ಯೂಟ್ಯೂಬ್ ಖಾತೆಗಳು ರದ್ದು? ; ವಾಣಿಜ್ಯವಾಗಿ ಲಾಭವಿಲ್ಲದ ಖಾತೆಗಳಿಗೆ ಕೊಕ್ ಸಂಭವ
Team Udayavani, Nov 12, 2019, 7:36 AM IST
ಹೊಸದಿಲ್ಲಿ: ಆನ್‌ಲೈನ್ ವೀಡಿಯೋ ಶೇರಿಂಗ್ ಸಂಸ್ಥೆಯಾದ ‘ಯೂ ಟ್ಯೂಬ್’, ತನ್ನ ಖಾತೆದಾರರಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ತನ್ನಲ್ಲಿರುವ ಖಾತೆಗಳಲ್ಲಿ ‘ವಾಣಿಜ್ಯವಾಗಿ ಅನುಪಯುಕ್ತ’ವಾಗಿರುವಂಥ ಖಾತೆಗಳನ್ನು ರದ್ದುಗೊಳಿಸುವುದಾಗಿ ಮುನ್ನೆಚ್ಚರಿಕೆ ನೀಡಿದೆ.
ಈ ಕುರಿತಾಗಿ, ಯೂ ಟ್ಯೂಬ್‌ನಲ್ಲಿ ಚಾನೆಲ್ (ವಾಹಿನಿ) ಹೊಂದಿರುವ ಎಲ್ಲ ಖಾಸಗಿ ಖಾತೆದಾರರಿಗೆ ಇ-ಮೇಲ್ ರವಾನಿಸಲಾಗಿದ್ದು, ‘ಹೆಚ್ಚು ಸಬ್‌ಸ್ಕ್ರೈಬರ್ಸ್ (ಚಂದಾದಾರರು) ಹೊಂದಿರದ, ಅಗಾಧ ಸಂಖ್ಯೆಯಲ್ಲಿ ಜನರು ವೀಕ್ಷಿಸದೇ ಇರುವ ವೀಡಿಯೋ ಕ್ಲಿಪ್ ಹೊಂದಿರುವ ಖಾತೆಗಳನ್ನು ರದ್ದುಗೊಳಿಸಲಾಗುತ್ತದೆ ಅಥವಾ ಗೂಗಲ್ ಖಾತೆಗಳ ಮೂಲಕ ಆ ಖಾತೆಗಳಿಗೆ ಲಗ್ಗೆಯಿಡುವ ಸೌಕರ್ಯವನ್ನು ಹಿಂಪಡೆಯಲಾಗುತ್ತದೆ’ ಎಂಬರ್ಥದ ಸಂದೇಶವನ್ನು ಯೂ ಟ್ಯೂಬ್ ತನ್ನ ಗ್ರಾಹಕರಿಗೆ ರವಾನಿಸಿದೆ ಎಂದು ಮೂಲಗಳು ತಿಳಿಸಿದೆ.
ತನ್ನ ಈ ನಿರ್ಧಾರದ ಹಿಂದೆ, ಯೂ ಟ್ಯೂಬ್‌ನಲ್ಲಿ ಉತ್ತಮ ಗುಣಮಟ್ಟದ, ನೋಡಲೇಬೇಕಾದ ವೀಡಿಯೋಗಳನ್ನು ಮಾತ್ರ ಉತ್ತೇಜಿಸುವ ಹಾಗೂ ಇಡೀ ಪ್ರಕ್ರಿಯೆಗೆ ಪಾರದರ್ಶಕತೆ ತರುವ ಉದ್ದೇಶವಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.