ಹೇಗಿರುತ್ತದೆ ರುದ್ರಾಕ್ಷಿ ಮರ? ಏಕಮುಖಿ ರುದ್ರಾಕ್ಷಿ ಶ್ರೇಷ್ಠವೇ? : ಇಲ್ಲಿದೆ ಫುಲ್ ಡಿಟೇಲ್ಸ್

ತರಂಗಾಂತರಂಗ

Team Udayavani, Aug 24, 2020, 5:42 PM IST

Rudraksha-06

ರುದ್ರಾಕ್ಷಿ ವೃಕವು ಟಲ್ಲಿವಾಸಿಯಾ ಜಾತಿಗೆ ಸೇರಿದ ಎಲಿಯೊಕಾರ್ಪಸ್‌ ಜೆನಿಟ್ರಸ್‌ ರೋಕ್ಸ್‌ ಎಂದು ಸಸ್ಯ ಶಾಸ್ತ್ರದಲ್ಲಿ ಗುರುತಿಸಲ್ಪಟ್ಟಿದೆ.ಸುಮಾರು 360 ತರಹದ ಇಂಥ ವೃಕ್ಷಗಳಿವೆ.

ಮಾವಿನ ಎಲೆಯಾಕಾರದ ನಿತ್ಯ ಹಸುರೆಲೆಗಳಿಂದ ಕಂಗೊಳಿಸುವ ಇವು ಸುಮಾರು 50ರಿಂದ 100 ಅಡಿಗಳಷ್ಟು ಎತ್ತರ ಬೆಳೆಯುತ್ತವೆ.

ಶಿವ ಪುರಾಣದ ಪ್ರಕಾರ, ಭಾರತದ ಉನ್ನತ ಪ್ರದೇಶ ಗಂಗಾ ನದಿ ತಟ, ಡೆಹ್ರಾಡೂನ್‌, ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಬೆಳೆಯುವುದಾದರೂ ರುದ್ರಾಕ್ಷಿಗಳು ನೇಪಾಳದಲ್ಲಿ ಸಿಗುವುದೆಂದು ಪ್ರಸಿದ್ಧಿ. ಆದರೆ ಇಂಡೋನೇಶ್ಯಾದಲ್ಲಿ ಅತಿ ಹೆಚ್ಚು (ಶೇ. 70), ನೇಪಾಳದಲ್ಲಿ (ಶೇ. 25)ದ ಮಾತ್ರವಲ್ಲದೆ ಹಲವಾರು ಪೌರಸ್‌ ಪ್ರದೇಶಗಳಲ್ಲಿ ಮಲೇಷ್ಯಾ, ಜಾವಾ, ಸುಮಾತ್ರಾ ಇತ್ಯಾದಿ ದೇಶಗಳಲ್ಲಿ ಬೆಳೆಯುತ್ತದೆ.

ಭಾರತ ಮತ್ತು ನೇಪಾಲದಲ್ಲಿ ದೊರೆಯುವ ರುದ್ರಾಕ್ಷಿಗಳು ಸುಮಾರು ಅರ್ಧದಿಂದ ಎರಡು ಇಂಚಿನಷ್ಟು ದೊಡ್ಡವು. ಇತರ ಕಡೆಯಲ್ಲಿ ಚುಕ್ಕಿ ರುದ್ರಾಕ್ಷಿಗಳು ಹೆಚ್ಚು ಸುಮಾರು ಏಳು – ಎಂಟು ವರ್ಷದ ಮರಗಳ ರೆಂಬೆ ಯೊಡೆದು, ಚಿಕ್ಕ ಚಿಕ್ಕ ಬಿಳಿ ಬಣ್ಣದ ಹೂಗಳ ಗೊಂಚಲಾಗಿ, ಫ‌ಲಿತ ಗೋಲಾಕಾರದ ಹಸುರು ಕಾಯಿಗಳಾಗುತ್ತವೆ.

ಸುಮಾರು ನಾಲ್ಕು – ಐದು ತಿಂಗಳುಗಳಲ್ಲಿ ಬೆಳೆದು, ನೀಲ ವರ್ಣದ ಹಣ್ಣುಗಳಾಗುತ್ತವೆ. ಇವುಗಳನ್ನು ಸುಲಿದು ಚಿಕ್ಕ ಬ್ರಷ್‌ನಿಂದ ಚೆನ್ನಾಗಿ ತೊಳೆಯಬೇಕು. ಒಂದು ವಾರ ಕಳೆದ ಮೇಲೆ ಇವುಗಳನ್ನು ಒಂದು ಅಥವಾ ಎರಡು ವಾರಗಳ ತನಕ ಎಳ್ಳಣ್ಣೆ  ಗಂಧದೆಣ್ಣೆ  ಅಥವಾ ಹಸುವಿನ ತುಪ್ಪದಲ್ಲಿರಿಸಬೇಕು. ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ  ಹೀಗೆ ಒಂದು ಎರಡು ವಾರ ಎಳ್ಳೆಣ್ಣೆಯಲ್ಲಿರಿಸಬಹುದು. ಇಂಥ ರುದ್ರಾಕ್ಷಿಗಳು ಸಾವಿರಾರು ವರ್ಷ ಬಾಳುತ್ತದೆ.

