ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ತಾರಾತರಂಗ

Team Udayavani, Sep 9, 2020, 6:37 PM IST

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನಾಡಿನ ಜನಮೆಚ್ಚುಗೆಯ ವಾರಪತ್ರಿಕೆ ‘ತರಂಗ’ದಲ್ಲಿ ಸರಣಿ ಬರಹವಾಗಿ ಮೂಡಿಬಂದಿದ್ದ ಇಡಿಯ ಭಾರತದ ಎಲ್ಲಾ ಪ್ರಾಂತ್ಯಗಳ ಅಡುಗೆ ವಿಶೇಷಗಳಲ್ಲಿ ಕೆಲವನ್ನು – ಸಸ್ಯಾಹಾರಿ ಹಾಗೂ ಮಾಂಸಾಹಾರಿ ಅಡುಗೆ ವೈವಿಧ್ಯಗಳನ್ನು ರೆಸಿಪಿ ಸಮೇತ ಇದೀಗ ನಮ್ಮ ಡಿಜಿಟಲ್ ಓದುಗರ ಮುಂದಿಡುತ್ತಿದ್ದೇವೆ.

ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರಾಖಂಡ, ಹರಿಯಾಣ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಅಡುಗೆ ವೈವಿಧ್ಯಗಳನ್ನು ಓದುಗರಿಗೆ ಪರಿಚಯಿಸುವ ಉದ್ದೇಶ ಈ ತಾರಾತರಂಗ ಸರಣಿ ಲೇಖನದ್ದು. ಮೊದಲಿಗೆ ನಮ್ಮ ಭಾರತೀಯ ಆಹಾರ ವೈವಿಧ್ಯ ಪ್ರಪಂಚದ ಸಂಕ್ಷಿಪ್ತ ಪರಿಚಯ ಮಾಡಿಕೊಳ್ಳೋಣವಂತೆ…

ಭಾರತ ಭೌಗೋಳಿಕವಾಗಿ, ಹವಾಗುಣದಲ್ಲಿ ಪ್ರಾಕೃತಿಕ ಸಂಪತ್ತಿನಲ್ಲಿ ಜನವರ್ಗಗಳ ವಿಷಯದಲ್ಲಿ ಒಂದು ಪ್ರದೇಶದಿಂದ ಮತ್ತೂಂದು ತೀರಾ ಭಿನ್ನ ವಾಗಿರುವುದನ್ನು ಕಾಣುತ್ತೇವೆ. ಅದು ಅದರ ಶಕ್ತಿಯು ಹೌದು, ದೌರ್ಬಲ್ಯವೂ ನಿಜ ಎನ್ನಬಹುದು. ಈ ತಾರತಮ್ಯಗಳ ಫ‌ಲವಾಗಿ ಇಡಿಯ ಭಾರತದಲ್ಲಿ ಒಂದೊಂದು ಪ್ರದೇಶವು ಅಲ್ಲಿ ಹವಾಗುಣ, ನೈಸರ್ಗಿಕ ಸಂಪತ್ತಿನ ಗನುಗುಣವಾಗಿ ಆಹಾರಾಭ್ಯಾಸ ವನ್ನು ಮೈಗೂಡಿಸಿಕೊಂಡಿದೆ.

ಕಾಡು ಮನುಷ್ಯರು ಬೇಟೆಯಾಡುವುದು ಎಷ್ಟು ಸಹಜ ಗುಣವಾಗಿತ್ತು ಪ್ರಕೃತಿ ಒದಗಿಸಿದ ಗೆಡ್ಡೆ ಗೆಣಸು, ಹಣ್ಣು ಹಂಪಲು ನಿಂದ ಹೊಟ್ಟೆ ತುಂಬಿಸಿಕೊಳ್ಳುವುದು ಅಷ್ಟೇ ಅಪರಿಹಾರ್ಯವಾಗಿತ್ತು, ಆಹಾರದ ಅಭಾವ ಎದುರಾದಾಗ ಕೃಷಿಯ ಆವಿಷ್ಕಾರ ನಡೆದಿರಬೇಕು. ಮುಂದಿನದು ವಿವರಣೆಗೆ ಮೀರಿದ್ದು.

