾದಕ ಸಾಫ್ಟವೇರ್‌ಗಳು
ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಅಂದಮೇಲೆ ಅಲ್ಲಿ ವಿವಿಧ ದೇಶದ ವಿವಿಧ ಭಾಷಿಕರು ಸೇರಿರುತ್ತಾರೆ. ಅಂತಹವರಿಗೆ ಸಂವಹನ ನಡೆಸಲು ಭಾಷೆ ಅಡ್ಡಿ ಆಗಬಾರದೆಂಬ ಉದ್ದೇಶದಿಂದ ಅತ್ಯಾಧುನಿಕ, ತ್ವರಿತ ಭಾಷಾ ಅನುವಾದಕವನ್ನು ಪರಿಚಯಿಸಲು ಜಪಾನ್ ಸರ್ಕಾರ ಮುಂದಾಗಿದೆ. ಅದನ್ನು ಸ್ಮಾರ್ಟ್ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿದರೆ, ರಿಯಲ್ ಟೈಮ್ ಟ್ರಾನ್ಸ್‌ಲೇಶನ್ ಮಾಡಲಿದೆ. ಇದು ಸಂವಹನವನ್ನೂ ಸುಲಭಗೊಳಿಸಲಿದೆ.
3ಡಿ ಅಥ್ಲೆಟ್ ಟ್ರ್ಯಾಕಿಂಗ್ (3ಡಿಎಟಿ)
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 3ಡಿ ಅಥ್ಲೆಟ್ ಟ್ರ್ಯಾಕಿಂಗ್ (3 ಡಿಎಟಿ) ನಂತಹ ತಂತ್ರಜ್ಞಾನವು ಹೊಸ ರೀತಿಯ ಅನುಭವ ನೀಡಲಿದೆ. ಇದು ಅಥ್ಲೆಟಿಕ್ ಟ್ರ್ಯಾಕ್‌ನಲ್ಲಿ ಎಲ್ಲಾ ದಿಕ್ಕಿನಿಂದಲೂ ಸ್ಪರ್ಧಿಯ ದೃಶ್ಯಗಳನ್ನು ಸೆರೆ ಹಿಡಿಯಲಿದ್ದು, ವೀಕ್ಷಕರಿಗೂ, ಕ್ರೀಡಾ ಕೋಚ್‌ಗಳಿಗೂ ಸಹಕಾರಿಯಾಗಲಿದೆ. ಕ್ರೀಡಾಪಟುಗಳು ಎಲ್ಲಿ ಎಡವಿದರು ಎಂಬುವುದನ್ನೂ ಗಮನಿಸಬಹುದಾಗಿದೆ. ಇಂಟೆಲ್ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನವು, ಕ್ರೀಡಾಪಟುಗಳ ಚಲನೆ-ವಲನೆಯ ಬಯೋಮೆಕ್ಯಾನಿಕ್ಸ್ಅನ್ನು ಸೆರೆಹಿಡಿಯಲಿದೆ. ಅವು ಮರುಪ್ರಸಾರಕ್ಕೆ ಸೂಕ್ತವಾಗುವಂತೆ ರೆಕಾರ್ಡ್ ಮಾಡಲಾಗುತ್ತದೆ.
ಇದಲ್ಲದೆ, ಡೌ ಟೆಕ್ನಾಲಜಿ ಫಾರ್ ರೆಟ್ರೊಫಿಟ್ ಸ್ಟ್ರಕ್ಚರ್ಸ್, ಮ್ಯಾನ್-ಮೇಡ್ ಉಲ್ಕಾಪಾತ, ಮ್ಯಾಗ್ಲೆವ್ ರೈಲುಗಳು, ಮತ್ತು ಇನ್ನೂ ಅನೇಕ ವಿನೂತನ ತಂತ್ರಜ್ಞಾನಗಳು ಟೋಕಿಯೋ ಒಲಿಂಪಿಕ್ಸ್ 2021 ರ ಭಾಗವಾಗಲಿವೆ. ಈ ಕಾರಣಕ್ಕಾಗಿಯೇ ಟೋಕಿಯೋ ಒಲಿಂಪಿಕ್ಸ್ ಹಲವರಿಗೆ ಕುತೂಹಲವನ್ನೂ ಮೂಡಿಸಿದೆ. ಮುಂದಿನ ದಿನಗಳಲ್ಲಿ ಜಗತ್ತಿನಾದ್ಯಂತ ಕ್ರಾಂತಿಯನ್ನುಂಟು ಮಾಡುವ ನವನವೀನ ತಂತ್ರಜ್ಞಾನಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿಯೂ ಈ ಬಾರಿಯ ಒಲಿಂಪಿಕ್ಸ್ ತೋರಲಿದೆ.
-ಇಂದುಧರ ಹಳೆಯಂಗಡಿ
ಇದನ್ನೂ ಓದಿ : ವರಿಷ್ಠರ ತೀರ್ಮಾನವೇ ಅಂತಿಮ: ಸ್ವಾಮೀಜಿಗಳ ಭೇಟಿ ವೇಳೆ ಯಡಿಯೂರಪ್ಪ ಹೇಳಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.