Windows@25: ಮೈಕ್ರೋಸಾಫ್ಟ್ ನ ಈ ಪಾಪ್ಯುಲರ್ OS ಬಗ್ಗೆ ನಿಮಗೆಷ್ಟು ಗೊತ್ತು?
Team Udayavani, Sep 21, 2020, 8:19 PM IST
ನವದೆಹಲಿ: ಮೈಕ್ರೋಸಾಫ್ಟ್ ನ ವಿಂಡೋಸ್ 25 ವರ್ಷಗಳನ್ನು ಪೂರ್ಣಗೊಳಿಸಿದೆ. 1995 ಆಗಸ್ಟ್ 24ರಂದು ವಿಶ್ವದ ಮೊದಲ ಅಪರೇಟಿಂಗ್ ಸಿಸ್ಸಮ್ ವಿಂಡೋಸ್ -95 ಬಿಡುಗಡೆಗೊಂಡಿತ್ತು. ತದನಂತರದಲ್ಲಿ ಕಂಪ್ಯೂಟರ್ ಬಳಕೆಯಲ್ಲಿ ವಿಂಡೋಸ್ -95 ತನ್ನ ಅಧಿಪತ್ಯವನ್ನು ಸ್ಥಾಪಿಸಿತ್ತು.
1995 ಆಗಸ್ಟ್ 24ರಂದು ಮೈಕ್ರೋ ಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಜೇ ಲೆನೋ ಈ ಅಪರೇಟಿಂಗ್ ಸಿಸ್ಟಂ ಅನ್ನು ಮೊದಲ ಬಾರಿಗೆ ಪರಿಸಚಯಿಸಿದ್ದರು. ಇದು ಬಳಕೆದಾರರ ಸ್ನೇಹಿ ಮಾತ್ರವಾಗಿದ್ದಲ್ಲದೆ ಕೆಲವೊಂದು ಅಭೂತಪೂರ್ವ ಫೀಚರ್ ಗಳನ್ನು ಒಳಗೊಂಡಿತ್ತು.
ವಿಂಡೋಸ್ -95ಗೆ 25 ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಈ ಅಪರೇಟಿಂಗ್ ಸಿಸ್ಟಮ್ ನಡೆದು ಬಂದ ಹಾದಿಯ ಕುರಿತಾಗಿ ಮೈಕ್ರೋ ಸಾಫ್ಟ್ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಹಲವಾರು ಬಳಕೆದಾರರು ಇಂದಿಗೂ ಕೂಡ ವಿಂಡೋಸ್ ನ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದು ಸ್ಟಾರ್ಟ್ ಮೆನು, ಟಾಸ್ಕ್ ಬಾರ್ ಮುಂತಾದ ಫೀಚರ್ ಗಳು ಹೆಚ್ಚು ಆಕರ್ಷಣಿಯವಾಗಿದೆ. ಮಾತ್ರವಲ್ಲದೆ ನಂತರದ ಕಾಲಘಟ್ಟದಲ್ಲಿ ಬಂದ ಕೆಲವು ಬದಲಾವಣೆಗಳು ಇನ್ನಷ್ಟು ಹೊಸತನಕ್ಕೆ ನಾಂದಿ ಹಾಡಿದವು ಎಂದು ವಿಂಡೋಸ್ ಪ್ರೋಗ್ರಾಂ ಮ್ಯಾನೇಜರ್ ಬ್ರ್ಯಾಂಡನ್ ತಿಳಿಸಿದ್ದಾರೆ.
ವಿಂಡೋಸ್-95 ಕುರಿತ ಕೆಲವೊಂದು ಮಹತ್ವದ ಮಾಹಿತಿಗಳು:
- 1995 ಆಗಸ್ಟ್ 24ರಂದು ಆರಂಭವಾದ ವಿಂಡೋಸ್- 95 ಗ್ರಾಹಕ ಆಧಾರಿತ ಆಪರೇಟಿಂಗ್ ಸಿಸ್ಟಂ ಆಗಿತ್ತು. ಆಗಸ್ಟ್ 15 ರಂದೇ ಇದರ ಸೇವೆ ಆರಂಭಿಸಲಾಯಿತಾದರೂ 24ರಿಂದ ಸಾರ್ವಜನಿಕವಾಗಿ ಲಭ್ಯವಾಯಿತು.
