ಹೊಸ ವಿವೋ ವೈ 73 ಹೇಗಿದೆ ಗೊತ್ತಾ..? ಇಲ್ಲಿದೆ ಸಂಪೂರ್ಣ ಮಾಹಿತಿ
Team Udayavani, Jul 1, 2021, 9:05 AM IST
ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಅಂಗಡಿ ಮೂಲಕ ಮಾರಾಟವಾಗುವ ಮೊಬೈಲ್ ಗಳಲ್ಲಿ ತನ್ನದೇ ಸ್ಥಾನ ಗಳಿಸಿಕೊಂಡಿರುವ ವಿವೋ ಕಂಪೆನಿ ಇತ್ತೀಚಿಗೆ ವಿವೋ ವೈ 73 ಮೊಬೈಲನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ಫೋನ್ ನ ತಾಂತ್ರಿಕ ಅಂಶಗಳು, ಕಾರ್ಯನಿರ್ವಹಣೆ ಹೇಗಿದೆ ಎಂಬುದರ ಪರಿಚಯ ಇಲ್ಲಿದೆ.
ಇದು 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹಾಗೂ 8 ಜಿಬಿ ರ್ಯಾಮ್‍ನ ಒಂದೇ ಆವೃತ್ತಿ ಹೊಂದಿದೆ. ಇದರ ದರ ಫ್ಲಿಪ್‍ಕಾರ್ಟ್ ನಲ್ಲಿ 20,990 ರೂ.
ಪರದೆ : 6.44 ಇಂಚಿನ ಫುಲ್ ಎಚ್‍ಡಿ ಪ್ಲಸ್, ಅಮೋಲೆಡ್ ಪರದೆ ಹೊಂದಿದೆ. ಪರದೆಯ ಮೇಲ್ಭಾಗದ ಮಧ್ಯದಲ್ಲಿ ಸೆಲ್ಫೀ ಕ್ಯಾಮರಾ ಇಡಲಾಗಿದ್ದು, ಅದಕ್ಕೆ ನೀರಿನ ಹನಿಯ ವಿನ್ಯಾಸ ಮಾಡಲಾಗಿದೆ. ಅಮೋಲೆಡ್ ಡಿಸ್ ಪ್ಲೇ ಆದ್ದರಿಂದ ಪರದೆಯ ಮೇಲಿನ ಆಪ್‍ಗಳು, ಚಿತ್ರಗಳು, ಪರದೆಯ ಯೂಐ ಹೆಚ್ಚು ಶ್ರೀಮಂತವಾಗಿ ಕಾಣುತ್ತದೆ.
ವಿನ್ಯಾಸ : ಫೋನು ಕೈಯಲ್ಲಿ ಹಿಡಿಯಲು ಭಾರ ಎನಿಸುವುದಿಲ್ಲ. 7.38 ಮಿ.ಮೀ. ನಷ್ಟು ದಪ್ಪ ಇದೆ. 170 ಗ್ರಾಮ ತೂಕ ಇದೆ. ಸಾಕಷ್ಟು ಸ್ಲಿಮ್ ಆಗಿದೆ. ಒಂದೇ ಕೈಯಲ್ಲಿ ಹಿಡಿದು ಟೈಪ್ ಮಾಡಬಹುದು. ಫೋನ್ ಜಾಸ್ತಿ ಬಲ್ಕಿಯಾಗಿರಬಾರದು ಎಂದು ಬಯಸುವವರಿಗೆ ಅನುಕೂಲಕರವಾಗಿದೆ. ಜೇಬಿಗೆ ಹಾಕಿಕೊಳ್ಳಲು, ಮಾತನಾಡಲು ಹ್ಯಾಂಡಿಯಾಗಿದೆ.
