ವಾಹನ ಉದ್ಯಮ ಚೇತರಿಕೆ: ಸೆಪ್ಟಂಬರ್‌ನಲ್ಲಿ ಆದ ಮಾರಾಟ ಕಳೆದ 10 ತಿಂಗಳಲ್ಲೇ ಹೆಚ್ಚು
Team Udayavani, Oct 3, 2019, 6:00 AM IST
ಹೊಸದಿಲ್ಲಿ: ಕುಸಿದಿದ್ದ ದೇಶೀಯ ಆಟೋಮೊಬೈಲ್ ಕ್ಷೇತ್ರ ಸೆಪ್ಟಂಬರ್ ತಿಂಗಳಲ್ಲಿ ಪುಟಿದೆದ್ದಿದೆ. ವಾಹನಗಳ ಮಾರಾಟ ಭರದಿಂದ ಸಾಗುತ್ತಿದ್ದು, ಇದರಿಂದ ವಾಹನ ತಯಾರಿಕಾ ಕಂಪೆನಿಗಳ ಮಾಲಕರು ಹಾಗೂ ಅಧಿಕಾರ ವರ್ಗ ನಿಟ್ಟುಸಿರು ಬಿಡುವಂತಾಗಿದೆ.
ಸಂಕಷ್ಟದಲ್ಲಿದ್ದ ಉದ್ಯಮಕ್ಕೆ ಕೇಂದ್ರ ಸರಕಾರ ಕಾರ್ಪೊರೆಟ್ ತೆರಿಗೆಯಂಥ ಕೆಲವು ಅನುಕೂಲಗಳನ್ನು ಘೋಷಿಸಿದ್ದು, ವಾಹನ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಿದೆ. ದಸರಾ, ದೀಪಾವಳಿ ಹಬ್ಬಗಳ ಹಿನ್ನೆಲೆ ಯಲ್ಲಿ ಕಂಪೆನಿಗಳು ಗ್ರಾಹಕರಿಗೆ ಆಫರ್‌ಗಳನ್ನು ಪ್ರಕಟಿಸಿದ್ದು ಕುಸಿದಿದ್ದ ವಾಹನ ಮಾರಾಟವನ್ನು ಮೇಲೆತ್ತಿವೆ.
ವಾಣಿಜ್ಯ ವಾಹನಗಳ ಮಾರಾಟ ಸೆಪ್ಟಂಬರ್‌ನಲ್ಲಿ ಶೇ. 29 ಹೆಚ್ಚಾ ಗಿದ್ದು, 87,180 ವಾಹನಗಳು ಮಾರಾಟವಾಗಿವೆ. ಇದು ಮಾರ್ಚ್ 2019ರಿಂದ ಈಚೆಗೆ ಶೇ. 13 ಹೆಚ್ಚಳ. ತ್ರಿಚಕ್ರ ವಾಹನಗಳ ಮಾರಾಟ ಶೇ. 40 ಹೆಚ್ಚಾಗಿದೆ. ಟ್ರಾಕ್ಟರ್‌ಗಳ ಮಾರಾಟ ಶೇ. 8.1 ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಶೇ. 24.2ರಷ್ಟು ಏರಿಕೆ
ಸೆಪ್ಟಂಬರ್ ತಿಂಗಳಲ್ಲಿ ವಾಹನಗಳ ಮಾರಾಟ ಶೇ. 24.2ರಷ್ಟು ಏರಿಕೆ ಕಂಡಿದೆ. ಇದು ಕಳೆದ 10 ತಿಂಗಳಲ್ಲೇ ಅತ್ಯಧಿಕ. ಸೆಪ್ಟಂಬರ್‌ನಲ್ಲಿಯೇ 31 ರಾಜ್ಯ ಗಳ 1,171 ಆರ್‌ಟಿಒ ಕಚೇರಿಗಳಲ್ಲಿ ಅತಿ ಹೆಚ್ಚು ವಾಹನಗಳು ನೋಂದಾವಣೆಯಾಗಿವೆ. ಸೆಪ್ಟಂಬರ್ ತಿಂಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಶೇ. 23ಕ್ಕೆ ಏರಿಕೆಯಾಗಿತ್ತು. ಪ್ರಯಾಣಿಕರ ವಾಹನಗಳ ಮಾರಾಟ ಶೇ. 28.1ರಷ್ಟು ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್ನಿಂದ ಲಾಂಚ್
WhatsApp Pay: ಭಾರತದಲ್ಲಿ ವಾಟ್ಸ್ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.