ಭಾರತದಲ್ಲಿ 5ಜಿ ಸೌಲಭ್ಯ ಯಾವಾಗ?
ಮಾರ್ಚ್ 1 ರಂದು ಮತ್ತೆ 4ಜಿ ತರಂಗಾಂತರದ ಹರಾಜು ನಡೆಯಲಿದೆ.
Team Udayavani, Feb 2, 2021, 5:00 PM IST
ಭಾರತದಲ್ಲಿ ಈಗ ಬಿಡುಗಡೆಯಾಗುತ್ತಿರುವ ಅನೇಕ ಮೊಬೈಲ್ ಫೋನ್ ಗಳು 5ಜಿ ನೆಟ್ ವರ್ಕ್ ಅನ್ನು ಬೆಂಬಲಿಸುವ ಸೌಲಭ್ಯ ನೀಡುತ್ತಿವೆ. ಹೊಸದಾಗಿ ಫೋನ್ ಕೊಳ್ಳುವ ಕೆಲವರು, ಮುಂದೆ 5 ಜಿ ಬರುವುದರಿಂದ 5ಜಿ ಸೌಲಭ್ಯ ಇರುವ ಫೋನ್‌ಗಳನ್ನೇ ಕೊಳ್ಳೋಣ, ಹೆಚ್ಚಿನ ದರವಾದರೂ ಸರಿ ಎಂದು 5ಜಿ ಇರುವ ಫೋನ್‌ಗಳನ್ನು ಕೊಳ್ಳುತ್ತಿದ್ದಾರೆ. ಆದರೆ ಎಲ್ಲರನ್ನೂ ಕಾಡುವ ಪ್ರಶ್ನೆ ಎಂದರೆ, ಭಾರತದಲ್ಲಿ 5ಜಿ ನೆಟ್‌ವರ್ಕ್ ದೊರಕುವುದು ಯಾವಾಗ?! ಈ ಪ್ರಶ್ನೆಗೆ ಉತ್ತರ ಭಾರತ ಸರ್ಕಾರದ ಮೇಲಿದೆ. ಅದು 5ಜಿ ತರಂಗಾಂತರಗಳನ್ನು ಮೊಬೈಲ್ ನೆಟ್‌ವರ್ಕ್ ಕಂಪೆನಿಗಳಿಗೆ ಹರಾಜಿನ ಮೂಲಕ ನೀಡಬೇಕಿದೆ.
ಅನೇಕ ದೇಶಗಳಲ್ಲಿ ಈಗಾಗಲೇ 5ಜಿ ನೆಟ್‌ವರ್ಕ್ ಲಭ್ಯವಾಗುತ್ತಿದೆ. ಭಾರತದಲ್ಲೂ 5ಜಿ ಸೌಲಭ್ಯ ನೀಡಲು ರಿಲಯನ್ಸ್ ಜಿಯೋ ಹಾಗೂ ಭಾರತೀಯ ಏರ್‌ಟೆಲ್ ತುದಿಗಾಲಿನಲ್ಲಿ ನಿಂತಿವೆ. 2021ರ ದ್ವಿತೀಯಾರ್ಧದಲ್ಲಿ ಅಂದರೆ, ಇನ್ನು ಆರು ತಿಂಗಳ ನಂತರ 5ಜಿ ನೆಟ್‌ವರ್ಕ್ ಕಳೆದ ಡಿಸೆಂಬರ್ ನಲ್ಲಿಯೇ ಜಿಯೋ ಪ್ರಕಟಿಸಿದೆ. ಇನ್ನು ಭಾರತೀಯ ಏರ್‌ಟೆಲ್, ಜ. 28ರಂದು ಹೈದರಾಬಾದ್ ಪ್ರದೇಶದಲ್ಲಿ 5ಜಿ ನೆಟ್‌ವರ್ಕ್‌ನ ಪ್ರಾಯೋಗಿಕ ಪರೀಕ್ಷೆ ನಡೆಸಿದೆ. ಭಾರತದಲ್ಲಿ 5ಜಿ ನೆಟ್ ವರ್ಕ್‌ನ ಪ್ರಾಯೋಗಿಕ ಪರೀಕ್ಷೆ ನಡೆಸಿದ ಮೊದಲ ಆಪರೇಟರ್ ತಾನು ಎಂದು ಏರ್‌ಟೆಲ್ ಹೇಳಿಕೊಂಡಿದೆ. 5ಜಿ ನೆಟ್ ವರ್ಕ್‌ಗಾಗಿ ಎರಿಕ್‌ಸನ್ ಕಂಪೆನಿಯ ಸಹಯೋಗ ಹೊಂದಿದ್ದು ತಾನೀಗ 5ಜಿ ಸೌಲಭ್ಯ ನೀಡಲು ಸಿದ್ಧ. ನಮ್ಮದು ಈಗ 5ಜಿ ರೆಡಿ ನೆಟ್‌ವರ್ಕ್ ಎಂದು ಏರ್ ಟೆಲ್ ತಿಳಿಸಿದೆ.
