ಡಿಜಿಟಲ್ ರುಪಿಯ ಹೊಸ ಜಮಾನ
Team Udayavani, Feb 3, 2022, 5:55 AM IST
ಮಂಗಳವಾರವಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ಡಿಜಿಟಲ್ ರುಪಿ ಬಗ್ಗೆ ಪ್ರಸ್ತಾವವಾಗಿದೆ. ಈಗಲೂ ಡಿಜಿಟಲ್ ಕರೆನ್ಸಿ ಎಂದರೆ ಎಲ್ಲರ ಮನಸ್ಸಿನಲ್ಲಿ ಇದೂ ಒಂದು ರೀತಿ ಕ್ರಿಪ್ಟೋ ಕರೆನ್ಸಿ ರೀತಿಯಲ್ಲೇ ಇರಬಹುದು ಎಂಬ ಭಾವನೆಗಳಿವೆ. ಹಾಗಾದರೆ ಈ ಡಿಜಿಟಲ್ ಕರೆನ್ಸಿ ಕುರಿತ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.
ಏನಿದು ಡಿಜಿಟಲ್ ಕರೆನ್ಸಿ?
ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿರುವಂತೆ ಡಿಜಿಟಲ್ ಕರೆನ್ಸಿ ಕೂಡ ಒಂದು ಕಾನೂನುಬದ್ಧ ರೂಪಾಯಿ. ಅಂದರೆ ಈ ಹಣ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಇರುತ್ತದೆ. ಸರಳವಾಗಿ ಹೇಳುವುದಾದರೆ ಇದೊಂದು ಫಿಯಟ್ ಕರೆನ್ಸಿ. ಇದನ್ನು ಪರಸ್ಪರ ವರ್ಗಾವಣೆ ಕೂಡ ಮಾಡಿಕೊಳ್ಳಬಹುದು.
ಡಿಜಿಟಲ್ ರುಪಿಯ ಉಪಯೋಗವೇನು?
ಡಿಜಿಟಲ್ ರೂಪದಲ್ಲಿರುವ ಹಣ ಕಳೆದುಹೋಗಲ್ಲ, ಇದನ್ನು ಹರಿಯಲೂ ಆಗುವುದಿಲ್ಲ, ದೀರ್ಘಾವಧಿವರೆಗೆ ಬಾಳಿಕೆ ಬರುತ್ತದೆ. ಆದರೆ, ಭೌತಿಕ ರೂಪದಲ್ಲಿರುವ ನೋಟು ಹರಿದು ಹೋಗುವ ಅಥವಾ ಕಳೆದುಹೋಗುವ ಸಾಧ್ಯತೆಗಳು ಹೆಚ್ಚು. ಅಲ್ಲದೆ ನೋಟುಗಳನ್ನು ಪ್ರಿಂಟ್ ಮಾಡಬೇಕಾಗಿಲ್ಲವಾಗಿರುವುದರಿಂದ ಇದರ ವೆಚ್ಚವೂ ಸರಕಾರಕ್ಕೆ ಉಳಿಯುತ್ತದೆ.
ನಗದು ರೂಪಕ್ಕೆ ಬದಲಾಯಿಸಿಕೊಳ್ಳಬಹುದೇ?
ಹೌದು, ಆರ್‌ಬಿಐ ಜಾರಿಗೆ ತರಲಿರುವ ಡಿಜಿಟಲ್ ರುಪಿಯನ್ನು ನಗದು ರೂಪಕ್ಕೆ ವರ್ಗಾವಣೆ ಮಾಡಿಕೊಳ್ಳಬಹುದು. ಈ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಅಲ್ಲದೆ ಡಿಜಿಟಲ್ ರುಪಿಯಿಂದಾಗಿ ಭಾರತದ ಡಿಜಿಟಲ್ ಆರ್ಥಿಕತೆಯೂ ಬೆಳವಣಿಗೆ ಕಾಣುತ್ತದೆ. ಈ ಹಣಕ್ಕೆ ಹೆಚ್ಚಿನ ಭದ್ರತೆಯೂ ಇರುತ್ತದೆ ಎಂದಿದ್ದಾರೆ.
ಕ್ರಿಪ್ಟೋ, ಡಿಜಿಟಲ್ ಕರೆನ್ಸಿ ನಡುವಿನ ವ್ಯತ್ಯಾಸ
1 ಡಿಜಿಟಲ್ ಕರೆನ್ಸಿಯು ಭೌತಿಕ ನೋಟಿನ ಎಲೆಕ್ಟ್ರಾನಿಕ್ ರೂಪವಷ್ಟೇ. ಇದನ್ನು ಸಂಪರ್ಕರಹಿತ ವಹಿವಾಟಿಗೆ ಬಳಕೆ ಮಾಡಬಹುದು. ಆದರೆ, ಕ್ರಿಪ್ಟೋ ಕರೆನ್ಸಿಯನ್ನು ಬೇಧಿಸಲಾಗದ ಅತ್ಯಂತ ಸುರಕ್ಷಿತ ವ್ಯವಸ್ಥೆಯಲ್ಲಿ ಇರಿಸಲಾಗಿರುತ್ತದೆ.
2ಡಿಜಿಟಲ್ ಕರೆನ್ಸಿಗೆ ಆರ್‌ಬಿಐನಿಂದ ಮಾನ್ಯತೆ ಇರುತ್ತದೆ. ಆದರೆ, ಕ್ರಿಪ್ಟೋ ಕರೆನ್ಸಿಗೆ ಯಾವುದೇ ಮಾನ್ಯತೆ ಇರುವುದಿಲ್ಲ.
3ಡಿಜಿಟಲ್ ಕರೆನ್ಸಿಯ ಮೌಲ್ಯ ಸ್ಥಿರವಾಗಿರುತ್ತದೆ. ಯಾವುದೇ ದೇಶಕ್ಕೆ ಹೋದರೂ ಒಪ್ಪಿಕೊಳ್ಳಲಾಗುತ್ತದೆ. ಆದರೆ ಕ್ರಿಪ್ಟೋ ಕರೆನ್ಸಿ ರೇಟ್ ಬದಲಾವಣೆಯಾಗುತ್ತಿರುತ್ತದೆ. ಎಲ್ಲ ಕಡೆಗಳಲ್ಲೂ ಇದನ್ನು ಒಪ್ಪಿಕೊಳ್ಳುವುದಿಲ್ಲ.
4ಡಿಜಿಟಲ್ ಕರೆನ್ಸಿಯ ಮಾಹಿತಿ ಕಳುಹಿಸುವವರು, ಪಡೆದುಕೊಳ್ಳಲಿರುವವರು ಮತ್ತು ಬ್ಯಾಂಕ್‌ಗೆ ಮಾತ್ರ ಗೊತ್ತಿರುತ್ತದೆ. ಆದರೆ ಕ್ರಿಪ್ಟೋ ಕರೆನ್ಸಿಯ ಮಾಹಿತಿ ಎಲ್ಲರಿಗೂ ಗೊತ್ತಿರುತ್ತದೆ.
5ಡಿಜಿಟಲ್ ಕರೆನ್ಸಿಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಬಲವಾದ ಪಾಸ್‌ವರ್ಡ್ ಬೇಕಾಗುತ್ತದೆ. ಅದೇ ಕ್ರಿಪ್ಟೋ ಕರೆನ್ಸಿಗೆ ಎನ್‌ಕ್ರಿಪ್ಶನ್(ಬೇಧಿಸಲಾಗದ ಭದ್ರತೆ)ನ ಭದ್ರತೆ ನೀಡಲಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.