ಈಗ ಹೆಚ್ಚಿನ ಫೋನ್ ಗಳು ಪ್ಲಾಸ್ಟಿಕ್ ಹಿಂಬದಿ ಹೊಂದಿರುತ್ತವೆ. ಇದರಲ್ಲಿ ಗಾಜು ಬಳಸಿ ವಿನ್ಯಾಸ ಮಾಡಿರುವುದು ಹಾಗೂ ಲೋಹದ ಫ್ರೇಮ್ ಹಾಕಿರುವುದು ಫೋನಿಗೆ ಪ್ರೀಮಿಯಂ ಅನುಭವ ನೀಡುತ್ತದೆ. ನೀಲಿ ಬಣ್ಣದ ಫೋನಿಗೆ ಹಿಂಬದಿ ಡೈಮಂಡ್ ವಿನ್ಯಾಸವಿದೆ. ಕಪ್ಪು ಬಣ್ಣದ ಫೋನಿಗೆ ಸಣ್ಣ ಗೆರೆಗಳ ವಿನ್ಯಾಸವಿದೆ. ಎರಡು ಬಣ್ಣಕ್ಕೆ ಬೇರೆ ಬೇರೆ ರೀತಿಯ ಹಿಂಬದಿ ವಿನ್ಯಾಸ ಇರುವುದು ವಿಶೇಷ.
ಪ್ರೊಸೆಸರ್ : ಇದರಲ್ಲಿ, 2.05 ಗಿಗಾಹಟ್ಜ್, ಎಂಟು ಕೋರ್ ಗಳುಳ್ಳ ಮೀಡಿಯಾಟೆಕ್ ಹೀಲಿಯೋ ಜಿ95 ಪ್ರೊಸೆಸರ್ ಬಳಸಲಾಗಿದೆ. ಇದು ಸ್ನಾಪ್‍ಡ್ರಾಗನ್ 732 ಜಿ ಪ್ರೊಸೆಸರ್ ಗೆ ಸರಿಸಮಾನವಾದ ಪ್ರೊಸೆಸರ್. ಈ ಹೀಲಿಯೋ ಜಿ 95 ಪ್ರೊಸೆಸರ್ ಫೋನಿನ ವೇಗವನ್ನು ತೃಪ್ತಿಕರವಾಗಿ ನಿರ್ವಹಿಸುತ್ತದೆ. ಗೇಮಿಂಗ್ ಕಾರ್ಯಾಚರಣೆ, ಎಸ್‍ಡಿ 732 ಗಿಂತ ವೇಗವಾಗಿದೆ. ಒಟ್ಟಾರೆ ಫೋನಿನಲ್ಲಿ ವೇಗಕ್ಕೇನೂ ತೊಂದರೆಯಿಲ್ಲ. ಬಳಕೆಯಲ್ಲಿ ಅಡಚಣೆ, ತಡೆಯುವಿಕೆ ಉಂಟಾಗಲಿಲ್ಲ.
ಆಂಡ್ರಾಯ್ಡ್ 11 ಆವೃತ್ತಿ ಹೊಂದಿದ್ದು, ಫನ್‍ಟಚ್ ಓಎಸ್ ನ ಹೊಂದಾಣಿಕೆ ಮಾಡಲಾಗಿದೆ. ಫೋನಿನೊಂದಿಗೆ ನಿಮಗೆ ಬೇಕೋ ಬೇಡವೋ ಕೆಲವು ಆಪ್‍ಗಳು ಬಂದಿರುತ್ತವೆ! ಬೇಡವೆನಿಸಿದರೆ, ಅವನ್ನು ನೀವು ಅನ್ ಇನ್ ಸ್ಟಾಲ್ ಮಾಡಿಕೊಳ್ಳಬಹುದು. ಫನ್ ಟಚ್‍ನ ಕೆಲವು ಆಯ್ಕೆಗಳು ಬಳಕೆದಾರ ಸ್ನೇಹಿಯಾಗಿವೆ.
