ಅತ್ಯುನ್ನತ ದರ್ಜೆಯ ಇನ್ನೊಂದು ಫೋನ್; ಒನ್ ಪ್ಲಸ್ ಕಡಿಮೆ ಮೈನಸ್!
15 ನಿಮಿಷ ಚಾರ್ಜ್ ಮಾಡಿದರೆ ಇಡೀ ದಿನ ಬ್ಯಾಟರಿ ಬರುತ್ತದೆ
Team Udayavani, Oct 19, 2020, 11:16 AM IST
ಮಿತವ್ಯಯದ ದರಕ್ಕೆ ಅತ್ಯುನ್ನತ ದರ್ಜೆಯ ಸ್ಮಾರ್ಟ್ ಫೋನ್ ನೀಡುವುದಕ್ಕೆ ಹೆಸರುವಾಸಿಯಾದ ಒನ್ ಪ್ಲಸ್ ಕಂಪೆನಿ ತನ್ನ ಹೊಸ ಮಾದರಿ ಒನ್ ಪ್ಲಸ್ 8ಟಿ ಫೋನನ್ನು ಇದೀಗ ತಾನೇ ಬಿಡುಗಡೆ ಮಾಡಿದೆ. ಒನ್‌ಪ್ಲಸ್ 8ರ ಕೆಲ ತಾಂತ್ರಿಕ ಅಂಶಗಳನ್ನು ಇನ್ನಷ್ಟು ಉತ್ತಮ ಪಡಿಸಿ 8ಟಿ ಮಾದರಿಯನ್ನು ಹೊರತರಲಾಗಿದೆ.
ಅಂಡ್ರಾಯ್ಡ್ 11: ಇದು ಅತ್ಯುನ್ನತ ದರ್ಜೆಯ ಸ್ನಾಪ್‌ಡ್ರಾಗನ್ 865 ಪೊ›ಸೆಸರ್ ಹೊಂದಿದೆ. ಇದರಲ್ಲಿ ಯ್ಡ್ 11ರ ಆವೃತ್ತಿಯ ಕಾರ್ಯಾಚರಣೆ ವ್ಯವಸ್ಥೆ ಇರುವುದು ವಿಶೇಷ.ಇದಕ್ಕೆಒನ್‌ಪ್ಲಸ್‌ನಆಕ್ಸಿಜನ್ 11 ಕಾರ್ಯಾಚರಣೆಯನ್ನು ಹೊಂದಿ ಸಲಾಗಿದೆ.
5ಜಿ ನೆಟ್ವರ್ಕ್ ಹೊಂದಿದೆ. ಆಲ್ವೇಸ್ ಆನ್ ಡಿಸ್‌ಪ್ಲೆ ವೈಶಿಷ್ಟ್ಯ ಹೊಂದಿದೆ. ಇದರ ವಿಶೇಷವೆಂದರೆ, ನೀವು ಮೊಬೈಲ್ ಫೋನ್ ಆಫ್ ಮಾಡಿದ್ದರೂ ಪರದೆಯ ಮೇಲೆ ಗಡಿಯಾರ ಅಥವಾ ರೇಖಾಚಿತ್ರ ಆನ್ ಆಗಿಯೇ ಇರುತ್ತದೆ.
39 ನಿಮಿಷದಲ್ಲಿ ಪೂರ್ಣ ಚಾರ್ಜ್!: ಈ ಮೊಬೈಲ್‌ನ ವಿಶೇಷವೆಂದರೆ 65 ವ್ಯಾಟ್‌ನ ಅತ್ಯಂತ ವೇಗದ ಚಾರ್ಜರ್. ಇದರ ಹಿಂದಿನ8,8 ಪ್ರೊ ಮೊಬೈಲ್‌ಗಳು30
ವ್ಯಾಟ್ ಚಾರ್ಜರ್ ಹೊಂದಿದ್ದವು. ಇದು ಅದರ ದುಪ್ಪಟ್ಟು ವ್ಯಾಟ್ ಹೊಂದಿದೆ. (10ವಿ/6.5ಎ). ಹಾಗಾಗಿ ಕೇವಲ 39 ನಿಮಿಷದಲ್ಲಿ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. 15 ನಿಮಿಷ ಚಾರ್ಜ್ ಮಾಡಿದರೆ ಇಡೀ ದಿನ ಬ್ಯಾಟರಿ ಬರುತ್ತದೆ ಎಂದು ಕಂಪೆನಿ ತಿಳಿಸಿದೆ.ಈ ಮೊಬೈಲ್ ನಲ್ಲಿ4500 ಎಂಎಎಚ್ ಬ್ಯಾಟರಿ ಇದೆ.