ಒಂದು ಪ್ರದೇಶದ ಅತ್ಯುತ್ತಮ ಅಡುಗೆ ವಿಧಾನ ಅಥವಾ ಒಂದು ನಿರ್ದಿಷ್ಟ ಪಂಗಡಕ್ಕೆ ಸೇರಿದ ಪಾಕವಿದ ಒಂದು ಪಾಸ್ ಪೋರ್ಟ್‌ ಇದ್ದಂತೆ. ಆ ಜನಾಂಗ ಏನು? ಅದರ ಅಭಿರುಚಿ ಏನು? ಅವರ ಹಿನ್ನೆಲೆ ಏನು? ಅವರ ಆಶೋತ್ತರಗಳು ಎಂಬುತ ಅವರ ಅಡುಗೆ ಕೈಗನ್ನಡಿ ಯಂತೆ ಅವರವರ ಅಡುಗೆ ಅವರ ಪೂರ್ವಿಕರು ಚರಿತ್ರೆ, ಅನ ಸಾಂಸ್ಕೃತಿಕ, ಆರೋಗ್ಯದ ಮಾಪನ ಇದ್ದಂತೆ.

ಮೋಘಲ್‌ ದೊರೆ ಬಾಬರನ ಕೊನೆಯ ದಾಳಿಯದು
ಹಿಂದಿನ ರಾತ್ರಿ ಶತ್ರು ಪಾಳಯದಲ್ಲಿ ಅಲ್ಲಲ್ಲಿ ಸಣ್ಣ ಉರಿಯುತ್ತಿರುವ ಬೆಂಕಿಯ ಕಾರಣವನ್ನು ತಿಳಿದುಕೊಂಡು ಬರುವಂತೆ ಬಾಬರ ದೂತರನ್ನು ಇಟ್ಟಿದ್ದನಂತೆ. ದೂತ ಹೋಗಿ ನೋಡಿಕೊಂಡು ಬಂದು, ಇದು ಶತ್ರು ಪಾಳಯ ಬೇರೆ ಬೇರೆ ಜಾತಿಯ, ಬೇರೆ ಬೇರೆ ಪಂಗಡಕ್ಕೆ ಸೇರಿದ ಸೈನಿಕರು ತಮ್ಮ ತಮ್ಮ ಅಡುಗೆಯನ್ನು ತಾವು ತಾವೇ ಮಾಡಿಕೊಳ್ಳುತ್ತಿರುವುದರಿಂದ ಎದ್ದ ಬೆಂಕಿ ಅದು” ಎಂದು ವರದಿ ಮಾಡಿದನಂತೆ. ಆಗ ಬಾಬರ ನಿಂದ ಹೊರಟ ಒಂದು ಉದ್ಧಾರ, ಹಾಗಿದ್ದರೆ, ನಾನು ಅವರನ್ನು ಶತ್ರುಗಳನ್ನು ಈಗಾಗಲೇ ಗೆದ್ದಾಯಿತು. ಊಟದಲ್ಲಿಲ್ಲದ ಒಗ್ಗಟ್ಟು ರಣರಂಗದಲ್ಲಿದೀತೇ? ಎಂದನಂತೆ.

