![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 16, 2020, 9:07 PM IST
ಮಣಿಪಾಲ: ಜಗತ್ತಿನಾದ್ಯಂತ ತ್ವರಿತ ಸಂದೇಶ ಸೇವೆ ಒದಗಿಸುವ ವಾಟ್ಸ್‌ಆ್ಯಪ್ ಈಗ ಭಾರತದಲ್ಲಿ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಗ್ರಾಹಕರ ಆಸಕ್ತಿಯನ್ನು ಗಮನಿಸಿ ಸಂಸ್ಥೆಯು ಹೊಸ ಹೊಸ ಫೀಚರ್‌ಗಳನ್ನು ಸಿದ್ಧಪಡಿಸುತ್ತಿದೆ. ಮುಂಬರುವ ದಿನಗಳಲ್ಲಿ ವಾಟ್ಸ್‌ಆ್ಯಪ್ ವಿಮೆ ಮತ್ತು ಪಿಂಚಣಿಯಂತಹ ಪ್ರಮುಖ ಸೇವೆಗಳನ್ನು ಹೊರ ತರಲಿದೆ.
ಭಾರತದಲ್ಲಿ ತನ್ನ ಬಳಕೆದಾರರಿಗೆ ಹಣಕಾಸು ಸೇವೆಗಳಿಗೆ ವ್ಯಾಪಕ ಅವಕಾಶವನ್ನು ಒದಗಿಸಲು ಈ ವರ್ಷದ ಅಂತ್ಯದ ವೇಳೆಗೆ ಸ್ಯಾಚೆಟ್-ಗಾತ್ರದ ಆರೋಗ್ಯ ವಿಮೆಯನ್ನು ತನ್ನ ಪ್ಲಾಟ್‌ಫಾರ್ಮ್ ಮೂಲಕ ಖರೀದಿಸಲು ಅನುಕೂಲವಾಗಲಿದೆ ಎಂದು ವಾಟ್ಸ್‌ಆ್ಯಪ್ ಬುಧವಾರ ಹೇಳಿದೆ.
ಸ್ಯಾಚೆಟ್ ಗಾತ್ರದ ವಿಮಾ ಯೋಜನೆಗಳು ವಿಶೇಷ ಅಗತ್ಯ-ಆಧಾರಿತ ವಿಮೆಯನ್ನು ನೀಡುತ್ತವೆ. ಜತೆಗೆ ಪ್ರೀಮಿಯಂ ಮತ್ತು ವಿಮಾ ರಕ್ಷಣೆ ಎರಡೂ ಕಡಿಮೆ ದರದಲ್ಲಿರಲಿದೆ. ಈ ವರ್ಷದ ಅಂತ್ಯದ ವೇಳೆಗೆ ಎಸ್‌ಬಿಐ ಜನರಲ್ ಕೈಗೆಟುಕುವ ಆರೋಗ್ಯ ವಿಮೆಯನ್ನು ವಾಟ್ಸ್‌ಆ್ಯಪ್ ಮೂಲಕ ಖರೀದಿಸಬಹುದು ಎಂದು ಹೇಳಲಾಗುತ್ತಿದೆ.
ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಮೊಬೈಲ್ ಸಾಧನದ ಮೂಲಕ ಅತ್ಯಂತ ಮೂಲಭೂತ ಹಣಕಾಸು ಸೇವೆಗಳು ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಸೇವೆಗಳನ್ನು ಪಡೆಯುವಂತಾಗಲು ವಾಟ್ಸ್‌ಆ್ಯಪ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಾಟ್ಸ್‌ಆ್ಯಪ್ ಇಂಡಿಯಾದ ಮುಖ್ಯಸ್ಥ ಅಭಿಜೀತ್ ಬೋಸ್ ಹೇಳಿದ್ದಾರೆ.
