Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

ಪ್ರತಿದಿನ ಸಾವಿರಾರು ಭಕ್ತರನ್ನು ಆಕರ್ಷಿಸುತ್ತ ಬೆಳೆಯುತ್ತಿದೆ.

Team Udayavani, Dec 20, 2024, 5:12 PM IST

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

ಬಂಡೆಗುಡ್ಡಗಳಿಂದ ಕೂಡಿದ್ದ ಹನುಮಂತನಗರದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿ.ಮಾದೇಗೌಡರು 1987ರಲ್ಲಿ ಭಾರತಿ ವಸತಿ ಶಾಲೆ ಆರಂಭಿಸಿದರು. ಕಾಲ ಉರುಳಿದಂತೆ ವಸತಿ ಶಾಲೆ ಜಾಗವನ್ನು ಧಾರ್ಮಿಕ ಕ್ಷೇತ್ರವನ್ನಾಗಿಸಬೇಕೆಂಬ ಬಯಕೆಯೊಂದಿಗೆ 1993ರಲ್ಲಿ ನಿರ್ಮಿಸಿದ ದೇಗುಲವೇ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರ. ಇಂದು ಈ ದೇಗುಲ ಪವಿತ್ರ ತೀರ್ಥಕ್ಷೇತ್ರವಾಗಿ ಬೆಳೆದು ನಿಂತಿದ್ದು, ಭಕ್ತರ ಬಯಕೆ, ಕಷ್ಟ, ಕಾರ್ಪಣ್ಯಗಳಿಗೆ ಪರಿಹಾರ ಒದಗಿಸುವ ಹಾಗೂ ಸಾಮೂಹಿಕ ವಿವಾಹ ನಡೆಯುವ ಪವಿತ್ರ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದೆ.

1993ರಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕಾಳಮುದ್ದನದೊಡ್ಡಿ (ಇಂದಿನ ಭಾರತೀನಗರ) ಸಮೀಪದ ಹನುಮಂತನಗರ ಎಂಬ ಸ್ಥಳದಲ್ಲಿ ನೂತನವಾಗಿ ಶ್ರೀ ಆತ್ಮಲಿಂಗೇಶ್ವರ ದೇವಾಲಯವು ದಿ.ಜಿ.ಮಾದೇಗೌಡರ ಪರಿಶ್ರಮದಿಂದ ನಿರ್ಮಾಣವಾಯಿತು.
ಈ ದೇವಾಲಯ ಅಂದು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ನಿರ್ಮಾಣಗೊಂಡ ಎರಡು ದಶಕಗಳಲ್ಲೇ ಅಚ್ಚರಿಯಾಗುವಂತೆ ಬೆಳೆದು ಪ್ರಸಿದ್ಧಿ ಪಡೆದು ಪವಿತ್ರ ತೀರ್ಥಕ್ಷೇತ್ರವಾಗಿ ರೂಪುಗೊಂಡು, ಕರ್ನಾಟಕದ ಮುಖ್ಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಪ್ರತಿದಿನ ಸಾವಿರಾರು ಭಕ್ತರನ್ನು ಆಕರ್ಷಿಸುತ್ತ ಬೆಳೆಯುತ್ತಿದೆ. ನಮ್ಮ ದೇಶದಲ್ಲಿ ಅನೇಕ ಪ್ರಾಚೀನ ದೇವಾಲ ಯಗಳಿವೆ. ಇಲ್ಲಿ
ವರ್ಷಕ್ಕೊಮ್ಮೆ ಶಿವರಾತ್ರಿ ಹಬ್ಬದಲ್ಲಿ ರಥೋತ್ಸವ, ತೆಪ್ಪೋತ್ಸವ ಸೇರಿದಂತೆ ಪ್ರತಿದಿನವೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕ್ಷೇತ್ರದಲ್ಲಿ ಜಿ.ಮಾದೇಗೌಡರ ಸಮಾಧಿಯನ್ನು ಗಾಂಧೀಜಿ ಸಮಾಧಿ ಮಾದರಿಯಲ್ಲಿ ನಿರ್ಮಾಣ
ಮಾಡಲಾಗಿದೆ. ಕ್ಷೇತ್ರಕ್ಕೆ ಬಂದು ಇಡೀ ದಿನ ಕಾಲ ಕಳೆಯಬಹುದಾದ ವಿಶೇಷ ರಮಣೀಯ ವಿಹಾರ ಸ್ಥಳವಾಗಿದೆ. ಅಚ್ಚುಕಟ್ಟಾಗಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಹನುಮಂತ ನಗರದ ಈ ಸ್ಥಳ ಮೊದಲು ಬಂಡೆಗುಡ್ಡಗಳಿಂದ ಕೂಡಿತ್ತು. ಅಂದು ಜಿ.ಮಾದೇಗೌಡರು ಈ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ 1987 ರಲ್ಲಿ ಭಾರತಿ ವಸತಿ ಶಾಲೆಯನ್ನು ಆರಂಭಿಸಿದರು.