ಭಾರತೀಯ ಪಾಕಶಾಸ್ತ್ರ ಜಗತ್ತಿನ ಎಲ್ಲೆಡೆ ಪ್ರಶಂಸೆಗೆ, ಮನ್ನಣೆಗೆ, ಜನಪ್ರಿಯತೆಗೆ ಒಳಗಾಗಿರುವುದನ್ನು ಚರಿತ್ರೆಯಲ್ಲಿ ಕಾಣುತ್ತೇವೆ. ಭಾರತೀಯ ಪಾಕ ವಿಧಾನದ ಮೂಲ ಮಂತ್ರ, ಅದರ ವೈವಿಧ್ಯ ಮತ್ತು ತರಾವಳಿ ರುಚಿ. ಭಾರತ ಹಿಂದಿನಿಂದಲೂ ಗಿಡ ಮೂಲಿಕೆಗಳು, ಸಾಂಬಾರ ಜಿನಸಿಗಳು ಹಾಗೂ ಅಡುಗೆಯಲ್ಲಿ ಉಪಯೋಗಿಸುವ ಇನಿತರ ಸಾಮಗ್ರಿಗಳ ಔಷಧೀಯ ಗುಣಗಳನ್ನು ಕಂಡುಕೊಂಡಿತ್ತು. ಉದಾಹರಣೆಗೆ ಬೆಳ್ಳುಳ್ಳಿ ರಕ್ತದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯಕಾರಿ. ಅದರ ಸೇವನೆಯಿಂದ ರಕ್ತದೊತ್ತಡ ಮತ್ತು ಹೃದಯಾಘಾತದ ಅಪಾಯವನ್ನು ತಪ್ಪಿಸಬಹುದು ಎಂಬುದು ಪ್ರಾಚೀನ ಭಾರತೀಯರಿಗೆ ತಿಳಿದಿತ್ತು


ಬೆಳ್ಳುಳ್ಳಿ ಹುಳುಕು, ದಾನಿ ಕೆಮ್ಮು ಮತ್ತು ಶೀತಕ್ಕೆ ರಾಮಬಾಣ. ದೇಹವನ್ನು ಬೆಚ್ಚಗಿಡುತ್ತದೆ ಶುಂಠಿ ಹೊಟ್ಟೆಯಲ್ಲಿ ಆಸಿಡಿಟಿಯನ್ನು ಕಡಿಮೆ ಮಾಡುತ್ತದೆ ಮತ್ತು ಅಲರ್ಜಿ ಬಾರದ ಹಾಗೆ ನೋಡಿಕೊಳ್ಳುತ್ತದೆ. ಹಾಗೆಯೇ ಜೀರ್ಣಕ್ಕೆ ಸಹಾಯಕಾರಿ, ಹಸಿಮೆಣಸಿನಲ್ಲಿ ವಿಟಮಿನ್ ಗಳು; ಜೀರಿಗೆ ಹೊಟ್ಟೆ ಏರುಪೇರು ಆಗದ ಹಾಗೆ ನೋಡಿಕೊಳ್ಳುತ್ತದೆ. ಪಟ್ಟಿ ಹೇಗೆ ಬೆಳೆಯುತ್ತಲೇ ಹೋಗುತ್ತದೆ. ಈ ಬಗೆ ಬಗೆಯ ವಸ್ತುಗಳನ್ನು ವೈವಿಧ್ಯಮಯ ರುಚಿಗೆ ಬಳಸಿದಂತೆ ಆರೋಗ್ಯವಂತ ಆಹಾರ ಪದ್ಧತಿಗೂ ಉಪಯೋಗಿಸಿಕೊಂಡಿದ್ದು ಭಾರತೀಯರ ಪಾಕ ಪ್ರಾವೀಣ್ಯಕ್ಕೆ ಸಾಕ್ಷಿ ಯಾವ ಯಾವ ವಸ್ತುಗಳನ್ನು ಎಷ್ಟೆಷ್ಟು ಪ್ರಮಾಣಗಳಲ್ಲಿ ಬಳಸಬೇಕೆನ್ನುವ ಹಾಗೆ ಬಳಸಿದರೆ ಅದರಿಂದ ಹೊರಬರುವ ರುಚಿ, ಪರಿಮಳ ಏನು ಎಂಬುದರ ಪೂರ್ಣ ಕಲ್ಪನೆ ಅವರಿಗಿತ್ತು. ಇಂಥ ಪಾಕ ವಿಧಾನ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದುದನ್ನು ನಾನು ನೋಡುತ್ತೇವೆ. ಆದ್ದರಿಂದಲೇ ದಿನಬೆಳಗಾಗುವುದರೊಳಗೆ ಯಾರೂ ಪಾಕ ಪ್ರವೀಣನಾದ ಉದಾಹರಣೆ ಇಲ್ಲದಿರುವುದಕ್ಕೆ ಕಾರಣ.

