‘ನನಗೆ ಸಾವಿರಾರು ಜನ್ಮಗಳಾಗಿವೆ ; ಅವೆಲ್ಲದರಲ್ಲೂ ತಂದೆ- ತಾಯಿಗಳಿದ್ದರು ಅದರಲ್ಲಿ ನಿವ್ಯಾರು?’
ಪುತ್ರ ಸಾವಿನ ಶೋಕದಿಂದ ಗೋಳಾಡುತ್ತಿದ್ದ ರಾಜ ಚಿತ್ರಕೇತು, ರಾಣಿ ಕೃತದ್ಯುತಿ ‘ಆತ್ಮ’ ಕೇಳುವ ಪ್ರಶ್ನೆಗಳಿಗೆ ನಿರುತ್ತರಾಗುತ್ತಾರೆ...!
Team Udayavani, Jul 29, 2020, 6:57 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾಗವತದಲ್ಲಿ ಬರುವ ಚಿತ್ರಕೇತು ಮಹಾರಾಜನ ಕಥೆಯಲ್ಲಿ ಅವನಿಗೆ ಹಲವು ಜನ ರಾಣಿಯರಿದ್ದರೂ ತನ್ನ ಅನಂತರ ರಾಜ್ಯವನ್ನಾಳಬಲ್ಲ ಒಬ್ಬ ಪುತ್ರನ ಸಂತಾನವಾಗಲಿಲ್ಲ.
ಆಂಗೀರಸ ಮುನಿಯು ಒಮ್ಮೆ ಮಹಾರಾಜನಿಗೆ ಆಶೀರ್ವದಿಸಿ, ‘ಮಹಾರಾಜ, ನಿನಗೆ ಒಬ್ಬ ಪುತ್ರ ಜನಿಸುತ್ತಾನೆ. ಅವನಿಂದಲೇ ನಿನಿಗೆ ಸುಖ-ದುಃಖ ಎರಡೂ ಉಂಟಾಗುತ್ತವೆ’ ಎಂದು ಹೇಳಿ ನಿರ್ಗಮಿಸುತ್ತಾನೆ.
ಸುಪ್ರೀತನಾದ ಮಹಾರಾಜ ಹೀಗೆಂದುಕೊಂಡನಂತೆ- ‘ನನಗೆ ಮಗನ ಜನನವಾಗುವುದರಿಂದ ಸಂತೋಷ ಉಂಟಾಗುತ್ತದೆ ಎಂಬುದು ಮುನಿವರ್ಯರ ಮಾತಿನ ತಾತ್ಪರ್ಯವಿರಬೇಕು. ಒಬ್ಬನೇ ಮಗನಾದ ಕಾರಣ, ಮುದ್ದಿನಿಂದ ಬೆಳೆಯುವ ಅವನು ಹೆಮ್ಮೆಯುಳ್ಳವನೂ, ಅವಿಧೇಯನೂ ಆಗಬಹುದೇನೋ, ಇರಲಿ. ಮಕ್ಕಳೇ ಇಲ್ಲದವ ನಾನು. ಮಕ್ಕಳೇ ಇಲ್ಲದಿರುವುದಕ್ಕಿಂತ ಅವಿದೇಯ ಮಗ ಎಷ್ಟೋ ವಾಸಿ’.
ಚಿತ್ರಕೇತುವಿನ ರಾಣಿ ಕೃತದ್ಯುತಿ ಗರ್ಭಿಣಿಯಾಗಿ, ಮುಂದೆ ಗಂಡು ಮಗುವಿಗೆ ಜನ್ಮನೀಡುತ್ತಾಳೆ. ಸಂತೋಷದಿಂದಿದ್ದ ರಾಜ – ರಾಣಿಯನ್ನು ಸಹಿಸಲಾರದ ರಾಜನ ಇತರು ರಾಣಿಯರು ಮಗುವನ್ನು ಕೊಂದುಬಿಡುತ್ತಾರೆ.
ಸತ್ತ ಮಗನ ಮುಂದೆ ಕುಳಿತು ಗೋಳಿಡುತ್ತಿದ್ದ ಆಜ ಆಂಗೀರಸ ಮುನಿಯನ್ನು ಕುರಿತು, ಒಂದೇ ಒಂದು ಬಾರಿ ತನ್ನ ಮಗನ ಆತ್ಮವನ್ನು ಕರೆಸುವಂತೆ ಬೇಡುತ್ತಾನೆ. ಒಮ್ಮೆ ಬಂದರೆ ತನ್ನ ಪ್ರೀತಿಯ ಪಾಶದಿಂದ ಬಂಧಿಸಿಡಬಲ್ಲೆ. ಎಂಬ ವಿಶ್ವಾಸ ಅವನದು!
