ಏಕಕಾಲಕ್ಕೆ ಆರ್‌ಸಿಬಿ,ಸಿಬಿಎಸ್‌ಇ ಟೆಸ್ಟ್!
ಇದು ಪ್ರಯಾಸ್ ರಾಯ್ ಬರ್ಮನ್ ಸ್ಥಿತಿ!
Team Udayavani, Apr 2, 2019, 6:15 AM IST
ಬೆಂಗಳೂರು: ರವಿವಾರ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಕಾಣಿಸಿಕೊಂಡು ಐಪಿಎಲ್ ಆಡಿದ ಅತೀ ಕಿರಿಯ ಆಟಗಾರನೆಂಬ ದಾಖಲೆಯಿಂದ ಸುದ್ದಿಯಾದ ಕ್ರಿಕೆಟಿಗ. ಆದರೆ ಮೊದಲ ಪಂದ್ಯದಲ್ಲೇ 56 ರನ್ ನೀಡಿ ದುಬಾರಿಯಾದದ್ದು ಬೇರೆ ಮಾತು.
ಮೂಲತಃ ಕೋಲ್ಕತಾದವರಾದ ಈ ಲೆಗ್‌ಸ್ಪಿನ್ನರ್ ಐಪಿಎಲ್ ಬಾಗಿಲು ತೆರೆದ ಖುಷಿಯಲ್ಲಿದ್ದಾರೇನೋ ನಿಜ. ಆದರೆ ಇದರೊಂದಿಗೆ ದೊಡ್ಡ ಸಂಕಟವೊಂದು ಇವರನ್ನು ಕಾಡುತ್ತಿದೆ. ಅದು 12ನೇ ತರಗತಿಯ ಸಿಬಿಎಸ್‌ಇ ಎಕ್ಸಾಮ್! ಇವೆರಡೂ ಒಟ್ಟಿಗೇ ಬಂದಿರುವುದು ಪ್ರಯಾಸ್ ಪಾಲಿಗೆ ಪ್ರಯಾಸವಾಗಿ ಪರಿಣಮಿದೆ. ಇವೆರಡರಲ್ಲಿ ಯಾವುದನ್ನೂ ಬಿಡುವಂತಿಲ್ಲ!
ಆರ್‌ಸಿಬಿ ಮಂಗಳವಾರ ರಾಜಸ್ಥಾನ್ ವಿರುದ್ಧ ಜೈಪುರದಲ್ಲಿ ತನ್ನ ಮುಂದಿನ ಪಂದ್ಯವಾಡಲಿದೆ. ಮರುದಿನವೇ ಪ್ರಯಾಸ್ ಬರ್ಮನ್ ಪರೀಕ್ಷೆ ಬರೆಯಲು ಕೋಲ್ಕತಾಕ್ಕೆ ತೆರಳಬೇಕಿದೆ. ಇಲ್ಲಿನ “ಕಲ್ಯಾಣಿ ಪಬ್ಲಿಕ್ ಸ್ಕೂಲ್’ನ ವಿದ್ಯಾರ್ಥಿಯಾಗಿರುವ ಅವರು ಎ. 4ರಂದು “ಎಂಟರ್‌ಪ್ರಿನರ್‌ಶಿಪ್ ಎಕ್ಸಾಮ್’ ಬರೆಯಬೇಕಿದೆ. ಎ. 5ರಂದು ಮತ್ತೆ ತಂಡವನ್ನು ಕೂಡಿಕೊಳ್ಳಬೇಕು. ಅಂದು ಬೆಂಗಳೂರಿನಲ್ಲಿ ಆರ್‌ಸಿಬಿ-ಕೆಕೆಆರ್ ಪಂದ್ಯ ನಡೆಯಲಿದೆ.
“ಟಾಸ್‌ಗೂ ಕೆಲವೇ ನಿಮಿಷಗಳ ಮೊದಲು ಈ ಪಂದ್ಯದಲ್ಲಿ ಆಡಲಿರುವ ವಿಷಯವನ್ನು ಕೊಹ್ಲಿ ಪ್ರಯಾಸ್‌ಗೆ ತಿಳಿಸಿದ್ದರಂತೆ. ಆಡುವ ಬಳಗದಲ್ಲಿ ಪ್ರಯಾಸ್ ಹೆಸರು ಕಂಡ ನಮಗೆ ನಿಜಕ್ಕೂ ಆಘಾತವಾಯಿತು. ಆದರೆ ಅವನು ನರ್ವಸ್ ಆಗಿ ರಲಿಲ್ಲ. ಇದು ತನ್ನ ಸ್ಟಾಂಡರ್ಡ್‌ನ ಬೌಲಿಂಗ್ ಆಗಿರಲಿಲ್ಲ. ಇದಕ್ಕಿಂತ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ತನ್ನಲ್ಲಿದೆ ಎಂದು ಅವನು ಪಂದ್ಯದ ಬಳಿಕ ನನ್ನಲ್ಲಿ ಹೇಳಿದ…’ ಎಂದೂ ಕೌಶಿಕ್ ಮಾಧ್ಯಮದ ವರಿಗೆ ತಿಳಿಸಿದರು.
ಆರ್‌ಸಿಬಿಯ ಸಂಪೂರ್ಣ ಬೆಂಬಲ
“ಇದು ನಿಜಕ್ಕೂ ಕಷ್ಟ. ಆದರೆ ಪ್ರಯಾಸ್ ಇದನ್ನು ನಿಭಾಯಿಸಬಲ್ಲ. ಅವನಿಗೆ ಆರ್‌ಸಿಬಿ ತಂಡದ ಸಂಪೂರ್ಣ ಬೆಂಬಲವಿದೆ’ ಎಂದು ಪ್ರಯಾಸ್ ತಂದೆ ಡಾ| ಕೌಶಿಕ್ ರಾಯ್ ಬರ್ಮನ್ ಹೇಳಿದ್ದಾರೆ.
“ನೆಟ್ಸ್‌ನಲ್ಲಿ ಆತನಿಗೆ ಕೊಹ್ಲಿ, ಎಬಿಡಿ, ಕೋಚ್ ಕರ್ಸ್ಟನ್ ಎಲ್ಲರೂ ಬಹಳ ಉತ್ತೇಜನ ನೀಡುತ್ತಾರೆ. ಅನುಭವಿಗಳಾದ ಪವನ್ ನೇಗಿ, ವಾಷಿಂಗ್ಟನ್ ಸುಂದರ್ ಅವರನ್ನು ಮೀರಿಸಿ ಪ್ರಯಾಸ್‌ನನ್ನು ಆಡುವ ಬಳಗಕ್ಕೆ ಸೇರಿಸಿಕೊಂಡಿದ್ದಾರೆ ಎಂದರೆ ಆತನಲ್ಲಿ ಅವರು ಏನೋ ವಿಶೇಷವನ್ನು ಗುರುತಿಸಿದ್ದಾರೆ’ ಎಂಬುದಾಗಿ ಕೌಶಿಕ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.