WordPress ಗೆ ಕಂಟಕ: ಹೊಸ ಅಪ್ಡೇಟ್ ಗೆ ತಡೆನೀಡಿದ ಆ್ಯಪಲ್, ಕಾರಣವೇನು ?
Team Udayavani, Aug 22, 2020, 1:21 PM IST
ನ್ಯೂಯಾರ್ಕ್: ಸಾಮಾನ್ಯ ಜನರಿಗೂ ತಮ್ಮ ಮೊಬೈಲ್ ನಲ್ಲೆ ವೆಬ್ ಸೈಟ್ ತೆರೆಯಲು ಅನುಕೂಲ ಮಾಡಿಕೊಟ್ಟಿರುವ ವರ್ಡ್ ಪ್ರೆಸ್ ಗೆ ಇದೀಗ ಕಂಟಕ ಎದುರಾಗಿದೆ. ಐಓಎಸ್ ವರ್ಡ್ ಪ್ರೆಸ್ ಆ್ಯಪ್ Update ಗೆ ಆ್ಯಪಲ್ ತಡೆ ನೀಡಿದ್ದು ಮಾತ್ರವಲ್ಲದೆ ಲಾಭದಲ್ಲಿನ 30% ಹಣಸಂದಾಯ ಮಾಡುವಂತೆ ಕೇಳಿಕೊಂಡಿದೆ.
Word press ಸಂಸ್ಥಾಪಕ ಮ್ಯಾಟ್ ಮುಲ್ಲೆನ್ವೆಗ್ ಈ ಕುರಿತು ಆರೋಪ ಮಾಡಿದ್ದು, ತಾವು ಗಳಿಸುವ ಆದಾಯದಲ್ಲಿ 30% ಹಣವನ್ನು ನೀಡಬೇಕೆಂದು ಆ್ಯಪಲ್ ಸಂಸ್ಥೆ ತಿಳಿಸಿದೆ. ಮಾತ್ರವಲ್ಲದೆ ಐಓಎಸ್ ಗಾಗಿ ವರ್ಡ್ ಪ್ರೆಸ್ ಮಾಡಿರುವ ಅಪ್ ಡೇಟ್ ವರ್ಷನ್ ಕೂಡ ತಡೆಹಿಡಿಯಲಾಗಿದೆ ಎಂದಿದ್ದಾರೆ.
ಆ್ಯಪಲ್ ನ ಈ ನಿರ್ಧಾರ ವರ್ಡ್ ಪ್ರೆಸ್ ಗೆ ಹೊಡೆತ ನೀಡಿದೆ ಎಂದು ಟೆಕ್ ತಂತ್ರಜ್ಞರು ತಿಳಿಸಿದ್ದಾರೆ. ವರ್ಡ್ ಪ್ರೆಸ್ ಸಂಪೂರ್ಣ ಉಚಿತವಾದ ವೆಬ್ ಸೈಟ್ ಆಗಿದ್ದು, ಕೇವಲ ಡೊಮೈನ್ ನಲ್ಲಿ ಅಥವಾ ಬ್ಲಾಗ್ ನಲ್ಲಿ ಮಾತ್ರ ಹಣಗಳಿಸುತ್ತದೆ. ಸಾಮಾನ್ಯವಾಗಿ ಬಳಕೆದಾರರು ವರ್ಡ್ ಪ್ರೆಸ್ ಮೂಲಕ ಸುಭವಾಗಿ ಡೊಮೈನ್ ನೇಮ್ ಪಡೆದು 3ಜಿಬಿ ವರೆಗಿನ ಸ್ಪೇಸ್ ಪಡೆಯಬುದಾಗಿದೆ.
