ದಕ್ಷಿಣ ಆಫ್ರಿಕಾದ ಹೀನಾಯ ಸೋಲಿಗೆ ಐಪಿಎಲ್ ಕಾರಣವಂತೆ!
Team Udayavani, Jun 25, 2019, 5:10 AM IST
ಲಂಡನ್: ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ವೈಫಲ್ಯ ಮುಂದುವರಿದಿದೆ. ಪಾಕಿಸ್ಥಾನ ವಿರುದ್ಧ ಸೋಲುವುದರೊಂದಿಗೆ ಅದು ಲೀಗ್ ಹಂತದಲ್ಲೇ ಕೂಟದಿಂದ ಹೊರಬಿದ್ದಿದೆ. 7 ಪಂದ್ಯಗಳನ್ನಾಡಿರುವ ದಕ್ಷಿಣ ಆಫ್ರಿಕಾ ಈವರೆಗೆ ದುರ್ಬಲ ಅಫ್ಘಾನಿಸ್ಥಾನವನ್ನು ಮಾತ್ರ ಸೋಲಿಸಲು ಯಶಸ್ವಿಯಾಗಿದೆ.
ಹರಿಣಗಳ ಕಳಪೆ ನಿರ್ವಹಣೆಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾದ (ಸಿಎಸ್‌ಎ) ಅಧಿಕಾರಿಗಳು, ನಾಯಕ ಫಾ ಡು ಪ್ಲೆಸಿಸ್ ಈಗ ಕಾರಣಗಳನ್ನು ಸೂಚಿಸುತ್ತಿದ್ದಾರೆ. ಇದಕ್ಕೆಲ್ಲ ಮೂಲ ಭಾರತದಲ್ಲಿ ನಡೆದ ಐಪಿಎಲ್ ಎಂಬುದು ಡು ಪ್ಲೆಸಿಸ್ ದೂರು.
ರಬಾಡ, ಸ್ಟೇನ್‌ಗೆ ಪೆಟ್ಟು
‘ಶ್ರೀಮಂತ ಐಪಿಎಲ್ ಕೂಟದಲ್ಲಿ ಭಾಗವಹಿಸ ದಂತೆ ಆಟಗಾರರನ್ನು ಸಿಎಸ್‌ಎ ನಿಯಂತ್ರಿಸದೇ ಇರುವುದು ಕಳಪೆ ನಿರ್ವಹಣೆಗೆ ಕಾರಣವಾಗಿದೆ. ಐಪಿಎಲ್ ಆಡುತ್ತಿರುವ ವೇಳೆ ತಂಡದ ಇಬ್ಬರು ಖ್ಯಾತ ವೇಗಿಗಳಾದ ಡೇಲ್ ಸ್ಟೇನ್ ಮತ್ತು ಕಾಗಿಸೊ ರಬಾಡ ಗಾಯಗೊಂಡಿದ್ದರು. ರಬಾಡ ವಿಶ್ವಕಪ್‌ನಲ್ಲಿ ಆಡಿದರೆ ಸ್ಟೇನ್ ಇನ್ನೂ ಚೇತರಿಸಿಕೊಂಡಿಲ್ಲ. ಆದರೆ ವಿಶ್ವಕಪ್‌ನಲ್ಲಿ ರಬಾಡ ಅವರ ನಿರ್ವಹಣೆ ಅತ್ಯಂತ ಕಳಪೆ ಮಟ್ಟದಲ್ಲಿತ್ತು’ ಎಂದು ಡು ಪ್ಲೆಸಿಸ್ ಹೇಳಿದ್ದಾರೆ.
ತಂಡದ ಅಗ್ರ ಆಟಗಾರರು ಐಪಿಎಲ್ನಲ್ಲಿ ಆಡುವುದನ್ನು ನಾಯಕ ಡು ಪ್ಲೆಸಿಸ್ ಮತ್ತು ಕೆಲವು ಆಟಗಾರರು ವಿರೋಧಿಸಿದ್ದರು. ಐಪಿಎಲ್ ಕೂಟದಲ್ಲಿ ಭಾಗವಹಿಸಲು ಆಟಗಾರರಿಗೆ ಅನುಮತಿ ನೀಡುವ ನಿಟ್ಟಿನಲ್ಲಿ ಸಿಎಸ್‌ಎ ತಂಡ ವ್ಯವಸ್ಥಾಪಕರ ಜತೆ ಸಭೆಯನ್ನು ನಡೆಸಿತ್ತು. ಆದರೆ ಆಟಗಾರರು ಐಪಿಎಲ್ನಲ್ಲಿ ಆಡಲು ಆಸಕ್ತಿ ವಹಿಸಿದ್ದರಿಂದ ಮಂಡಳಿಗೆ ಏನೂ ಮಾಡಲು ಸಾಧ್ಯವಾಗಿರಲಿಲ್ಲ ಎಂಬುದು ಇವರೆಲ್ಲರ ಆರೋಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.