ದೀಪಾವಳಿ ಧಮಕಾ: ಕೇವಲ 101 ರೂ.ಗೆ ವಿವೋ ಸ್ಮಾರ್ಟ್ ಫೋನ್
Team Udayavani, Oct 19, 2019, 10:40 AM IST
ಮಣಿಪಾಲ: ದೀಪಾವಳಿ ಹಬ್ಬದ ಪ್ರಯುಕ್ತ ವಿವೋ ಭರ್ಜರಿ ಆಫರ್ ಘೋಷಿಸಿದ್ದು, ಕೇವಲ 101 ರೂಪಾಯಿಗೆ ಸ್ಮಾರ್ಟ್ ಫೋನ್ ಖರೀದಿಸುವ ಅವಕಾಶವನ್ನು ಕಂಪೆನಿ ನೀಡಿದೆ. ಆದರೇ ಮುಂಗಡ ಪಾವತಿಯಾಗಿ 101ರೂ. ಪಾವತಿಸಿದರೆ ಮಾತ್ರ ವಿವೋ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬಹುದಾಗಿದೆ.
ನೋ ಕಾಸ್ಟ್ ಇಎಮ್ ಐ , ಜೀರೋ ಡೌನ್ ಪೇಮೆಂಟ್ ಆಯ್ಕೆಯನ್ನು ನೀಡಲಾಗಿದೆ. ಹಬ್ಬದ ಸಂಭ್ರಮದಲ್ಲಿ ಗ್ರಾಹಕರನ್ನು ಸೆಳೆಯಲು ಈ ಆಫರನ್ನು ನೀಡಲಾಗಿದೆ. ಭಾರತದ ಎಲ್ಲಾ ವಿವೋ ಮಳಿಗೆಗಳಲ್ಲಿ ಈ ಆಫರ್ ಲಭ್ಯವಿದೆ. ಮಾತ್ರವಲ್ಲದೆ ಡಿಜಿಟಲ್ ಪೇಮೆಂಡ್ ಮೂಲಕ ಸ್ಮಾರ್ಟ್ ಫೋನ್ ಖರೀದಿದಾರರಿಗೆ ಶೇ10% ಡಿಸ್ಕೌಂಟ್ ನೀಡುತ್ತಿದೆ.
ಈ ಆಫರ್ ಅಕ್ಟೋಬರ್ 18 ರಿಂದ 31 ರವರೆಗೆ ಮಾತ್ರ ನಡೆಯಲಿದ್ದು , ವಿವೋ V17 Pro, ವಿವೋ Z1x , ವಿವೋ V15, ವಿವೋ S1, ವಿವೋ Y17, ವಿವೋ Y15, ಮತ್ತು Vivo Y12 ಸ್ಮಾರ್ಟ್ಫೋನ್ಗಳ ಮೇಲೆ ಈ ಆಫರ್ ಅನ್ನು ನೀಡುತ್ತಿದೆ.
101 ರೂಪಾಯಿ ವಿವೋ ಸ್ಮಾರ್ಟ್ ಫೋನ್ ನನ್ನು ಹೇಗೆ ಪಡೆಯಬಹುದು ?
ಮೊದಲು ಮೇಲೆ ನೀಡಿರುವ ಸ್ಮಾರ್ಟ್ ಫೋನ್ ಗಳಲ್ಲಿ ನಿಮಗಿಷ್ಟವಾದುದನ್ನು ಆಯ್ಕೆ ಮಾಡಬೇಕು. ನಂತರ ವಿವೋ ಮಳಿಗೆಗಳಲ್ಲಿ 101 ರೂ ಪಾವತಿಸಿಬೇಕು. ಉಳಿದ ಮೊತ್ತ ಇಎಮ್ ಐ ಮೂಲಕ ಕಡಿತವಾಗುತ್ತದೆ. ಒಟ್ಟು 926 ರೂ ಇಎಮ್ ಐ ಮೂಲಕ ಕಡಿತವಾಗುತ್ತದೆ. ಯಾವುದೇ ಸ್ಮಾರ್ಟ್ ಫೋನ್ ಗಳನ್ನು ಮಳಿಗೆಗಳಲ್ಲಿ ಖರೀದಿಸುವಾಗ ಡೌನ್ ಪೇಮೆಂಟ್ ಪಾವತಿಸಬೇಕಾಗುತ್ತದೆ. ಆದರೇ ಈ ಆಫರ್ ನಲ್ಲಿ ಅದನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ.
ಹೆಚ್ ಡಿಎಫ್ ಸಿ , ಐಸಿಐಸಿಐ ಬ್ಯಾಂಕ್ ಗಳು ಕೂಡ 5% ಕ್ಯಾಶ್ ಬ್ಯಾಕ್ ಆಫರ್ ಅನ್ನು ಒದಗಿಸುತ್ತಿದ್ದು, ಹೆಚ್ ಡಿಬಿ ಫೈನಾನ್ಸಿಯಲ್ ಸರ್ವಿಸ್ 10 % ಕ್ಯಾಶ್ ಬ್ಯಾಕ್ ಆಫರ್ ಅನ್ನು ನೀಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.