ಇದನ್ನೂ ಓದಿ: ರುದ್ರಾಕ್ಷಿ ಶಾರೀರಿಕ, ಮಾನಸಿಕ ಆರೋಗ್ಯದ ಗವಾಕ್ಷಿ- ಇಲ್ಲಿದೆ ವಿಶೇಷತೆಗಳು


ರಚನೆ
ರುದ್ರಾಕ್ಷಿ ಎಂದೊಡನೆ ‘ನಿಮ್ಮಲ್ಲಿ ಏಕಮುಖಿ ಇದ್ದರೆ ನನಗೆ ಕೊಡುವಿರಾ?’ ಎಂದು ಕೇಳುವವರೇ ಅಧಿಕ. ಶುದ್ಧೀಕರಿಸಿದ ರುದ್ರಾಕ್ಷಿ ಹೊರಮೈಯಲ್ಲಿ ಚಿತ್ರ – ವಿಚಿತ್ರ ಸಂಜ್ಞೆಗಳಂತಿರುವ ಉಬ್ಬು ರಚನೆಗಳಾಗಿದ್ದು ಅವನ್ನು ಜಗತ್ತಿನ ಹಲವಾರು ಭಾಷಾ ಲಿಪಿಗಳಲ್ಲಿ ‘ಓಂ’ ಎಂಬ ಅಕ್ಷರಗಳು ಎಂದು ಗುರುತಿಸಿದ್ದಾರೆ. ರುದ್ರಾಕ್ಷಿ ಮೇಲ್ಭಾಗದಿಂದ ತುದಿಯವರೆಗೆ ಮಧ್ಯಭಾಗದಲ್ಲಿರುವ ರಂಧ್ರದ ಮೂಲಕ ಹಾರ ಮಾಡಲು ಅನುಕೂಲ, ಹೊರ ಮೈಯಲ್ಲಿ ಹಲವು 0, 1, 2, 3, 4 ಇತ್ಯಾದಿ ರೇಖೆಗಳಿವೆ. ಏಕಮುಖಿಯಲ್ಲಿ ಒಂದು; ದ್ವಿಮುಖಿಯಲ್ಲಿ ಎರಡು, ತ್ರಿಮುಖಿಯಲ್ಲಿ ಮೂರು ಇತ್ಯಾದಿ ರೇಖೆಗಳಿವೆ. ಐದು ರೇಖೆಗಳಿದ್ದರೆ ಪಂಚಮುಖಿ, 11 ರೇಖೆಯಿದ್ದರೆ ಏಕಾದಶಮುಖಿಯೆನ್ನುತ್ತಾರೆ.

ಒಂದೇ ವೃಕ್ಷದಲ್ಲಿ ಇಂಥ ಹಲವಾರು ಮುಖಗಳು ದೊರಕುವುದಾದರೆ ಹೆಚ್ಚಿನ (ಶೇ. 90) ಪಂಚಮುಖಿಗಳು. 3, 4, 6, 7 ಮುಖಗಳು ಕೆಲವು ಮಾತ್ರ. ಹೆಚ್ಚು ಮುಖದ ರುದ್ರಾಕ್ಷಿಗಳು ಬಹಳ ಅಪರೂಪ. ನಮ್ಮಲ್ಲಿರುವ ಎರಡು ವೃಕ್ಷಗಳು ನೀಡಿರುವ ಸುಮಾರು ನಾಲ್ಕು ಸಾವಿರ ರುದ್ರಾಕ್ಷಿಗಳಲ್ಲಿ ಒಂದೇ ಒಂದು ಏಕಾದಶಮುಖಿಯು ಸಿಕ್ಕಿದೆ. ಗೋಲಾಕಾರದ ಏಕಮುಹಿಯು ಕೋಟಿಗಟ್ಟಲೆ ರುದ್ರಾಕ್ಷಿಗಳಲ್ಲಿ ಸಿಗುವುದು ಕಷ್ಟ.