ನಂತರ ಕಾಲಕ್ರಮೇಣ ಧಾರ್ಮಿಕ ಕ್ಷೇತ್ರವನ್ನಾಗಿಸಬೇಕೆಂದು ಚಿಂತಿಸಿ ಅಂದು 5 ಕೋಟಿ ರೂ. ವೆಚ್ಚದಲ್ಲಿ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರವನ್ನಾಗಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಕ್ಷೇತ್ರದಲ್ಲಿ ಇದುವರೆಗೂ 6ರಿಂದ 7 ಸಾವಿರ ವಧು-ವರರಿಗೆ ಮಾಂಗಲ್ಯ, ಸಮವಸ್ತ್ರ ಉಚಿತವಾಗಿ ನೀಡುವ ಮೂಲಕ ಸಾಮೂಹಿಕ ಸರಳ ವಿವಾಹ ನಡೆಸಲಾಗಿದೆ.

ಆಶ್ರಮದಲ್ಲಿ ಆಗಾಗ ಧಾರ್ಮಿಕ ಚರ್ಚೆ, ಸಂವಾದ: ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನ ಸ್ಥಾಪನೆಯಾದ ಮೇಲೆ ಈ ಕ್ಷೇತ್ರದಲ್ಲಿ ಒಂದು ಆಶ್ರಮ ಸ್ಥಾಪಿಲಾಗಿದೆ. ಜಗತ್ತಿನ ಎಲ್ಲಾ ಧರ್ಮಗಳ ಸಂಸ್ಥಾಪಕರ ಭಾವಚಿತ್ರಗಳನ್ನು ಆಶ್ರಮದಲ್ಲಿ ಹಾಕಲಾಗಿದೆ. ಧರ್ಮ, ಸಂಸ್ಕೃತಿ, ತತ್ವ, ವೇದಾಂತ ಮೊದಲಾದವುಗಳ ಬಗ್ಗೆ ಆಸಕ್ತರಾದ ಆಸ್ತಿಕರಿಗೆ ಅನುಕೂಲವಾಗಲೆಂದು ಹಲವು ಗ್ರಂಥಗಳನ್ನು ಆಶ್ರಮದಲ್ಲಿ ಸಂಗ್ರಹಿಸಿ ಇಡಲಾಗಿದೆ. ಆಗಾಗ ಮಠದಲ್ಲಿ ಧಾರ್ಮಿಕ ಚರ್ಚೆ, ಸಂವಾದಗಳನ್ನು ನಡೆಸಲಾಗುತ್ತದೆ.

ಸರ್ಕಾರದ ಸಹಕಾರದಿಂದ ಯಾತ್ರಿ ನಿವಾಸ
ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನದ ಪೂರ್ವ ಭಾಗಕ್ಕೆ ಸರ್ಕಾರದ ಸಹಕಾರದಿಂದ ಯಾತ್ರಿ ನಿವಾಸವನ್ನು ನಿರ್ಮಿಸಲಾಗಿದೆ. ಈ ಕ್ಷೇತ್ರಕ್ಕೆ ಯಾತ್ರಾರ್ಥಿಗಳಾಗಿ ಬರುವ ಭಕ್ತರು ಉಳಿದುಕೊಳ್ಳಲು ಅನುಕೂಲಗಳನ್ನು ಕಲ್ಪಿಸಲಾಗಿದೆ. ಕೆಳಗಡೆ ವಿಸ್ತಾರವಾದ ಪ್ರಾಂಗಣವಿದ್ದು, ಸಮಾರಂಭಗಳು, ವಿಚಾರಗೋಷ್ಠಿ, ಶೈಕ್ಷಣಿಕ ಶಿಬಿರಗಳು, ತರಬೇತಿ ಶಿಬಿರಗಳನ್ನು ನಡೆಲು ಯಾತ್ರಿ ನಿವಾಸ ಅತ್ಯಂತ ಸೂಕ್ತ ಸ್ಥಳವಾಗಿದೆ.

