ಸಂಧ್ಯಾವಾಣಿ: ‘ಪ್ರಿಯ ಓದುಗರೇ..’ ಮತ್ತು ‘ಮನೋಜ್ಞ ರಾಮಾಯಣ’ದ ಧ್ವನಿ ರೂಪ

ಬದುಕಿನ ಸ್ವಾಸ್ಥ್ಯಕ್ಕೆ ದಾರಿ ದೀಪವಾಗಿರುವ ‘ಪ್ರಿಯ ಓದುಗರೇ...’ ಹಾಗೂ ಚಿಣ್ಣರ ವ್ಯಕ್ತಿತ್ವ ವಿಕಸನಕ್ಕಾಗಿ ‘ಮನೋಜ್ಞ ರಾಮಾಯಣ’ ಇದೀಗ ಡಾ. ಸಂಧ್ಯಾ ಎಸ್. ಪೈ ಅವರ ಮಧುರ ಧ್ವನಿಯಲ್ಲಿ

Team Udayavani, Aug 21, 2020, 12:58 PM IST

Sandhyavani-Final-Image

ಇದು ಕ್ಷೋಭೆಯ ಸಮಯ. ಪ್ರಾಕೃತಿಕ ಕ್ಷೋಭೆ, ಸಾಮಾಜಿಕ ಕ್ಷೋಭೆ, ರಾಜಕೀಯ ಕ್ಷೋಭೆ, ಮಾನಸಿಕ ಕ್ಷೋಭೆ.. ಹೀಗೆ ನಮ್ಮ ಬದುಕು ದಿನಬೆಳಗಾದರೆ ಕ್ಷೋಭೆಗಳ ಜ್ವಾಲೆಯಲ್ಲಿ ಸಿಲುಕಿ ನರಳುವಂತಾಗಿದೆ.

ಎಲ್ಲಾ ಕ್ಷೋಭೆಗಳಿಗೆ ಒಂದೊಂದು ಪರಿಹಾರವಿದ್ದರೆ ಮಾನಸಿಕ ಕ್ಷೋಭೆಗೆ ನಾವೇ ಪರಿಹಾರವನ್ನು ಕಂಡುಕೊಳ್ಳಬೇಕು. ಯಾಕೆಂದರೆ ಅದು ನಮ್ಮ ಅಂಕೆಯಲ್ಲಿರುವ ಮನಸ್ಸಿನಲ್ಲಿ ಉಂಟಾಗುವ ತಳಮಳ, ಖಿನ್ನತೆ, ವ್ಯಾಕುಲತೆಗೆ ಸಂಬಂಧಿಸಿದ್ದಲ್ಲವೇ?

ಜ್ಞಾನಿಗಳ ಮಾತು, ಆಪ್ತೇಷ್ಟರ ಸಾಂತ್ವನದ ನುಡಿಗಳು, ಯೋಗ-ಧ್ಯಾನ, ತಾವು ನಂಬುವ ದೈವ-ದೇವರ ಪ್ರಾರ್ಥನೆ ಹೀಗೆ ಮಾನಸಿಕ ಕ್ಷೋಭೆಯಿಂದ ಹೊರಬರಲು ಹಲವರು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ.

ಅನುಭವದಿಂದ ಕೂಡಿದ ಬರಹ ಮತ್ತು ಲೋಕಜ್ಞಾನದಿಂದ ಕೂಡಿದ ವ್ಯಕ್ತಿಗಳ ಮಾತು ಸಹ ನಮ್ಮ ಮನಸ್ಸಿಗೆ ಸಾಂತ್ವನದ ತಂಗಾಳಿಯನ್ನು ಬೀಸಬಲ್ಲ ಶಕ್ತಿಯನ್ನು ಹೊಂದಿದೆ.

ಅದಕ್ಕೊಂದು ಉತ್ತಮ ಉದಾಹರಣೆ ಎಂದರೆ, ಕಳೆದ ಹಲವಾರು ದಶಕಗಳಿಂದ ನಾಡಿನ ಮನೆಮಾತಾಗಿರುವ ‘ತರಂಗ’ ವಾರಪತ್ರಿಕೆಯಲ್ಲಿ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಡಾ. ಸಂಧ್ಯಾ ಎಸ್. ಪೈ ಅವರ ‘ಪ್ರಿಯ ಓದುಗರೇ…’ ಅಂಕಣ.