ರಾಜಮನೆತನಗಳಲ್ಲಿ ಜೀವನ, ಪ್ರೇಮ ಮತ್ತು ದ್ವೇಷಗಳಲ್ಲಿ ಊಟೋಪಚಾರಗಳು ಪಾತ್ರ ವಹಿಸಿದ್ದನ್ನು ಕಾಣುತ್ತೇವೆ. ಜೋಧಾಬಾಯಿ, ತನ್ನ ರುಚಿಕಟ್ಟಾದ ಅಡುಗೆಯಿಂದ ಅಕ್ಬರನ ಮನಸ್ಸನ್ನು ಗೆದ್ದುದನ್ನು ಚರಿತ್ರೆಕಾರರು ಉಲ್ಲೇಖಿಸುತ್ತಾರೆ. ರಾಣಾ ಪ್ರತಾಪ ಸಿಂಹ ತನ್ನ ಔತಣದ ಆಮಂತ್ರಣವನ್ನು ಕಡೆಗಣಿಸಿದನೆಂಬ ಸಿಟ್ಟಿನಿಂದ ಮಾನ್‌ಸಿಂಗ್‌ ಅವನ ಮೇಲೆ ದಂಡೆತ್ತಿ ಹೋದ ಘಟನೆ ಚರಿತ್ರೆಯಲ್ಲಿ ನಡೆದುಹೋಗಿದೆ.


ಹಿಂದಿನ ರಾಜರೆಲ್ಲ ರಸಜ್ಞರು, ಭೋಜನವೆಂಬುದು ಅವರಿಗೆ ಬರೀ ಹೊಟ್ಟೆ ತುಂಬಿಸುವ ಕಾಯಕವಲ್ಲ, ಅದೊಂದು ಪವಿತ್ರವಾದ ವಿಧ್ಯುಕ್ತವಾದ ಆಚರಣೆ. ಭೋಜನದ ವೇಳೆ ಪ್ರತಿಯೊಂದು ಆಹಾರ ವೈವಿಧ್ಯ ಟೇಬಲ್‌ಗೆ ಬಂದಾಗಲೂ ಸಂಭ್ರಮ. ಅದೊಂದು ವಿಶೇಷವಾದ ವಿಧಿ ಎಂದು ಪರಿಗಣಿಸಲಾಗುತ್ತಿದೆ. ಅಡುಗೆಯಲ್ಲಿ ಸಾಂಬಾರ ಜೀನಸುಗಳನ್ನು ಅಳತೆ ಮಾಡಿ ಹಾಕುವ ಪರಿಪಾಠವಿಲ್ಲ, ಅದು ಅಂದಾಜಿನಲ್ಲಿ ನಡೆಯುವ ಕೆಲಸ, ಅನುಭವದ ಪಾತಳಿಯಲ್ಲಿ ಆಗುವ ಕಾರ್ಯ,

ಹಿಂದೆ ಪ್ರಯಾಣ ಮತ್ತು ಸಂಪರ್ಕ ಕಷ್ಟಕರವಾಗಿದ್ದಾಗ ಆಯಾ ಪ್ರದೇಶಗಳಲ್ಲಿ ಸ್ಥಳೀಯವಾಗಿ ದೊರೆಯುವ ಗಿಡಮೂಲಿಕೆಗಳು, ಸಾಂಬಾರ ಜೀನಸುಗಳಷ್ಟೇ ಅಡುಗೆಗೆ ಬಳಕೆಯಾಗುತ್ತಿದ್ದವು. ಆ ಕಾರಣದಿಂದಾಗಿ ಗೃಹಿಣಿಯರು ತಮಗೆ ಲಭ್ಯವಿದ್ದ ಮಸಾಲೆ ಪದಾರ್ಥಗಳಲ್ಲಿ ತೃಪ್ತಿಪಟ್ಟುಕೊಂಡು ಅವುಗಳಲ್ಲೇ ನಾನಾ ಪ್ರಯೋಗಗಳನ್ನು ಮಾಡಬೇಕಾಗಿ ಬರುತ್ತಿತ್ತು.