ಆಗ ಅಲ್ಲಿಗೆ ಬಂಂದ ನಾರದ ಮುನಿಯು ತಮ್ಮ ಶಕ್ತಿಯಿಂದ ಸತ್ತ ಮಗುವಿನ ಪ್ರಾಣ ಮರಳುವಂತೆ ಮಾಡುತ್ತಾರೆ.
ಆಗ ರಾಜ- ರಾಣಿಯರು ತಮ್ಮ ಪ್ರೇಮವನ್ನು ನಾನಾ ರೀತಿಯಲ್ಲಿ ವಿವರಿಸುತ್ತಾರೆ. ‘ಕಂದಾ, ನಾವು ನಿನ್ನ ತಂದೆ – ತಾಯಿ, ನೀನಿಲ್ಲದೆ ಬದುಕಲಾರೆವು, ನೀನು ನಮ್ಮವ ಮರಳಿ ಬಾ’ ಎಂದು ಗೋಳಿಡುತ್ತಾರೆ.
ಆಗ ಆ ಆತ್ಮ ಹೇಳುವ ಮಾತುಗಳು, ಅದನ್ನು ತಿಳಿಯಬಲ್ಲವರ ಬದುಕಿನ ಗತಿಯನ್ನೇ ಬದಲಾಯಿಸಬಲ್ಲಷ್ಟು ಸತ್ವಯುತವಾಗಿವೆ.
ಇದನ್ನೂ ಓದಿ: ತರಂಗಾಂತರಂಗ: ಪುನರ್ಜನ್ಮ- ಹುಟ್ಟು, ಸಾವು, ಮರುಹುಟ್ಟು ; ಇವುಗಳ ಗುಟ್ಟೇನು?
ಅದು ಹೇಳುತ್ತದೆ: ‘ಯಾರು ತಂದೆ? ಯಾರು ತಾಯಿ? ನನಗೆ ಸಾವಿರಾರು ಜನ್ಮಗಳಾಗಿವೆ. ಅವೆಲ್ಲದರಲ್ಲೂ ತಂದೆ- ತಾಯಿಗಳಿದ್ದರು. ಅದರಲ್ಲಿ ನಿವ್ಯಾರು? ಇನ್ನು ನಾನು ನಿಮ್ಮವ ಎನ್ನುತ್ತಿರುವಿರಿ. ನಿಮ್ಮಿಂದ ನಾನು ಪಡೆದ ದೇಹವನ್ನು ನಿಮ್ಮಲ್ಲಿಯೇ ಬಿಟ್ಟು ಬಂದಿದ್ದೇನೆ.
ಇದನ್ನೂ ಓದಿ: ಪುರಾಣಗಳಲ್ಲಿ ಪುನರ್ಜನ್ಮದ ಉಲ್ಲೇಖ : ಅಭಿಮನ್ಯುವಿಗೆ ಗರ್ಭಾವಸ್ಥೆಯಲ್ಲೇ ಚಕ್ರವ್ಯೂಹದ ಪಾಠ!
ಅದು ಕೇವಲ ಒಂದು ಮನೆಯಾಗಿತ್ತು. ಅದನ್ನು ಸ್ವಲ್ಪವೇ ಕಾಲದ ಉಪಯೋಗಕ್ಕೆಂದು ನಿಮ್ಮಿಂದ ಪಡೆದಿದ್ದೆ. ಶೋಕಿಸಬೇಡಿ. ಈ ಜೀವಕ್ಕೆ ಯಾರೂ ಇಲ್ಲ. ಇರುವುದು ಅದು ಮಾಡಿರಬಹುದಾದ ಕರ್ಮಫಲ ಮಾತ್ರ. ಆದುದರಿಂದ ಮೋಹ ಬಿಡಿ.’ ಆಗ ರಾಜನಿಗೂ ಆತನ ರಾಣಿಯರಿಗೂ ಆದ್ಯಾತ್ಮಿಕ ಜ್ಞಾನದ ಅರಿವಾಗಿ ತಮ್ಮ ಮೋಹವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಸತ್ಯವನ್ನು ಒಪ್ಪಿಕೊಳ್ಳುತ್ತಾರೆ.
ಇದನ್ನೂ ಓದಿ: ಮನದಲ್ಲಿದ್ದ ತೀವ್ರ ಬಯಕೆಯೇ ಜಿಂಕೆಯ ಜನ್ಮ ತಾಳಲು ಕಾರಣವಾದ ‘ಜಡ ಭರತ’ನ ರೋಚಕ ಕಥೆ!
(ಮುಂದುವರಿಯುತ್ತದೆ…)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ
ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ
ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ
ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ
ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.