ಕರನ್ ಹ್ಯಾಟ್ರಿಕ್; ಪಂಜಾಬ್ ಜಯಭೇರಿ
Team Udayavani, Apr 2, 2019, 6:00 AM IST
ಮೊಹಾಲಿ: ಸ್ಫೋಟಕ ಆರಂಭಕಾರ ಕ್ರಿಸ್ ಗೇಲ್ ಗೈರಲ್ಲಿ ಕಣಕ್ಕಿಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಮವಾರದ ತವರಿನ ಐಪಿಎಲ್ ಪಂದ್ಯದಲ್ಲಿ ಸ್ಯಾಮ್ ಕರನ್ ಅವರ ಹ್ಯಾಟ್ರಿಕ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 14 ರನ್ನುಗಳಿಂದ ಸೋಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 9 ವಿಕೆಟಿಗೆ 166 ರನ್ ಪೇರಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ನಾಟಕೀಯ ಕುಸಿತ ಕಂಡು 19.2 ಓವರ್‌ಗಳಲ್ಲಿ 152 ರನ್ನಿಗೆ ಆಲೌಟಾಗಿ ಶರಣಾಯಿತು.
ಡೆಲ್ಲಿ ಮೊದಲ ಎಸೆತದಲ್ಲೇ ಪೃಥ್ವಿ ಶಾ ಅವರನ್ನು ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ನಾಯಕ ಅಶ್ವಿನ್ ದೊಡ್ಡ ಬೇಟೆಯಾಡಿದರು. ಧವನ್ (30) ಮತ್ತು ಅಯ್ಯರ್ (28) 61 ರನ್ ಜತೆಯಾಟ ನಡೆಸಿ ಹೋರಾಟ ಜಾರಿಯಲ್ಲಿರಿಸಿದರು. ಬಳಿಕ ಪಂತ್-ಇನ್‌ಗಾÅಮ್ ನಾಲ್ಕನೇ ವಿಕೆಟಿಗೆ 62 ರನ್ ಪೇರಿಸಿದ್ದರಿಂದ ತಂಡ ಸುಲಭ ಗೆಲುವಿನತ್ತ ಹೊರಟಿತ್ತು. ಈ ಹಂತದಲ್ಲಿ ಸ್ಯಾಮ್ ಕರನ್ ಮಾರಕ ದಾಳಿ ಸಂಘಟಿಸಿದರು.
8 ರನ್ ಅಂತರದಲ್ಲಿ 7 ವಿಕೆಟ್
144ರ ಮೊತ್ತಕ್ಕೆ ನಾಲ್ಕನೇ ವಿಕೆಟ್ ಕಳೆದುಕೊಂಡ ಡೆಲ್ಲಿ ತಂಡ 152 ರನ್ನಿಗೆ ಸರ್ವಪತನ ಕಂಡಿತ್ತು. ಅಂದರೆ 8 ರನ್ ಅಂತರದಲ್ಲಿ ತಂಡ 7 ವಿಕೆಟ್ ಕಳೆದುಕೊಂಡು ಶರಣಾಯಿತು. ತಂಡದ ದುಬಾರಿ ಆಟಗಾರ ಕರನ್ ಹ್ಯಾಟ್ರಿಕ್ ಸಹಿತ 11 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ಡೆಲ್ಲಿಯ ನಾಟಕೀಯ ಕುಸಿತಕ್ಕೆ ಕಾರಣರಾದರು. ಕರನ್ ಹ್ಯಾಟ್ರಿಕ್ ಸಾಧಿಸಲು ಬಲಿಯಾದ ಮೂವರು ಆಟಗಾರರೂ ಶೂನ್ಯಕ್ಕೆ ಔಟಾಗಿರುವುದು ವಿಶೇಷವಾಗಿದೆ.
ಪಂಜಾಬ್‌ಗ ವೇಗಿಗಳಾದ ಕ್ರಿಸ್ ಮಾರಿಸ್ ಮತ್ತು ಕಾಗಿಸೊ ರಬಾಡ ಸೇರಿಕೊಂಡು ಕಡಿವಾಣ ಹಾಕಿದರು. ಯಾರಿಂದಲೂ ದೊಡ್ಡ ಮೊತ್ತ ದಾಖಲಾಗಲಿಲ್ಲ. 30 ಎಸೆತಗಳಿಂದ 43 ರನ್ ಮಾಡಿದ ಡೇವಿಡ್ ಮಿಲ್ಲರ್ ಅವರದೇ ಹೆಚ್ಚಿನ ಗಳಿಕೆ (4 ಬೌಂಡರಿ, 2 ಸಿಕ್ಸರ್).