ಹುರಿದು, ಅರೆದು, ಮಿಶ್ರಣ ಮಾಡಿ, ಅದರಲ್ಲೇ ನಾನಾ ಪ್ರಮಾಣಗಳ ಬಗೆಬಗೆಯ ಅನುಕ್ರಮಗಳು ಸತ್ತ ಬಳಸಿದ್ದರಿಂದ ವಿಧವಿಧದ ರುಚಿಗಳ ಆವಿಷ್ಕಾರ ಆಗುತ್ತಿದ್ದುದು ನಿಜ. ಆದ್ದರಿಂದಲೇ ಇದು ಭಾರತಾದ್ಯಂತ ಒಂದೇ ಬಗೆಯ ಆಹಾರ, ನಾನಾ ರುಚಿ, ಹದ, ಪರಿಮಳಗಳಲ್ಲಿ ವಿಜೃಂಭಿಸುತ್ತಿರುವುದು.
ಸಾಂಪ್ರದಾಯಿಕ ಆಹಾರಕ್ಕೆ ಇಂಗ್ಲಿಷ್‌ನಲ್ಲಿ ‘ಫ‌ುಡ್‌’ ಎಂಬ ಹೆಸರಿದ್ದರೂ ಈಗಿನದು ಅತ್ಯಾಧುನಿಕವಾದ್ದರಿಂದ ಕುಸಿನ್‌ ಎಂದು ಕರೆಸಿಕೊಳ್ಳುತ್ತದೆ. ಫ‌ುಡ್‌ – ಆಹಾರ – ಅಗತ್ಯಗಳಲ್ಲಿ ಒಂದಾದರೆ ಕುಸಿನ್ ನದು ತೃಪ್ತಿಗೊಳ್ಳದ ಆಸೆ. ಆಹಾರ ಹೊಟ್ಟೆಗೆ, ಕುಸಿನ್‌ ಮನಸ್ಸಿಗೆ ಆಹಾರ ಹೆಂಗಸಿನದ್ದು – ಕುಸಿನ್‌ ಗಂಡಸಿನದ್ದು ಆಹಾರ ಸ್ಥಳೀಯ – ಕುಸಿನ್‌ ಅಂತಾತಾಷ್ಟ್ರೀಯ ಆಹಾರ ದೈಹಿಕ – ಕುಸಿವ್‌ ಸಂಮೋಹನಕಾರಿ.

‘ಕುಸಿನ್‌’ ಎಂಬ ಪದ ಒಂದು ಕಾಲಕ್ಕೆ ಫ್ರೆಂಚ್‌ ಪಾಕ ವಿಧಾನಕ್ಕೆ ಮತ್ತು ಅದರ ಅಲಂಕಾರಕ್ಕೆ ಸಂಬಂಧಿಸಿದ್ದಾಗಿತ್ತು. ಈಗ ಅದು ಸಾರ್ವತ್ರಿಕ ಬಳಕೆ ಆಗುತ್ತಿದೆ, ಬಾಯಲ್ಲಿ ನೀರೂರಿಸುವ ಪಾಕ ವೈವಿಧ್ಯಗಳನ್ನು ‘ಕುಸಿನ್‌’ ಎಂಬ ಹೆಸರಿನಿಂದ ಕರೆಯುತ್ತಿದ್ದರು ಆಧುನಿಕ ನಳ ಮಹಾಶಯರು.
ಮುಂದುವರಿಯುವುದು…

(ಮುಂದೆ: ಭಾರತದ ಮುಕುಟ ಮಣಿ ಜಮ್ಮು ಕಾಶ್ಮೀರ ಭಾಗದ ಖಾದ್ಯ ವೈಭವ)

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food-Punjab

ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಗಳಲ್ಲಿ ಎಷ್ಟು ಪ್ರಬೇಧಗಳಿವೆ ಗೊತ್ತಾ? ಅವುಗಳನ್ನು ಧರಿಸಿದರೆ ಆಗುವ ಲಾಭಗಳೇನು?

ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.