ಕ್ಯಾಮರಾ : 64 ಮೆ.ಪಿ. 2 ಮೆ.ಪಿ. ಮತ್ತು 2. ಮೆ.ಪಿ.ಯ ಮೂರು ಲೆನ್ಸ್ ಗಳುಳ್ಳ ತ್ರಿವಳಿ ಕ್ಯಾಮರಾವನ್ನು ಹಿಂಬದಿಗೆ ನೀಡಲಾಗಿದೆ. 16 ಮೆ.ಪಿ. ಸೆಲ್ಫೀ ಕ್ಯಾಮರಾ ಇದೆ. ಕ್ಯಾಮರಾಗಳ ಗುಣಮಟ್ಟ ಒಂದು ಮಧ್ಯಮ ದರ್ಜೆಯ ಫೋನಿನಲ್ಲಿರಬೇಕಾದ ಸಾಮರ್ಥ್ಯದಲ್ಲಿದೆ. ಇದರಲ್ಲೊಂದು ಡುಯಲ್ ವ್ಯೂ ವಿಡಿಯೋ ಎಂಬ ಫೀಚರ್ ಇದೆ. ಇದನ್ನು ಆನ್ ಮಾಡಿಕೊಂಡರೆ, ಏಕಕಾಲಕ್ಕೆ ಸೆಲ್ಫಿ ಕ್ಯಾಮರಾ ಹಾಗೂ ಹಿಂಬದಿ ಕ್ಯಾಮರಾ ವಿಡಿಯೋ ಶೂಟ್ ಮಾಡುತ್ತವೆ. ರೆಕಾರ್ಡ್ ಆದ ವಿಡಿಯೋ ಪ್ಲೇ ಮಾಡಿದಾಗ ಪರದೆಯಲ್ಲಿ ಅರ್ಧ ಭಾಗ ಮುಂಬದಿ ಕ್ಯಾಮರಾದ, ಇನ್ನರ್ಧಭಾಗ ಹಿಂಬದಿ ಕ್ಯಾಮರಾ ವಿಡಿಯೋ ನೋಡಬಹುದು. ಆದರೆ ಇದರಿಂದ ಏನುಪಯೋಗ? ಎಂಬುದು ಅರ್ಥವಾಗಲಿಲ್ಲ.
ಬ್ಯಾಟರಿ: 4000 ಎಂಎಎಚ್ ಬ್ಯಾಟರಿ ಹೊಂದಿದೆ. ಇದಕ್ಕೆ 33 ವ್ಯಾಟ್ಸ್ ಚಾರ್ಜರ್ ನೀಡಲಾಗಿದೆ. ಶೇ. 65ರಷ್ಟು ಚಾರ್ಜ್ ಅರ್ಧ ಗಂಟೆಯಲ್ಲಾಗುತ್ತದೆ. ಶೇ. 100ರಷ್ಟು ಚಾರ್ಜ್ ಆಗಲು 1 ಗಂಟೆ 5 ನಿಮಿಷ ತೆಗೆದುಕೊಳ್ಳುತ್ತದೆ. ಬ್ಯಾಟರಿ ಒಂದು ದಿನದ ಬಳಕೆಗೆ ಸಾಕಾಗುತ್ತದೆ.
ಎಲ್ಲ ಸರಿ, ಈ ಫೋನಿನಲ್ಲಿ 5ಜಿ ಇದೆಯಾ? 4ಜಿ ಮಾತ್ರನಾ ಹೇಳಲೇ ಇಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡೇ ಮೂಡಿರುತ್ತದೆ. ಈ ಪ್ರಶ್ನೆಗೆ ಉತ್ತರ 5ಜಿ ಸೌಲಭ್ಯ ಇದರಲ್ಲಿಲ್ಲ! ಅದೊಂದು ಕೊರತೆ ಬಿಟ್ಟರೆ, ಸ್ಲಿಮ್ ಆದ, ಹಗುರ, ಹ್ಯಾಂಡಿಯಾದ, ಸುಂದರ ವಿನ್ಯಾಸದ ಮೊಬೈಲ್ ಫೋನ್ ವಿವೋ ವೈ73.
-ಕೆ.ಎಸ್. ಬನಶಂಕರ ಆರಾಧ್ಯ.
ಇದನ್ನೂ ಓದಿ : ಇಂಗಾಲ ಭಾರ ಇಳಿಸಿದ ವರ್ಕ್ ಫ್ರಂ ಹೋಂ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.