ಇದನ್ನೂ ಓದಿ: ಔಷಧೀಯ ಗುಣಗಳ ರುದ್ರಾಕ್ಷಿ; ಇದರಲ್ಲಿರುವ ವಿಟಮಿನ್ ಗುಣದ ಸಂಪೂರ್ಣ ಮಾಹಿತಿ

ನಿಜವಾದ ಏಕಮುಖ ರುದ್ರಾಕ್ಷಿ ಇಷ್ಟರವರೆಗೆ ದೊರಕಲಿಲ್ಲ ಎನ್ನುವ ಹೇಳಿಕೆ ಇದೆ. ಆದುದರಿಂದ ಇದಕ್ಕೆ ಬೆಲೆ ಕಟ್ಟಲು ಅಸಾಧ್ಯ. ಲಕ್ಷಗಟ್ಟಲೆ ರೂಪಾಯಿಗೂ ದುರ್ಲಭ. ಆದರೆ ಮಾರುಕಟ್ಟೆಯಲ್ಲಿ ರುದ್ರಾಕ್ಷಿ ಹೊರ ಮೈ ರಚನೆಯನ್ನು ಹೋಲುವ ಅರ್ಧ ಚಂದ್ರಾಕಾರದ (ಕಿತ್ತಳೆ ಹಣ್ಣಿನ ಸೊಳೆಯಂತಿರುವ) ಏಕಮುಖಿ, ದ್ವಿಮುಖಿ ರುದ್ರಾಕ್ಷಿ ಗಳು ಕಡಿಮೆ ಬೆಲೆ, ಸುಮಾರು ರೂ. 300ರಿಂದ ರೂ. 500 ರ ಬೆಲೆಯಲ್ಲಿ ದೊರೆಯುತ್ತವೆ. ಇದು ರಾಮೇಶ್ವರ, ದಕ್ಷಿಣ ಭಾರತದ ಕೆಲವು ಕಡೆ ಮತ್ತು ಇಂಡೋನೇಷ್ಯಾ ಗಳಲ್ಲಿ ಬೆಳೆಯುತ್ತವೆ. ಇದಕ್ಕೆ  ಚಂದ್ರಮುಖಿಯೆಂದು ಹೆಸರು. ಇಂಥ  ಚಂದ್ರಮುಖಿ ರುದ್ರಾಕ್ಷಿ ಧಾರಣೆಯಿಂದಲೂ ಹಲವು ಉತ್ತಮ ಫ‌ಲ ದೊರೆಯುವುದು.

ಇದನ್ನೂ ಓದಿ: ರುದ್ರಾಕ್ಷಿ ಧಾರಣೆಯ ವೈಜ್ಞಾನಿಕ ಉಪಯೋಗಗಳು ನಿಮಗೆ ಗೊತ್ತೇ?

ಅಪೂರ್ವ, ಚಿತ್ರ
ಸಾಮಾನ್ಯ ರುದ್ರಾಕ್ಷಿ ಹೊರಮೈಯಲ್ಲಿ  ಆನೆ ಸೊಂಡಿಲಿನಂಥ ವಿಶೇಷ ರಚನೆ ಇದ್ದರೆ ಅದಕ್ಕೆ ಗಣೇಶ ರುದ್ರಾಕ್ಷಿ ಎನ್ನುತ್ತಾರೆ. ಹಾಗೆಯೇ ರುದ್ರಾಕ್ಷಿಗಳು ಪ್ರಾಕೃತಿಕವಾಗಿ ಸೇರಿಕೊಂಡಿದ್ದರೆ ಗೌರೀಶಂಕರ ರುದ್ರಾಕ್ಷಿ, ಮೂರು ರುದ್ರಾಕ್ಷಿಗಳು ಸೇರಿಕೊಂಡಿದ್ದರೆ ತ್ರಿಜುತಿ ಎಂದು ಕರೆಯುತ್ತಾರೆ. ಲೇಖಕರ ಮನೆಯಲ್ಲಿರುವ ಎರಡು ರುದ್ರಾಕ್ಷಿ ಮರಗಳಲ್ಲಿ ಬಿಡುತ್ತಿರುವ ಸಾವಿರಾರು ರುದ್ರಾಕ್ಷಿಯಲ್ಲಿ ಒಂದು ಗಣೇಶ ರುದ್ರಾಕ್ಷಿ ಮತ್ತು ಒಂದು ಏಕಾದಶ ರುದ್ರಾಕ್ಷಿಗಳು ಮಾತ್ರ ಸಿಕ್ಕಿವೆ.

ಇದನ್ನೂ ಓದಿ: ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details

ಮುಂದುವರಿಯುವುದು…

(ಮುಂದಿನ ಭಾಗದಲ್ಲಿ: ರುದ್ರಾಕ್ಷಿ ಪ್ರಭೇದಗಳು)

 

ಟಾಪ್ ನ್ಯೂಸ್

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food-Punjab

ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.