ಈ ವರ್ಷದ ಅಂತ್ಯದ ವೇಳೆಗೆ ಜನರು ವಾಟ್ಸ್‌ಆ್ಯಪ್ ಮೂಲಕ ಕೈಗೆಟುಕುವ ಸ್ಯಾಚೆಟ್ ಗಾತ್ರದ ಆರೋಗ್ಯ ವಿಮೆಯನ್ನು ಖರೀದಿಸಲು ಸಾಧ್ಯವಾಗಲಿದೆ ಎಂದಿದ್ದಾರೆ. ವಾಟ್ಸ್‌ಆ್ಯಪ್ ಮೂಲಕ ಯುಪಿಐ ಬಳಸಿ ಪಾವತಿ ವ್ಯವಸ್ಥೆಯನ್ನು ಇತ್ತೀಚೆಗೆ ಆರಂಭಿಸಿತ್ತು. ಇದು ದೇಶದಲ್ಲಿ ಬೇಡಿಯ ರೀತಿಯಲ್ಲಿ ಬಳಸಲಾಗುತ್ತಿದೆ.
ಈ ಯೋಜನೆಯ ಪ್ರಾರಂಭದ ಮೊದಲ ಹಂತದಲ್ಲಿ, ಕಂಪೆನಿಯು ಆರೋಗ್ಯ ವಿಮೆಗಾಗಿ ಎಸ್‌ಬಿಐ ಜನರಲ್ ಜತೆ ಪಾಲುದಾರಿಕೆ ಹೊಂದಿದೆ. ಅಲ್ಲದೆ ಪಿಂಚಣಿ ಪ್ರಾರಂಭಿಸಲು ಎಚ್‌ಡಿಎಫ್‌ಸಿ ಪಿಂಚಣಿ ಯೋಜನೆ (ಎನ್‌ಪಿಎಸ್) ಉತ್ಪನ್ನವನ್ನು ಪ್ರಾರಂಭಿಸಲು ಸಿದ್ಧವಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಬ್ಯಾಂಕಿಂಗ್ ಪಾಲುದಾರರ ಬೆಂಬಲದೊಂದಿಗೆ ” ಯುಪಿಐ ಮೂಲಕ ಪಾವತಿ ಫೀಚರ್ ವೈಶಿಷ್ಟ್ಯವು ಈಗ ದೇಶಾದ್ಯಂತದ ಬಳಕೆದಾರರಿಗೆ (ಪ್ರಸ್ತುತ 20 ಮಿಲಿಯನ್ ಬಳಕೆದಾರರಿಗೆ) ಲಭ್ಯವಿದೆ.
ಭಾರತದಲ್ಲಿ 400 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಈ ವರ್ಷದ ಅಂತ್ಯದ ವೇಳೆಗೆ, ಜನರು ಕೈಗೆಟುಕುವ ಸ್ಯಾಚೆಟ್ ಗಾತ್ರವನ್ನು ಖರೀದಿಸಲು ಸಾಧ್ಯವಾಗಲಿದೆ. ಎಸ್‌ಬಿಐ ಜನರಲ್‌ನಿಂದ ಕೈಗೆಟುಕುವ ಆರೋಗ್ಯ ವಿಮಾ ರಕ್ಷಣೆಯನ್ನು ವಾಟ್ಸ್‌ಆ್ಯಪ್ ಮೂಲಕ ಖರೀದಿಸಬಹುದಾಗಿದೆ.
ಭಾರತವನ್ನು ತನ್ನ ಅತೀದೊಡ್ಡ ಮಾರುಕಟ್ಟೆಯೆಂದು ಪರಿಗಣಿಸುವ ವಾಟ್ಸ್‌ಆ್ಯಪ್ ದೇಶದ ಪೇಟಿಎಂ, ಗೂಗಲ್ ಪೇ, ವಾಲ್ಮಾರ್ಟ್ ಒಡೆತನದ ಫೋನ್ ಪೇ ಮತ್ತು ಅಮೆಜಾನ್ ಪೇ ನಂತಹ ಪಾವತಿ ಅಗ್ರಿಗೇಟರ್‌ಗಳ ಜತೆ ಸ್ಪರ್ಧಿಸಲಿದೆ. ಇದಕ್ಕೆ ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರಿರುವ ಕಾರಣ ಬಹಳ ಬೇಗನೇ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಲಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.