- ವಿಂಡೋಸ್ ಬಿಡುಗಡೆಯಾದ ನಂತರವಷ್ಟೇ ಹಲವರು ತಮ್ಮ ಸ್ವಂತ ಬಳಕೆಗಾಗಿ ಕಂಪ್ಯೂಟರ್ ಖರೀದಿಸಲು ಆರಂಭಿಸಿದರು. ಯಾಕೆಂದರೇ ಇದರಲ್ಲಿ ಇಂಟರ್ ನೆಟ್ ಸೇವೆ ಕೂಡ ಆರಂಭವಾಗಿತ್ತು.
- ವಿಂಡೋಸ್ -95 ಪ್ರಮುಖವಾಗಿ 4 ಫೀಚರ್ ನಿಂದ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿತ್ತು. ಮೊದಲಿಗೆ ಸ್ಟಾರ್ಟ್ ಬಟನ್, ಎಂ ಎಸ್ ಪೈಂಟ್ , ರಿಸೈಕಲ್ ಬಿನ್, ಟಾಸ್ಕ್ ಬಾರ್ ಆಯ್ಕೆ
- ವಿಂಡೋಸ್- 95 ಪ್ಲಗ್ & ಪ್ಲೇ ಫೀಚರ್ ಅನ್ನು ಕೂಡ ರಿಚಯಿಸಿತ್ತು. ಇದು ಸಾಫ್ಟ್ ವೇರ್ ಗಳನ್ನು ಅಟೋಮ್ಯಾಟಿಕ್ ಆಗಿ ಗುರುತಿಸಿ ಇನ್ ಸ್ಟಾಲ್ ಮಾಡಲು ನೆರವಾಗಿತ್ತು.
- ಇದರಲ್ಲಿ ಎಂಎಸ್ಎನ್ ಅಪ್ಲಿಕೇಷನ್ ಕೂಡ ಜನಪ್ರಿಯವಾಗಿತ್ತು. ಇದು ಬಳಕೆದಾರರಿಗೆ ಇಮೇಲ್ ಕಳುಹಿಸಲು, ಚಾಟ್ ರೂಂ ಬಳಕೆಗಾಗಿ ಹಾಗೂ ನ್ಯೂಸ್ ಓದಲು ನೆರವಾಗಿತ್ತು.
- ವಿಂಡೊಸ್ -95ನ ಯಶಸ್ವಿ ನಂತರ ವಿಂಡೋಸ್-98 ಕೂಡ ಹೊಸ ಹೊಸ ಫೀಚರ್ ಗಳೊಂದಿಗೆ ರಂಗಕ್ಕಿಳಿದಿತ್ತು. ಇದರ ಬೆನ್ನಲ್ಲೆ ಗೂಗಲ್ ಕೂಡ ಬಿಡುಗಡೆಗೊಂಡಿತ್ತು. 2001 ಡಿಸೆಂಬರ್ 31 ರಂದು ಮೈಕ್ರೋಸಾಫ್ಟ್ ವಿಂಡೋಸ್ -95 ಸೇವೆಯನ್ನು ಹಿಂದಕ್ಕೆ ಪಡೆದಿತ್ತು.
- ತದನಂತರಲ್ಲಿ ಅನೇಕ ವಿಂಡೋಸ್ ಅಪರೇಟಿಂಗ್ ಸಿಸ್ಟಂ ಗಳು ಬಿಡುಗಡೆಗೊಂಡಿವೆ. ವಿಂಡೋಸ್ 2000, XP, Vista, ವಿಂಡೋಸ್ -7, ವಿಂಡೋಸ್-8, ಇದೀಗ ವಿಂಡೋಸ್ -10 ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.