ವಾಟ್ಸ್ಯಾಪ್ ಡಿಸ್ ಅಪಿಯರಿಂಗ್ ಚಾಟ್ಸ್ ಬಗ್ಗೆ ನಿಮಗೆ ತಿಳಿದಿದೆಯೇ..? ಇಲ್ಲಿದೆ ಮಾಹಿತಿ..!
Team Udayavani, Sep 3, 2021, 6:09 PM IST
ನವ ದೆಹಲಿ : ಸಾಮಾಜಿಕ ಜಾಲತಾಣಗಳ ದೈತ್ಯ ವಾಟ್ಸ್ಯಾಪ್ ನಿತ್ಯ ನಿರಂತರ ತನ್ನ ಬಳಕೆದಾರರಿಗೆ ಹೊಸತನ್ನು ನೀಡುತ್ತಲೇ ಇರುತ್ತದೆ. ಈಗ ತನ್ನ ಬಳಕೆದಾರರಿಗೆ ಮಗದೊಂದು ವಿಶೇಷತೆಯನ್ನು ನೀಡುತ್ತಿದ್ದು, ಆ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ನಿಮ್ಮಲ್ಲಿದ್ದರೇ, ಈ ಲೇಖನವನ್ನು ಓದಿ.
ಹೌದು, ವಾಟ್ಸ್ಯಾಪ್ ಡಿಸ್ ಅಪಿಯರಿಂಗ್ ಚಾಟ್ಸ್ ವಿಶೇಷತೆಯ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಈ ಮೋಡ್ ವಾಟ್ಸ್ಯಾಪ್ ನಲ್ಲಿ ಒನ್ ಆನ್ ಚಾಟ್ ಹಾಗೂ ಗ್ರೂಪ್ ಚಾಟ್ ಗಳಿಗೆ ಲಭ್ಯವಿರುತ್ತದೆ. ಈ ವಿಶೇಷತೆಯು ಈಗಾಗಲೇ ಅಸ್ತಿತ್ವದಲ್ಲಿರುವ ಡಿಸ್ ಅಪಿಯರಿಂಗ್ ಮೆಸೇಜ್ ವಿಶೇಷತೆಯ ವಿಸ್ತೃತ ರೂಪವಾಗಿದೆ.
ಇದನ್ನೂ ಓದಿ : ಕಳಪೆ ಕೀಟನಾಶಕ, ಬೀಜ ಮತ್ತು ರಸಗೊಬ್ಬರ ಮಾರಾಟ ಹಿನ್ನೆಲೆ :ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ
ವಾಟ್ಸ್ಯಾಪ್ ಈ ನಿಯಮವನ್ನು ಅತಿ ಶೀಘ್ರದಲ್ಲಿ ಬಳಕೆದಾರರಿಗೆ ಬಳಕೆಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಫೇಸ್ ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಮತ್ತು ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್ ಕಾರ್ಟ್ ಇಬ್ಬರೂ ಈ ಫೀಚರ್ ಅಥವಾ ವಿಶೇಷತೆ ಶೀಘ್ರದಲ್ಲೇ ಪ್ಲ್ಯಾಟ್ ಫಾರಂ ನಲ್ಲಿ ಲಭ್ಯವಾಗುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ವಾಟ್ಸ್ಯಾಪ್ ಬಳಕೆದಾರರಿಗೆ ನೀಡುತ್ತಿರುವ ಈ ಡಿಸ್ ಅಪಿಯರಿಂಗ್ ಚಾಟ್ ವಿಶೇಷತೆಯು “ಹೊಸ ಚಾಟ್ ಥ್ರೆಡ್ ಗಳನ್ನು ಸ್ವಯಂಚಾಲಿತವಾಗಿ ಅಲ್ಪಾವಧಿಯ ಚಾಟ್ ಗಳಾಗಿ ಪರಿವರ್ತಿಸುತ್ತದೆ.” ನೀವು ಅದನ್ನು ಸಕ್ರಿಯಗೊಳಿಸಿದಾಗ ಅದನ್ನು ಗೌಪ್ಯತೆ ಸೆಟ್ಟಿಂಗ್ ಗಳಲ್ಲಿ ಕಾಣಬಹುದು. ಪ್ರತಿ ಹೊಸ ಚಾಟ್ ಅಥವಾ ಗುಂಪಿನಲ್ಲಿರುವ ಎಲ್ಲಾ ಸಂದೇಶಗಳು ಅಲ್ಪಾವಧಿಯ ನಂತರ ಇಲ್ಲದಾಗುತ್ತದೆ.
ಯಾರಾದರೂ ತಮ್ಮ ಸಂದೇಶಗಳನ್ನು ಡಿಲೀಟ್ ಮಾಡಲು ಬಯಸಿದರೆ, ಅವರು ಡಿಸ್ ಅಪಿಯರಿಂಗ್ ಚಾಟ್ ವಿಶೇಷತೆಯನ್ನು ಆಫ್ ಮಾಡಬೇಕಾಗುತ್ತದೆ. ಮೂಲಗಳ ಪ್ರಕಾರ, ಹೊಸ ಚಾಟ್‌ನಲ್ಲಿ ಡಿಸ್ ಅಪಿಯರಿಂಗ್ ಚಾಟ್ ಮೋಡ್ ಆನ್ ಆದಾಗ ವಾಟ್ಸ್ಯಾಪ್ ಬಳಕೆದಾರರಿಗೆ ತಿಳಿಸುತ್ತದೆ.
ಇನ್ನು, ವಾಟ್ಸ್ಯಾಪ್ ಪ್ರಸ್ತುತ ಡಿಸ್ ಅಪಿಯರಿಂಗ್ ಹಾಗೂ ವೀವ್ ವನ್ಸ್ ಫೀಚರ್ ನನ್ನು ಸಹ ಒಳಗೊಂಡಿದೆ. ವೀವ್ ವನ್ಸ್ ವಿಶೇಷತೆಯು ಫೋಟೋ ಕಳುಹಿಸುವ ಅವಕಾಶವನ್ನು ನೀಡುತ್ತದೆ. ರಿಸೀವರ್ ಅದನ್ನು ಓಪನ್ ಮಾಡಿ ಮತ್ತೆ ವಾಟ್ಸ್ಯಾಪ್ ಕ್ಲೋಸ್ ಮಾಡಿದರೆ ಆ ಫೋಟೋ ಕಾಣಿಸುವುದಿಲ್ಲ. ಆದರೆ, ಪ್ರತಿ ಬಾರಿ ಫೋಟೋ ಅಥವಾ ವೀಡಿಯೋ ಕಳುಹಿಸುವಾಗಲೆಲ್ಲಾ ವೀವ್ ವನ್ಸ್ ಮಿಡಿಯಾವನ್ನು ಆಯ್ಕೆ ಮಾಡಬೇಕಾಗುತ್ತದೆ.
ಇದನ್ನೂ ಓದಿ : ವಿಧಾನಸಭಾ ಚುನಾವಣಾ ಪೂರ್ವ ಸಿದ್ಧತೆ ಹಿನ್ನೆಲೆ: ಪ್ರಫುಲ್ ಪಟೇಲ್ ಗೋವಾ ಭೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.