ಸಿಮ್ ಬದಲಿಸುವ ಅಗತ್ಯವಿಲ್ಲ 5ಜಿ ತರಂಗಾಂತರ ಲಭ್ಯವಾದ ಬಳಿಕ ಏರ್ ಟೆಲ್ ಈಗ ಇರುವುದಕ್ಕಿಂತ 10 ಪಟ್ಟು ವೇಗದ ಡೌನ್‌ಲೋಡ್, ಅಪ್ ಲೋಡ್ ನೀಡುತ್ತದೆ. ಅಲ್ಲದೇ ಹೊಸ 5ಜಿ ನೆಟ್‌ವರ್ಕ್ ಗಾಗಿ, ಗ್ರಾಹಕರು ಈಗಿನ 4ಜಿ ಸಿಮ್‌ಗಳನ್ನು ಬದಲಿಸುವ ಅಗತ್ಯವಿಲ್ಲ ಎಂದು ಸಹ ಏರ್‌ಟೆಲ್ ತಿಳಿಸಿದೆ. 5ಜಿ ತರಂಗಾಂತರಗಳನ್ನು ಕೇಂದ್ರ ಸರ್ಕಾರ, ಕಳೆದ ವರ್ಷವೇ ಹರಾಜು ಹಾಕಬೇಕಿತ್ತು. ಆದರೆ ಟೆಲಿಕಾಂ ರಂಗದ ಆರ್ಥಿಕ ಕಷ್ಟಗಳಿಂದಾಗಿ ಹರಾಜು ನಡೆಯಲಿಲ್ಲ.
ಮಾರ್ಚ್ 1 ರಂದು ಮತ್ತೆ 4ಜಿ ತರಂಗಾಂತರದ ಹರಾಜು ನಡೆಯಲಿದೆ. ಇದಾದ ಬಳಿಕ ಅಂದರೆ ವರ್ಷದ ದ್ವಿತೀಯಾರ್ಧದಲ್ಲಿ 5ಜಿ ಹರಾಜು ನಡೆಯುವ ಸಾಧ್ಯತೆ ಇದೆ. 10 ಲಕ್ಷ 5ಜಿ ಫೋನ್‌ಗಳು ಏರ್‌ಟೆಲ್ ತಿಳಿಸಿರುವ ಮಾಹಿತಿಯ ಪ್ರಕಾರ, ಈಗಾಗಲೇ ಅವರ ನೆಟ್ ವರ್ಕ್ ನಲ್ಲಿ 10 ಲಕ್ಷ ಜನರು 5ಜಿ ಸವಲತ್ತು ಹೊಂದಿರುವ ಫೋನ್ ಗಳನ್ನು ಹೊಂದಿದ್ದಾರಂತೆ! ಏರ್ ಟೆಲ್ ಇರಲಿ, ಜಿಯೋ ಇರಲಿ, ಹೆಚ್ಚು ಜನ ಗ್ರಾಹಕರು 5ಜಿ ಸಾಮರ್ಥ್ಯದ ಫೋನ್‌ಗಳನ್ನು ಹೊಂದಿದ್ದಾಗಲಷ್ಟೇ ಅವರು ತಮ್ಮ ಹೊಸ ಸವಲತ್ತನ್ನು ಗ್ರಾಹಕರಿಗೆ ನೀಡಿ ಅದರಿಂದ ಲಾಭ ಪಡೆಯಲು ಸಾಧ್ಯ!