ಈ ಅಂಕಣದಲ್ಲಿ ತಿಮ್ಮಗುರುಗಳ ಜೀವನಾಮೃತ ಸಾಲುಗಳಿರುತ್ತವೆ, ಮುಲ್ಲಾ ನಸ್ರುದ್ದೀನ್ ನ ಸ್ವ-ಅನುಭವದ ಕಥೆಗಳಿರುತ್ತವೆ, ನಮ್ಮ ಪುರಾಣಗಳಿಂದ ಬಸಿದು ಕೊಟ್ಟ ಜೀವನ ಪಾಠದ ಕಥೆಗಳಿರುತ್ತವೆ. ಭಗವದ್ಗೀತೆಯ ಸಾಲುಗಳಿರುತ್ತವೆ. ಬುದ್ಧನ ಕಥೆಗಳಿರುತ್ತವೆ, ನಮ್ಮ ನಾಡಿನ ಜನಪದ ಜೀವನದ ಸಾರಗಳಿರುತ್ತವೆ.. ಹೀಗೆ ಎಲ್ಲವನ್ನೂ ಸಮಪಾಕವಾಗಿಸಿ ನೊಂದ ಮನಸ್ಸುಗಳಿಗೆ ಸಾಂತ್ವನದ ಕೈಗನ್ನಡಿ ಹಿಡಿಯುವ ಕೆಲಸವನ್ನು ಡಾ. ಸಂಧ್ಯಾ ಪೈ ಅವರು ಕಳೆದ ಹಲವಾರು ವರ್ಷಗಳಿಂದ ತಮ್ಮ ಅಕ್ಕರೆಯ ಅಕ್ಷರ ಸಾಲುಗಳಲ್ಲಿ ಓದುಗರಿಗೆ ನೀಡುತ್ತಾ ಬರುತ್ತಿದ್ದಾರೆ.

ಇದೀಗ, ‘ಪ್ರಿಯ ಓದುಗರೇ..’ಯಲ್ಲಿ ಪಡಿಮೂಡಿರುವ ಅಕ್ಷರ ಸಾಲುಗಳನ್ನು ಧ್ವನಿ ರೂಪದಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸುವ ಕೆಲಸವನ್ನು ‘ಪಾಡ್ ಕಾಸ್ಟಿಂಗ್’ (Podcasts) ಎಂಬ ಡಿಜಿಟಲ್ ವಿಧಾನದ ಮೂಲಕ ‘ಸಂಧ್ಯಾವಾಣಿ’ ಎಂಬ ಹೆಸರಿನಲ್ಲಿ udayavani.com ಮಾಡುತ್ತಿದೆ. ಅದೂ ಸ್ವತಃ ಡಾ. ಸಂಧ್ಯಾ ಎಸ್. ಪೈ ಅವರ ಮಧುರ ಧ್ವನಿಯಲ್ಲಿ.

ತಾಯಿಯೊಬ್ಬರು ತನ್ನ ಮಗುವಿಗೆ ನೀತಿ ಪಾಠ ಹೇಳುವಂತೆ ಸಂಧ್ಯಾ ಪೈ ಅವರು ನಮ್ಮಲ್ಲಿ ಜೀವನೋತ್ಸಾಹವನ್ನು ತುಂಬುವ ಮಾತುಗಳನ್ನು ಹೇಳಲಿದ್ದಾರೆ, ಅದುವೇ ‘ಸಂಧ್ಯಾವಾಣಿ’ ಎಂಬ ವಿನೂತನ ‘ಪಾಡ್ ಕಾಸ್ಟಿಂಗ್’ (Podcasting) ಮೂಲಕ. ಇಷ್ಟು ಮಾತ್ರವಲ್ಲದೇ, ಇದೇ ‘ತರಂಗ’ ವಾರಪತ್ರಿಕೆಯಲ್ಲಿ ಮುದ್ದು ಮಕ್ಕಳಿಗೂ ಸಂಧ್ಯಾ ಮಾಮಿಯಾಗಿ ಇವರು ಹೇಳುವ ಕಥೆಗಳು ಅಚ್ಚುಮೆಚ್ಚು. ಇದೀಗ ಆ ಕಥೆಗಳೂ ಸಹ ಅವರದ್ದೇ ಧ್ವನಿಯಲ್ಲಿ ಮಕ್ಕಳ ಮನಸ್ಸಿಗೆ ನಾಟುವಂತೆ, ಅವರ ಮುಗ್ದ ಮನಸ್ಸುಗಳನ್ನು ಅರಳಿಸುವಂತೆ ಸಂಧ್ಯಾ ಪೈ ಅವರ ಧ್ವನಿಯಲ್ಲಿ ಮೂಡಿಬರುತ್ತಿದೆ.

