ಮಾರ್ಚ್ 25ಕ್ಕೆ ವಿವೋ ಎಕ್ಸ್ 60 ಸೀರಿಸ್ ಭಾರತದಲ್ಲಿ ಬಿಡುಗಡೆ
Team Udayavani, Mar 23, 2021, 2:49 PM IST
ನವ ದೆಹಲಿ : ವಿವೋ ಎಕ್ಸ್ 60 ಸೀರಿಸ್ ಅಧಿಕೃತವಾಗಿ ಮಾರ್ಚ್ 25 ರಂದು ದೇಶದಲ್ಲಿ ಬಿಡುಗಡೆಯಾಗುವುದಕ್ಕೆ ಮುನ್ನ ವಿವೋ ಎಕ್ಸ್ 60, ವಿವೋ ಎಕ್ಸ್ 60 ಪ್ರೊ ಮತ್ತು ವಿವೋ ಎಕ್ಸ್ 60 ಪ್ರೊ + ಇಂಡಿಯಾ ಬೆಲೆಗಳು ಸೋರಿಕೆಯಾಗಿವೆ.
ಮೂರು ಫೋನ್ ಗಳನ್ನು ಆರಂಭದಲ್ಲಿ ಚೀನಾದಲ್ಲಿ ವಿವೋ ಎಕ್ಸ್ 50 ಸೀರಿಸ್ ಬಿಡುಗಡೆ ಮಾಡಲಾಯಿತು. ವಿವೊ ಸೋಮವಾರ(ಮಾ.22) ಮಲೇಷ್ಯಾದಲ್ಲಿ ಬಿಡುಗಡೆ ಸಮಾರಂಭವನ್ನು ಆಯೋಜಿಸಿತ್ತು, ಅಲ್ಲಿ ವಿವೋ ಎಕ್ಸ್ 60 ಮತ್ತು ವಿವೋ ಎಕ್ಸ್ 60 ಪ್ರೊ ಜಾಗತಿಕ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ವಿವೋ ಎಕ್ಸ್ 60 ಜಾಗತಿಕ ರೂಪಾಂತರಗಳು ಚೀನೀ ಮಾದರಿಗಳಿಗಿಂತ ವಿಭಿನ್ನವಾಗಿದೆ.
ಓದಿ : ಆಫ್‌ಲೈನ್ ತರಗತಿ ನಿಲ್ಲದು, ನಿಗದಿತ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ: ಅಶ್ವತ್ಥನಾರಾಯಣ
ವಿವೋ ಎಕ್ಸ್ 60, ವಿವೋ ಎಕ್ಸ್ 60 ಪ್ರೊ, ವಿವೋ ಎಕ್ಸ್ 60 ಪ್ರೊ + ಭಾರತದಲ್ಲಿ ಬೆಲೆ :
ಭಾರತದಲ್ಲಿ ವಿವೋ ಎಕ್ಸ್ 60, 8 ಜಿಬಿ ರ್ಯಾಮ್ + 128 ಜಿಬಿ ಸ್ಟೋರೇಜ್ ಮಾಡೆಲ್ ಗೆ 39,990 ರೂ. 8 ಜಿಬಿ ರಾಮ್ + 256 ಜಿಬಿ ಸ್ಟೋರೇಜ್ ಮಾಡೆಲ್ ಗೆ 43,990 ರೂ ಎಂದು ಮುಂಬೈ ಮೂಲದ ರಿಟೆಲರ್ ಮಹೇಶ್ ಟೆಲಿಕಾಂ ತಿಳಿಸಿದೆ. ವಿವೋ ಎಕ್ಸ್ 60 ಪ್ರೊ ಮತ್ತು ವಿವೋ ಎಕ್ಸ್ 60 ಪ್ರೊ + ಗೆ 49,990 ರೂ. 12 ಜಿಬಿ ರ್ಯಾಮ್ + 256 ಜಿಬಿ ಸ್ಟೋರೇಜ್ ಮಾಡೆಲ್ ಗೆ 69,990 ರೂ. ಇರಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಎಕ್ಸ್ 60 ಸಿರೀಸ್ ನ ಸ್ಮಾರ್ಟ್ ಫೋನ್‌ಗಳ ಅಧಿಕೃತ ಬೆಲೆಗಳನ್ನು ವಿವೋ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಮಾರ್ಚ್ 25 ರಂದು ಅನಾವರಣ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಕಂಪನಿ ದೃಢಪಡಿಸಿದೆ.