ಹೀಗಾಗಿ ನೆಟ್‌ವರ್ಕ್‌ದಾತ ಕಂಪೆನಿಗಳು (ಜಿಯೋ, ಏರ್ ಟೆಲ್, ವಿಐ) ಸರ್ಕಾರ ನೀಡುವ 5 ಜಿ ತರಂಗಾಂತರದ ಜೊತೆಗೆ, ಹೆಚ್ಚು ಗ್ರಾಹಕರು 5ಜಿ ಫೋನ್‌ಗಳನ್ನು ಬಳಸಲಿ ಎಂಬುದನ್ನೂ ಕಾಯುತ್ತಿವೆ! ಹೀಗಾಗಿ, 10 ಸಾವಿರದಿಂದ 15 ಸಾವಿರದವರೆಗಿನ ಮೊಬೈಲ್ ಫೋನ್ ಗಳಲ್ಲಿ 5ಜಿ ಸೌಲಭ್ಯ ಬಂದಾಗ ಹೆಚ್ಚು ಗ್ರಾಹಕರು 5ಜಿ ಫೋನ್ ಹೊಂದುತ್ತಾರೆ ಎಂಬುದು ಏರ್‌ಟೆಲ್ ಅಧಿಕಾರಿಯೊಬ್ಬರ ಅಭಿಪ್ರಾಯ.
ಈ ಎಲ್ಲ ಬೆಳವಣಿಗೆಗಳನ್ನೂ ನೋಡಿದಾಗ ಕೇಂದ್ರ ಸರ್ಕಾರ ಜುಲೈ-ಆಗಸ್ಟ್ ನಲ್ಲಿ ಹರಾಜು ನಡೆಸಿ 5ಜಿ ತರಂಗಾಂತರ ನೀಡಿದರೆ, ಅಕ್ಟೋಬರ್ ನವೆಂಬರ್‌ನಲ್ಲಿ ಕಂಪೆನಿಗಳು 5ಜಿ ನೆಟ್ ವರ್ಕ್ ಅನ್ನು ಗ್ರಾಹಕರಿಗೆ ಆರಂಭಿಕವಾಗಿ ಆಯ್ದ ಸರ್ಕಲ್‌ಗಳಲ್ಲಿ ನೀಡಬಹುದು. ತದನಂತರ ಅದನ್ನು ಎಲ್ಲೆಡೆ ವಿಸ್ತರಿಸಿ ಎಲ್ಲೆಡೆ 5ಜಿ ಸೌಲಭ್ಯ ದೊರಕಬೇಕೆಂದರೆ 2022ರ ಮಧ್ಯಭಾಗ ಆಗಬಹುದು.
5ಜಿಯಿಂದ ಲಾಭವೇನು?
5ಜಿ ಸಂಪೂರ್ಣ ಅನುಷ್ಠಾನಗೊಂಡರೆ, ಅದು ಈಗಿನ 4ಜಿ ಗಿಂತ 100 ಪಟ್ಟು ವೇಗವಾಗಿ ಡಾಟಾ ವರ್ಗಾಯಿಸುತ್ತದೆ. ಅಂದರೆ ಒಂದು ಎಚ್‌ಡಿ ಸಿನಿಮಾ ಸಂಪೂರ್ಣವಾಗಿ ಡೌನ್‌ಲೋಡ್ ಆಗಲು ಈಗಿನ 4ಜಿಯಲ್ಲಿ 50 ನಿಮಿಷ ತೆಗೆದುಕೊಂಡರೆ, 5ಜಿಯಲ್ಲಿ ಅದು ಕೇವಲ 9 ನಿಮಿಷದಲ್ಲಿ ಡೌನ್‌ಲೋಡ್ ಆಗುತ್ತದೆ! ಹೀಗಾಗಿ ನಿಮ್ಮ ಮೇಲ್‌ನಲ್ಲಿರುವ ಫೋಟೋಗಳು, ವಾಟ್ಸ್‌ಆ್ಯಪ್ ವಿಡಿಯೋಗಳು ಕ್ಷಣಾರ್ಧದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಡೌನ್ ಲೋಡ್ ಆಗುತ್ತವೆ!
ಕೆ.ಎಸ್.ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Mangaluru: ವಿರೋಧ ಹಿನ್ನೆಲೆ: ಸಜಂಕಾ ಡಿಜೆ ಪಾರ್ಟಿ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.