ವಾಟ್ಸ್ ಆ್ಯಪ್ ನಲ್ಲೂ ಬಂತು ಸ್ಟೇಟಸ್ ರಿಯಾಕ್ಷನ್ ಫೀಚರ್: ಬಳಸುವುದು ಹೇಗೆ?
Team Udayavani, Oct 16, 2022, 4:43 PM IST
ನವದೆಹಲಿ: ದಿನ ಕಳೆದಂತೆ ಜನಪ್ರಿಯ ಮೆಸೇಜ್ ಶೇರಿಂಗ್ ಆ್ಯಪ್ ವಾಟ್ಸ್ ಆ್ಯಪ್ ಹೊಸ ಹೊಸ ಫೀಚರ್ಸ್ ಗಳನ್ನು ಹೊರ ತರುತ್ತಿದೆ. ಇತ್ತೀಚೆಗೆ ವಾಟ್ಸ್ ಆ್ಯಪ್ ಗ್ರೂಪ್ ಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿತು. ಆ ಬಳಿಕ ಶೀಘ್ರದಲ್ಲಿ ಎಡಿಟ್ ಆಯ್ಕೆಯ ಫೀಚರನ್ನು ತರುವುದಾಗಿ ಹೇಳಿದೆ. ಈಗ ಮತ್ತೊಂದು ನೂತನ ಫೀಚರ್ ಹೊರ ತಂದಿದೆ.
WabetaInfo ಸಂಸ್ಥೆ ವರದಿ ಮಾಡಿರುವ ಪ್ರಕಾರ ವಾಟ್ಸ್ ಆ್ಯಪ್ ನಲ್ಲಿ ಇನ್ಮುಂದೆ ಸ್ಟೇಟಸ್ ಗಳಿಗೆ ರಿಯಾಕ್ಟ್ ಮಾಡುವ ಆಪ್ಷನ್ ಗಳು ಬರಲಿದೆ. ಇದಲ್ಲದೇ ಇನ್ಮುಂದೆ ಆಡ್ಮಿನ್ ಗಳಿಗೆ ಮಾತ್ರ ನೀವು ಗ್ರೂಪ್ ನಿಂದ ಹೊರ ಹೋದರೆ ( ಲೆಫ್ಟ್ ಆದರೆ) ನೋಟಿಫಿಕೇಶನ್ ಹೋಗಲಿದೆ. ಆಡ್ಮಿನ್ ನೀವು ಮಾಡಿದ ಮೆಸೇಜ್ ಗಳನ್ನು ಡಿಲೀಟ್ ಮಾಡಬಹುದು. ಮತ್ತು ಅದನ್ನು ಯಾರು ಡಿಲೀಟ್ ಮಾಡಿದ್ದಾರೆ ಎನ್ನುವುದನ್ನು ಗ್ರೂಪಿನ ಇತರ ಸದಸ್ಯರು ನೋಡಬಹುದು.
ನೀವು ಇನ್ಸ್ಟಾಗ್ರಾಮ್ ಬಳಸುತ್ತಿದ್ದರೆ, ಅದರಲ್ಲಿ ನೀವು ಹಾಕಿದ ಸ್ಟೋರಿಗೆ ಇತರರು ರಿಯಾಕ್ಟ್ ಮಾಡಬಹುದು. ಈಗ ಈ ಆಯ್ಕೆ ವಾಟ್ಸ್ ಆ್ಯಪ್ ನಲ್ಲೂ ಬಂದಿದೆ. ಮೊದಲು ವಾಟ್ಸ್ ಆ್ಯಪ್ ನಲ್ಲಿ ನಾವು ನೋಡಿದ ಸ್ಟೇಟಸ್ ಗೆ ರಿಪ್ಲೈ ಮಾಡಬಹುದಿತ್ತು. ಈಗ ರಿಪ್ಲೈಯೊಂದಿಗೆ ವಿವಿಧ ಬಗೆಯ ಇಮೋಜಿಗಳಿಂದ ರಿಯಾಕ್ಟ್ ಮಾಡಬಹುದು. ಸ್ವೈಪ್ ಆಪ್ ಮಾಡಿದರೆ ನಾನಾ ಇಮೋಜಿಗಳಿರುತ್ತವೆ ಅದರಲ್ಲಿ ನಮಗೆ ಯಾವುದು ಸೂಕ್ತ ಅದನ್ನು ಆಯ್ದುಕೊಂಡು ನಾವು ಸ್ಟೇಟಸ್ ಗೆ ರಿಯಾಕ್ಟ್ ಮಾಡಬಹುದು.
ಸದ್ಯ ಈ ಹೊಸ ಫೀಚರ್ಸ್ ಗಳು ಎಲ್ಲಾ ಆ್ಯಂಡ್ರಾಯ್ಡ್ ಮೊಬೈಲ್ ಗಳಿಗೆ ಬಂದಿಲ್ಲ. ಐಒಎಸ್ ಬಳಕೆದಾರರಿಗೆ ಇದು ಲಭ್ಯವಿದೆ ಶೀಘ್ರದಲ್ಲಿ ಎಲ್ಲರ ವಾಟ್ಸ್ ಆ್ಯಪ್ ಗೂ ಬರಲಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.