ಈ ವಾರ ವಾಟ್ಸಾಪ್ ನಲ್ಲಿ ಬರುತ್ತಿದೆ ಹೊಸ ಹೊಸ ಫೀಚರ್ ಗಳು: ಇಲ್ಲಿದೆ ಸಂಪೂರ್ಣ ಮಾಹಿತಿ
Team Udayavani, Aug 23, 2020, 4:13 PM IST
ನ್ಯೂಯಾರ್ಕ್: ಜಗತ್ತಿನ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಟಾಪ್ ಈ ವಾರ ಬಳಕೆದಾರರಿಗೆ ಬ್ಯಾಕ್ ಟು ಬ್ಯಾಕ್ ಶುಭ ಸುದ್ದಿ ನೀಡುತ್ತಿದೆ. ಮಾತ್ರವಲ್ಲದೆ ತನ್ನ ಅಪ್ಲಿಕೇಶನ್ ನನ್ನು ಇನ್ನಷ್ಟು ಆಕರ್ಷವಾಗಿಸುತ್ತಿದೆ.
ಹೌದು. ಈ ವಾರ ವಾಟ್ಸಾಪ್ ನಲ್ಲಿ ಹೊಸ ಹೊಸ ಅಪ್ ಡೇಟ್ ಗಳು ಬರಲಿದ್ದು ಚಿತ್ತಾಕರ್ಷಕ ಫೀಚರ್ ಗಳು ಸೇರ್ಪಡೆಗೊಳ್ಳುತ್ತಿದೆ. ಅವು ಯಾವುವು ಎಂಬುದನ್ನು ಗಮನಿಸೋಣ
- ಅಡ್ವಾನ್ಸ್ ಸರ್ಚ್ ಮೋಡ್ (Advanced Search mode): ಫೀಚರ್ ಪ್ರಕಾರ ವಾಟ್ಸಾಪ್ ನಲ್ಲಿ ಸರ್ಚ್ ಬಟನ್ ಇನ್ನಷ್ಟು ಸುಧಾರಿತವಾಗುತ್ತಿದೆ. ಅಂದರೇ ವಿಡಿಯೋ, ಫೋಟೋ, ಡಾಕ್ಯುಮೆಂಟ್ ಸೇರಿದಂತೆ ಇತರ ಬಟನ್ ಗಳನ್ನು ಸರ್ಚ್ ಆಯ್ಕೆಯಲ್ಲಿ ಸೇರಿಸಲಾಗಿದ್ದು, ನಿರ್ದಿಷ್ಟ ಮೆಸೇಜ್ ಹುಡುಕಾಡಲು ಸುಲಭ ಸಾಧ್ಯವಾಗುತ್ತದೆ. ಈ ಆಯ್ಕೆ ಈಗಾಗಲೇ ವಾಟ್ಸಾಪ್ ಬೇಟಾ ಆವೃತ್ತಿಯಲ್ಲಿ ಬಂದಿದೆ
- ಹೊಸ ಐಕಾನ್: ಕ್ಯಾಮಾರ ಸೇರಿದಂತೆ ವಿವಿಧ ಹೊಸ ಐಕಾನ್ ಗಳು ಜಾರಿಗೆ ಬರಲಿದ್ದು ಶಾರ್ಟ್ ಕಟ್ ಗಳು ಕೂಡ ಲಭ್ಯವಿರುತ್ತದೆ. ಈಗಾಗಲೇ ಮೆಸೆಂಜರ್ ರೂಂ ಅನ್ನು ಶಾರ್ಟ್ ಕಟ್ ಆಗಿ ನೀಡಲಾಗಿದೆ. ಈ ಫೀಚರ್ ಕೂಡ ವಾಟ್ಸಾಪ್ ಸಂಸ್ಥೆಯ ಬೇಟಾ ಆವೃತ್ತಿಯಲ್ಲಿ ಲಭ್ಯವಿದೆ.
- ಗ್ರೂಪ್ ಕಾಲ್ ಗಳಿಗೆ ರಿಂಗ್ ಟೂನ್: ವಾಟ್ಸಾಪ್ ಇದೀಗ ರಿಂಗ್ ಟೂನ್ ಗಳಲ್ಲೂ ಆಯ್ಕೆಯನ್ನು ನೀಡಿದೆ. ಬಳಕೆದಾರರು ತಮಗಿಷ್ಟವಾದ ರಿಂಗ್ ಟೂನ್ ಗಳನ್ನು ಪ್ರತೀ ವಾಟ್ಸಾಪ್ ಕಾಲ್ ಗಳಿಗೆ ಇರಿಸಿಕೊಳ್ಳಬಹುದು. ಈ ಫೀಚರ್ ಕೂಡ ಈಗಾಗಲೇ ಬೇಟಾ ಆವೃತ್ತಿಯಲ್ಲಿ ಲಭ್ಯವಿದೆ.
- ಸ್ಟಿಕ್ಕರ್ ಆ್ಯನಿಮೇಷನ್: ವಾಟ್ಸಾಪ್ ಇದೀಗ ಹೊಸ ಮಾದರಿಯ ಆ್ಯನಿಮೇಟೆಡ್ ಸ್ಟಿಕ್ಕರ್ ಅನ್ನು ಅಳವಡಿಸಿದೆ. ಮಾತ್ರವಲ್ಲದೆ ಈ ಸ್ಟಿಕ್ಕರ್ ಗಳು ಹಲವಾರು ಫ್ರೇಮ್ ಗಳನ್ನು ಕೂಡ ಒಳಗೊಂಡಿದೆ.
- ಕರೆ ಸುಧಾರಣೆಗಳು (Call UI improvements): ವಾಟ್ಸಾಪ್ ಕಾಲ್ ನ ಫೀಚರ್ ಗಳಲ್ಲಿ ಕೂಡ ಕೆಲವೊಂದು ಬದಲಾವಣೆ ಮಾಡಲಾಗಿದೆ. ಇಲ್ಲಿ ಕಂಡುಬರುವ ಮೂವಿಂಗ್ ಬಟನ್ ಗಳನ್ನು ಸ್ಕ್ರೀನ್ ನ ತಳಭಾಗದಲ್ಲಿ ಕಾಣಿಸುವಂತೆ ಪರಿವರ್ತಿಸಲಾಗಿದೆ. ಈ ಫೀಚರ್ ಇನ್ನೂ ಕೂಡ ಅಭಿವೃದ್ಧಿ ಹಂತದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.