ನಮ್ಮ ನಾಡಿನ ಮಹಾಗ್ರಂಥಗಳಲ್ಲಿ ಒಂದಾದ ‘ರಾಮಾಯಣ’ದ ಕಥೆಗಳನ್ನು ‘ಮನೋಜ್ಞ ರಾಮಾಯಣ’ದ ರೂಪದಲ್ಲಿ ಸರಳವಾಗಿ ಚಿಣ್ಣರ ಮುಂದೆ ಪ್ರಸ್ತುತಪಡಿಸುವ ಕೆಲಸವನ್ನು ನಾವು ‘ಸಂಧ್ಯಾವಾಣಿ’ ಮೂಲಕ ಪ್ರಾರಂಭಿಸಿದ್ದೇವೆ.

ಅಕ್ಷರ ಲೋಕದಿಂದ, ದೃಶ್ಯ ಮಾಧ್ಯಮಕ್ಕೆ ಅಲ್ಲಿಂದ ಬಳಿಕ ಶ್ರಾವ್ಯ (ಧ್ವನಿ) ಮಾಧ್ಯಮಕ್ಕೆ ಜಗತ್ತು ಹೊರಳುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ ನಿಮ್ಮ ಕಿವಿಗಳಿಗಷ್ಟೇ ತಲುಪುವಂತೆ ಜೀವನೋತ್ಸಾಹದ ಮಾತುಗಳನ್ನು ಮತ್ತು ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಅಗಾಧತೆಯನ್ನು ಅವುಗಳ ಸಾರ ರೂಪದಲ್ಲಿ ಕೇಳಿಸುವ ನಮ್ಮ ಈ ಪ್ರಯತ್ನ ಕನ್ನಡ ಪತ್ರಿಕಾ ಮಾಧ್ಯಮದಲ್ಲೊಂದು ಕ್ರಾಂತಿಕಾರಿ ಹೆಜ್ಜೆಯೆಂದೇ ನಾವು ನಂಬಿದ್ದೇವೆ.

ನಿಮ್ಮೆಲ್ಲರ ಬೆಂಬಲ ಪ್ರೋತ್ಸಾಹ ಸಿಕ್ಕಿದಲ್ಲಿ ನಮ್ಮ ಈ ನಂಬಿಕೆ ಸುಳ್ಳಾಗದು!

‘ಸಂಧ್ಯಾವಾಣಿ’ಯನ್ನು ಆಲಿಸಲು ಈ QR ಕೋಡ್ ಸ್ಕ್ಯಾನ್ ಮಾಡಿ:

‘ಸಂಧ್ಯಾವಾಣಿ’ ಇದೀಗ ಈ ಕೆಳಗಿನ ಎಲ್ಲಾ ಪ್ಲ್ಯಾಟ್ ಫಾರಂಗಳಲ್ಲಿ ಲಭ್ಯವಿದೆ – ಈಗಲೇ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಸ್ಪೂರ್ತಿಯ ಮಾತುಗಳಿಗೆ ಕಿವಿಯಾಗಿ!:

Anchor:  https://anchor.fm/udayavani

Breaker: https://www.breaker.audio/sandhyavani

Google Podcast: https://bit.ly/2QfaD2B

Radio Public:  https://radiopublic.com/sandhyavani-GMLYrr

Spotify:  https://open.spotify.com/show/0AUoKPayIVuq3H24e8c1AO

Apple iTunes:  https://podcasts.apple.com/in/podcast/sandhyavani-ಸ-ಧ-ಯ-ವ-ಣ/id1527910783

Tune-In Radio: https://tunein.com/podcasts/Kids–Family-Podcasts/Sandhyavani-p1358528/

ಟಾಪ್ ನ್ಯೂಸ್

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.