ದೇಗುಲದ ದಕ್ಷಿಣ ಭಾಗದಲ್ಲಿ ನ್ಯಾಯಪೀಠ
ಶ್ರೀ ಆತ್ಮಲಿಂಗೇಶ್ವರ ದೇವಾಯದ ದಕ್ಷಿಣ ಭಾಗದಲ್ಲಿ ನ್ಯಾಯಪೀಠ ಇದೆ. ಭಾರತ ಹಳ್ಳಿಗಳ ದೇಶ. ಹಿಂದಿನ ಕಾಲದಲ್ಲಿ ಹಳ್ಳಿಯಲ್ಲಿ ಉಂಟಾಗುತ್ತಿದ್ದ ಸಮಸ್ಯೆ, ಜಗಳಗಳು ಗ್ರಾಮದ ಮುಖಂಡರ ಸಮ್ಮುಖದಲ್ಲಿ ತೀರ್ಮಾನವಾಗುತ್ತಿದ್ದವು. ಇಂದು ಜನರು ಪೊಲೀಸ್‌ ಸ್ಪೇಷನ್‌, ಕೋರ್ಟ್‌ ಮೆಟ್ಟಿಲೇರಿ ತಮ್ಮ ಅಮೂಲ್ಯವಾದ ಸಮಯ ಮತ್ತು ಹಣ ಎರಡನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಂಸ್ಥಾಪಕರು ಹಳ್ಳಿಯ ಜನರ ಸಮಸ್ಯೆಗಳನ್ನು ಅವರ ವಿವಾದಗಳನ್ನು ಶ್ರೀ ಆತ್ಮಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪರಸ್ಪರ
ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕೆಂಬ ಉದ್ದೇಶದಿಂದ ನ್ಯಾಯಪೀಠ ಸ್ಥಾಪಿಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಕೃತಿ ಆರೋಗ್ಯ ಧಾಮವು ತಲೆ ಎತ್ತಿದೆ. ಈ ಪ್ರಕೃತಿ ಆರೋಗ್ಯ ಧಾಮದಲ್ಲಿ ಜಲ, ಮಣ್ಣು, ಆಹಾರ, ಯೋಗ ಚಿಕಿತ್ಸೆ ನೀಡಲಾಗುವುದು.

ವಿಶೇಷ ಧಾರ್ಮಿಕ ಚಟುವಟಿಕೆ
ಪುಣ್ಯ ಕ್ಷೇತ್ರದಲ್ಲಿ ಶಿವ, ನಂದಿ, ವೀರಾಂಜನೆಯ, ಇವನ ಹಸ್ರ ದರ್ಪಣ ಮಂದಿರ, ವ್ಯಾಖ್ಯಾನ ಮಂಟಪ, ನ್ಯಾಯಪೀಠ, ದುರ್ಗಾಪರಮೇಶ್ವರಿ, ಗಣಪತಿ ದೇವರ ದರ್ಶನ ಮಾಡಬಹುದು. ಪ್ರಮುಖವಾಗಿ ಶಿವರಾತ್ರಿ ಯಂದು ಜಾಗರಣೆ ಮಾಡಲು ಅಸಂಖ್ಯಾತ ಭಕ್ತರು ಇಲ್ಲಿಗೆ ಬರುತ್ತಾರೆ. ಆ ಸಮಯದಲ್ಲಿ ದಿನಪೂರ್ತಿ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ದೇವಾಲಯದ ಗೋಪುರಕ್ಕೆ ತಲುಪಲು ಕೆಲ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಮೆಟ್ಟಿಲು ಹತ್ತುವಾಗ ಕಲ್ಲಿನ ವಿಶೇಷ ರಚನೆಗಳನ್ನು ಕಾಣಬಹುದು.

ಉದ್ಯಾನದಲ್ಲಿ ವಿಹಾರ
ದೇವಾಲಯದ ಎದುರು ಉತ್ತಮ ಪರಿಸರ ಉದ್ಯಾನ ಇದೆ. ಸಣ್ಣ ಕಾರಂಜಿ ಮತ್ತು ಮಕ್ಕಳ ಆಟದ ಆವರಣವೂ ಇಲ್ಲಿದೆ. ಜನರಿಗೆ
ಬೋಟಿಂಗ್‌ ಮಾಡಲು ಸೌಲಭ್ಯವಿದೆ. ದೋಣಿ ವಿಹಾರದ ತಾಣದ ಒಳಗೆ ಬೃಹದಾಕರಾದ ಕಲ್ಲಿನ ಶ್ರೀ ಆಂಜನೇಯ ವಿಗ್ರಹವಿದೆ.
ಆವರಣದೊಳಗೆ ಫುಡ್‌ಕೋರ್ಟ್‌ ಕೂಡ ಇದೆ.

ತಲುಪುವುದು ಹೇಗೆ?
ಮದ್ದೂರಿನಿಂದ 15 ಕಿ.ಮೀ., ಮಂಡ್ಯದಿಂದ 14 ಕಿ.ಮೀ.,ಬೆಂಗಳೂರಿನಿಂದ 90 ಕಿ.ಮೀ, ಸಾಗಿ ಮದ್ದೂರು ಮೂಲಕ ಕೆ.ಎಂ.ದೊಡ್ಡಿ ಮಾರ್ಗವಾಗಿ ಬಂದರೆ ಹನು ಮಂತನಗರ ತಲುಪಬಹುದು.

*ಅಣ್ಣೂರು ಸತೀಶ್

ಟಾಪ್ ನ್ಯೂಸ್

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.