120 ಹರ್ಟ್ಜ್ ಡಿಸ್ಪ್ಲೇ: ಈ ಮೊಬೈಲ್ 6.55 ಇಂಚಿನ ಫುಲ್ ಎಚ್‌ಡಿಪ್ಲಸ್ ಅಮೋಲೆಡ್ ಪರದೆ ಹೊಂದಿದೆ. 120 ಹರ್ಟ್ಜ್ ಸರಾಗವಾಗಿ ಚಲಿಸುವ ಡಿಸ್ಪ್ಲೇ ಹೊಂದಿದೆ. ಡಿಸ್ ಪ್ಲೇನಲ್ಲೇ ಬೆರಳಚ್ಚು ಸ್ಕ್ಯಾನರ್ ಇದೆ.
ಕ್ಯಾಮರಾ: ಇದು ನಾಲ್ಕು ಲೆನ್ಸಿನ ಹಿಂಬದಿ ಕ್ಯಾಮರಾ ಹೊಂದಿದೆ. 49 ಮೆಗಾ ಪಿಕ್ಸಲ್ ಪ್ರಾಥಮಿಕ ಸೆನ್ಸರ್, 16 ಮೆ.ಪಿ. ವೈಡ್ ಆಂಗಲ್ ಲೆನ್ಸ್ , 5 ಮೆ.ಪಿ. ಮ್ಯಾಕ್ರೋ ಲೆನ್ಸ್ ಹಾಗೂ 2 ಮೆ.ಪಿ. ಮೊನೊಕ್ರೋಮ್ ಸೆನ್ಸರ್ ಹೊಂದಿದೆ. 16 ಮೆ.ಪಿ. ಸೆಲ್ಫಿ ಕ್ಯಾಮೆರಾ ಹೊಂದಿದೆ.
RAM ಮತ್ತು ROM: ಈ ಮೊಬೈಲ್ 12 ಜಿಬಿ ರ್ಯಾಮ್ ಮತ್ತು 256 ಜಿಬಿ ಆಂತರಿಕ ಸಂಗ್ರಹ ಹಾಗೂ 8 ಜಿಬಿ ರ್ಯಾಮ್ ಮತ್ತು 129 ಜಿಬಿ ಆಂತರಿಕ ಸಂಗ್ರಹದ ಎರಡು ಆವೃತ್ತಿ ಹೊಂದಿದೆ. 256ಜಿಬಿ ಆವೃತ್ತಿಗೆ 45,999 ರೂ.ಹಾಗೂ 128 ಜಿಬಿಆವೃತ್ತಿಗೆ 42,999 ರೂ. ದರವಿದೆ. ಗ್ರೀನ್ ಮತ್ತು ಸಿಲ್ವರ್‌ಕಲರ್‌ಗಳಲ್ಲಿ ಲಭ್ಯ.
ಅಮೆಜಾನ್.ಇನ್, ಒನ್ ಪ್ಲಸ್ .ಇನ್, ಒನ್‌ಪ್ಲಸ್ ಆಫ್ಲೈನ್ ಸ್ಟೋರ್‌ಗಳು ಮತ್ತು ಒನ್ ಪ್ಲಸ್ ಒಡಂಬಡಿಕೆಯ ಆಫ್ಲೈನ್ ಮಳಿಗೆಗಳಲ್ಲಿ ಅ.17ರಿಂದ
ಮಾರಾಟಕ್ಕೆ ಲಭ್ಯವಿದೆ. ಅಮೆಜಾನ್‌ನಲ್ಲಿ ಎಚ್‌ಡಿಎಫ್ಸಿ ಕಾರ್ಡ್ ಮೂಲ ಖರೀದಿಸಿದರೆ ಶೇ.10ರ ರಿಯಾಯಿತಿ ಸಹ ಇದೆ.
ಪವರ್ ಬ್ಯಾಂಕ್ ಕೂಡ ಲಭ್ಯ
ಈ ಮೊಬೈಲ್ ಜೊತೆಗೆ ಒನ್‌ಪ್ಲಸ್ ಇಯರ್ ಬಡ್ಸ್ ಝಡ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ದರ 2990 ರೂ. ಜೊತೆಗೆ ಇದೇ ಮೊದಲ ಬಾರಿ ಪವರ್
ಬ್ಯಾಂಕನ್ನೂ ಒನ್‌ಪ್ಲಸ್ ಹೊರತಂದಿದೆ. 10000 ಎಂಎಎಚ್‌ನ ಪವರ್ ಬ್ಯಾಂಕ್ ದರ1299 ರೂ. ಒನ್‌ಪ್ಲಸ್ ಬುಲೆಟ್ ವೈರ್ಲೆಸ್ ಝಡ್ ಬಾಸ್
ಎಡಿಷನ್ ಅನ್ನು (1999 ರೂ.) ಬಿಡುಗಡೆ ಮಾಡಲಾಗಿದೆ. ಇವೆಲ್ಲವೂ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ದೊರಕುತ್ತವೆ.
*ಕೆ.ಎಸ್. ಬನಶಂಕರ ಆರಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.