ಅದಾಗ್ಯೂ ಈ ಕುರಿತು ಸ್ಪಷ್ಟನೆ ನೀಡಿರುವ ಆ್ಯಪಲ್ ಸಂಸ್ಥೆ, ವರ್ಡ್ ಪ್ರೆಸ್ ತನ್ನ ಆ್ಯಪ್ ನಲ್ಲಿ ಏನನ್ನೂ ಮಾರಾಟ ಮಾಡುವುದಿಲ್ಲ. ಬಳಕೆದಾರರಿಗೆ ಕಂಟೆಂಟ್ ಶೇರ್ ಮಾಡಲು ಅನುಕೂಲ ನೀಡಿ ಚಂದಾದಾರಿಕೆ ಪಡೆಯುತ್ತದೆ. ಇತರ ಫ್ಲ್ಯಾಟ್ ಫಾರ್ಮ್ ಗಳಿಂದ ಹೊಸ ಹೊಸ ಫೀಚರ್ ಗಳನ್ನು ಅಳವಡಿಸಿಕೊಳ್ಳ್ಳುತ್ತದೆ.
ಯಾವುದನ್ನೂ ಖರೀದಿಸದ ಹೊರತಾಗಿ ಬಳಕೆದಾರರು ವರ್ಡ್ ಪ್ರೆಸ್ ನಲ್ಲಿ ಏನನ್ನೂ ವಿಶೇಷವಾಗಿ ಮಾಡಲಾಗುವುದಿಲ್ಲ. ಇಲ್ಲಿ ಕೇವಲ ಫೈಲ್ ಗಳನ್ನು ಮತ್ತು ಥೀಮ್ ಗಳನ್ನು ಅಪ್ಲೋಡ್ ಮಾಡಲು ಮಾತ್ರ ಸಾದ್ಯವಾಗುತ್ತದೆ. ಇದು ಆ್ಯಪಲ್ ನೀತಿಗೆ ವಿರುದ್ಧವಾಗಿದೆ ಎಂದಿದೆ.
ಈ ಬಗ್ಗೆ ಮ್ಯಾಟ್ ಮುಲ್ಲೆನ್ವೆಗ್ ಹಲವಾರು ಬಾರಿ ಸ್ಪಷ್ಟನೆ ನೀಡಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ಎನ್ನಲಾಗಿದೆ, ಇದೀಗ ಐಓಎಸ್ ವರ್ಡ್ ಪ್ರೆಸ್ ನ್ನು ಅಟೋಮ್ಯಾಟಿಕ್ ಅಪ್ ಡೇಟ್ ಮಾಡಲು ಆ್ಯಪಲ್ ಸಂಸ್ಥೆ ಒಪ್ಪಿಕೊಂಡಿದೆ.
ಇದನ್ನೂ ಓದಿ: ಆ್ಯಪ್ ಸ್ಟೋರ್ ನಿಂದ ಜನಪ್ರಿಯ Fortnite Game ರಿಮೂವ್: ತಾರಕಕ್ಕೇರಿದ ಟೆಕ್ ದೈತ್ಯರ ಸಂಘರ್ಷ!
ಇತ್ತೀಚಿಗಷ್ಟೆ ಆ್ಯಪಲ್ ಜನಪ್ರಿಯ ಗೇಮಿಂಗ್ ಆ್ಯಪ್ ಫೋರ್ಟ್ ನೈಟ್ ಅನ್ನು ಕೂಡ ಇದೇ ಕಾರಣಕ್ಕಾಗಿ ತನ್ನ ಸ್ಟೋರ್ ನಿಂದ ತೆಗೆದುಹಾಕಿತ್ತು. ಆ ಮೂಲಕ ಆ್ಯಪ್ ಡೆವಲಪರ್ ಗಳಿಗೆ ಹೆಚ್ಚಿನ ಹಣಗಳಿಸುವ ಮಾರ್ಗ ಹುಡುಕಿಕೊಳ್ಳುವಂತೆ ತಿಳಿಹೇಳುವುದು ಮಾತ್ರವಲ್ಲದೆ 30% ಹಣಸಂದಾಯ ಮಾಡುವಂತೆ ಕೇಳಿಕೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?
Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ
Pushpa 2 trailer: ಪೈಸಾ ವಸೂಲ್ ಅವತಾರದಲ್ಲಿ ʼಪುಷ್ಪರಾಜ್ʼ; ಅಲ್ಲು ಭರ್ಜರಿ ಆ್ಯಕ್ಷನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.