ಸ್ಕೋರ್‌ಪಟ್ಟಿ
ಕಿಂಗ್ಸ್ ಇಲೆವೆನ್ ಪಂಜಾಬ್
ಕೆ.ಎಲ್. ರಾಹುಲ್ ಎಲ್‌ಬಿಡಬ್ಲ್ಯು ಮಾರಿಸ್ 15
ಸ್ಯಾಮ್ ಕರನ್ ಎಲ್‌ಬಿಡಬ್ಲ್ಯು ಲಮಿಚಾನೆ 20
ಮಾಯಾಂಕ್ ಅಗರ್ವಾಲ್ ರನೌಟ್ 6
ಸಫìರಾಜ್ ಖಾನ್ ಸಿ ಪಂತ್ ಬಿ ಲಮಿಚಾನೆ 39
ಡೇವಿಡ್ ಮಿಲ್ಲರ್ ಸಿ ಪಂತ್ ಬಿ ಮಾರಿಸ್ 43
ಮನ್‌ದೀಪ್ ಸಿಂಗ್ ಔಟಾಗದೆ 29
ಹಾರ್ಡಸ್ ವಿಲ್‌ಜೊàನ್ ಸಿ ಮಾರಿಸ್ ಬಿ ರಬಾಡ 1
ಆರ್. ಅಶ್ವಿನ್ ಬಿ ಮಾರಿಸ್ 3
ಎಂ. ಅಶ್ವಿನ್ ಸಿ ಆವೇಶ್ ಬಿ ರಬಾಡ 1
ಮೊಹಮ್ಮದ್ ಶಮಿ ರನೌಟ್ 0
ಮುಜೀಬ್ ಉರ್ ರೆಹಮಾನ್ ಔಟಾಗದೆ 0
ಇತರ 9
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 166
ವಿಕೆಟ್ ಪತನ: 1-15, 2-36, 3-58, 4-120, 5-137, 6-146, 7-152, 8-153, 9-156.
ಬೌಲಿಂಗ್:
ಕಾಗಿಸೊ ರಬಾಡ 4-0-32-2
ಕ್ರಿಸ್ ಮಾರಿಸ್ 4-0-30-3
ಆವೇಶ್ ಖಾನ್ 3-0-30-0
ಸಂದೀಪ್ ಲಮಿಚಾನೆ 4-0-27-2
ಹರ್ಷಲ್ ಪಟೇಲ್ 4-0-37-0
ಹನುಮ ವಿಹಾರಿ 1-0-9-0
ಡೆಲ್ಲಿ ಕ್ಯಾಪಿಟಲ್ಸ್
ಪೃಥಿವ ಶಾ ಸಿ ರಾಹುಲ್ ಬಿ ಅಶ್ವಿನ್ 0
ಶಿಖರ್ ಧವನ್ ಎಲ್‌ಬಿಡಬ್ಲ್ಯು ಅಶ್ವಿನ್ 30
ಶ್ರೇಯಸ್ ಅಯ್ಯರ್ ಬಿ ವಿಲ್‌ಜೊàನ್ 28
ರಿಷಬ್ ಪಂತ್ ಬಿ ಮೊಹಮ್ಮದ್ ಶಮಿ 39
ಕಾಲಿನ್ ಇನ್‌ಗಾÅಮ್ ಸಿ ಬದಲಿಗ ಬಿ ಕರನ್ 38
ಕ್ರಿಸ್ ಮಾರಿಸ್ ರನೌಟ್ 0
ಹನುಮ ವಿಹಾರಿ ಬಿ ಮೊಹಮ್ಮದ್ ಶಮಿ 2
ಹರ್ಷಲ್ ಪಟೇಲ್ ಸಿ ರಾಹುಲ್ ಬಿ ಕರನ್ 0
ಕಾಗಿಸೊ ರಬಾಡ ಬಿ ಕರನ್ 0
ಆವೇಶ್ ಖಾನ್ ಔಟಾಗದೆ 4
ಸಂದೀಪ್ ಲಮಿಚಾನೆ ಬಿ ಕರನ್ 0
ಇತರ 11
ಒಟ್ಟು (19.2 ಓವರ್‌ಗಳಲ್ಲಿ ಆಲೌಟ್) 152
ವಿಕೆಟ್ ಪತನ: 1-0, 2-61, 3-82, 4-144, 5-144, 6-147, 7-148, 8-148, 9-152
ಬೌಲಿಂಗ್:
ಆರ್. ಅಶ್ವಿನ್ 4-0-31-2
ಸ್ಯಾಮ್ ಕರನ್ 2.2-0-11-4
ಮೊಹಮ್ಮದ್ ಶಮಿ 4-0-27-2
ಹಾರ್ಡಸ್ ವಿಲ್‌ಜೊàನ್ 3-0-22-1
ಮುಜೀಬ್ ಉರ್ ರೆಹಮಾನ್ 4-0-36-0
ಮುರುಗನ್ ಅಶ್ವಿನ್ 2-0-19-0
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.