ಓದಿ : ಶರದ್ ಪವಾರ್ ಸುಳ್ಳು ಹೇಳುತ್ತಿದ್ದಾರೆ, ದೇಶ್ ಮುಖ್ ಅವರನ್ನು ರಕ್ಷಿಸುತ್ತಿದ್ದಾರೆ :ಫಡ್ನವಿಸ್
ಏತನ್ಮಧ್ಯೆ, ವಿವೋ ಎಕ್ಸ್ 60 ಮತ್ತು ವಿವೋ ಎಕ್ಸ್ 60 ಪ್ರೊ ಜಾಗತಿಕ ಆವೃತ್ತಿಗಳು ಮಲೇಷ್ಯಾದಲ್ಲಿ ಸೋಮವಾರ(ಮಾ.22) ರಂದು ಬಿಡುಗಡೆಗೊಂಡವು. ವಿವೋ ಎಕ್ಸ್ 60 MYR 2,699 (ಸರಿಸುಮಾರು 47,400 ರೂ.) ಬೆಲೆಯನ್ನು ಹೊಂದಿದೆ, ಮತ್ತು ವಿವೋ ಎಕ್ಸ್ 60 ಪ್ರೊ ಬೆಲೆ MYR 3,299 (ಸರಿಸುಮಾರು 58,000 ರೂ.) ಆಗಿದೆ. ಎರಡೂ ಫೋನ್ ಗಳು ಪ್ರಮಾಣಿತ 12 ಜಿಬಿ RAM + 256GB ಸ್ಟೋರೇಜ್ ಗಳನ್ನು ಹೊಂದಿದೆ.
ವಿವೋ ಎಕ್ಸ್ 60, ವಿವೋ ಎಕ್ಸ್ 60 ಪ್ರೊ ವಿಶೇಷತೆಗಳು :
ಡ್ಯುಯಲ್ ಸಿಮ್ (ನ್ಯಾನೋ) ವಿವೊ ಎಕ್ಸ್ 60 ಮತ್ತು ವಿವೊ ಎಕ್ಸ್ 60 ಪ್ರೊ ಜಾಗತಿಕ ಮಾಡೆಲ್ ಗಳು ಅನೇಕ ಹೋಲಿಕೆಗಳನ್ನು ಹೊಂದಿವೆ. ಆಂಡ್ರಾಯ್ಡ್ 11 ಆಧಾರಿತ ಫೋನ್ ಟಚ್ ಓಎಸ್ 11.1 ನೊಂದಿಗೆ ಫೋನ್‌ಗಳು ಲಭ್ಯವಾಗಲಿವೆ. ಫೋನ್ ಗಳು 6.5-ಇಂಚಿನ ಪೂರ್ಣ ಎಚ್ ಡಿ + (1,080×2,376 ಪಿಕ್ಸೆಲ್‌ಗಳು) ಅಮೋಲೆಡ್ ಡಿಸ್ಪ್ಲೇಯನ್ನು 19.8:9 ಆಕಾರ ಅನುಪಾತ ಮತ್ತು 120Hz ರಿಫ್ರೆಶ್ ರೇಟ್ ನ್ನು ಒಳಗೊಂಡಿದೆ. ವಿವೋ ಎಕ್ಸ್ 60 ಮತ್ತು ವಿವೊ ಎಕ್ಸ್ 60 ಪ್ರೊ ಸಹ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 870 SoC ನಿಂದ ನಿಯಂತ್ರಿಸಲ್ಪಡುತ್ತವೆ. ಇದು ಎಕ್ಸಿನೋಸ್ 1080 SoC ನೊಂದಿಗೆ ಬರುವ ವಿವೊ ಎಕ್ಸ್ 60 ಮತ್ತು ವಿವೊ ಎಕ್ಸ್ 60 ಪ್ರೊ ನ ಚೀನಾ ರೂಪಾಂತರಗಳಿಗಿಂತ ಭಿನ್ನವಾಗಿದೆ. ವಿವೋ ಎಕ್ಸ್ 60 ಪ್ರೊ + ನಲ್ಲಿ ವಿವೋ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 ಅನ್ನು ನೀಡಿದ್ದು, ಇದು ಚೀನಾದಲ್ಲಿ ಮಾತ್ರ ಲಭ್ಯವಿದೆ.
ಭಾರತದಲ್ಲಿ ಬಿಡುಗಡೆಯಾಗಲಿರುವ ಮಾಡೆಲ್ ನಲ್ಲಿ ಈ ಮೇಲಿನ ಎಲ್ಲಾ ವಿಶೇಷತೆಗಳನ್ನು ಒಳಗೊಂಡು ಇನ್ನೂ ಹಲವು ವಿಶೇಷತೆಗಳನ್ನು ನಿರೀಕ್ಷಿಸಲಾಗಿದೆ.
ಓದಿ : ಕುಲಾಲ ಭವನದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ: ದೇವದಾಸ್ ಎಲ್. ಕುಲಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.