8 ಭಾಷೆಗಳಲ್ಲಿ ನೇರ ಪ್ರಸಾರ
Team Udayavani, May 30, 2019, 6:00 AM IST
ಭಾರತದಲ್ಲಿ ವಿಶ್ವಕಪ್ ನೇರ ಪ್ರಸಾರ “ಸ್ಟಾರ್ ಸ್ಪೋರ್ಟ್ಸ್’ ಚಾನೆಲ್‌ನಲ್ಲಿ ಮೂಡಿಬರಲಿದೆ. ವಿಶೇಷವೆಂದರೆ, ಇದು ಕನ್ನಡವೂ ಸೇರಿದಂತೆ 8 ಭಾಷೆಗಳಲ್ಲಿ ಬಿತ್ತರಗೊಳ್ಳಲಿದೆ!
ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 1, ಸ್ಟಾರ್ ಸ್ಪೋರ್ಟ್ಸ್ ಸೆಲೆಕ್ಟ್ 2, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ಬಾಂಗ್ಲಾ, ಸ್ಟಾರ್ ಸ್ಪೋರ್ಟ್ಸ್ 1 ಮರಾಠಿ, ಏಶ್ಯನೆಟ್ ಪ್ಲಸ್ ಮತ್ತು ಸ್ಟಾರ್ ಸ್ಪೋರ್ಟ್ಸ್ ಫಸ್ಟ್ ವಾಹಿನಿಗಳಲ್ಲಿ ವಿಶ್ವಕಪ್ ನೇರ ಪ್ರಸಾರ ಮಾಡಲಿದೆ. ಇದರೊಂದಿಗೆ ಸ್ಟಾರ್‌ನ ಒಟಿಟಿ ಪ್ಲ್ರಾಟ್‌ಫಾರ್ಮ್ ಹಾಟ್‌ಸ್ಟಾರ್‌ನಲ್ಲೂ ವಿಶ್ವಕಪ್ ನೇರ ಪ್ರಸಾರ ಲಭ್ಯವಿರಲಿದೆ.
* ಭಾರತಕ್ಕಿಲ್ಲ ರಾತ್ರಿ ಪಂದ್ಯ!
ಇಂಗ್ಲೆಂಡ್ ಮೊದಲಿನಿಂದಲೂ ಹಗಲು ಪಂದ್ಯಗಳಿಗೆ ಆದ್ಯತೆ ನೀಡುತ್ತ ಬಂದಿದೆ. ಈ ಸಲವೂ ಸಂಪ್ರದಾಯವನ್ನು ದೊಡ್ಡ ಮಟ್ಟದಲ್ಲೇ ಪಾಲಿಸಲಿದೆ. ಈ ಸಲದ ಒಟ್ಟು 48 ಪಂದ್ಯಗಳಲ್ಲಿ 7 ಪಂದ್ಯಗಳು ಮಾತ್ರ ಹಗಲು-ರಾತ್ರಿಯಾಗಿ ನಡೆಯಲಿವೆ, ಮತ್ತು ಇವೆಲ್ಲವನ್ನೂ ಶನಿವಾರದಂದೇ ಆಡಲಾಗುತ್ತದೆ. ಇಂದು ನೈಟ್ ಮ್ಯಾಚ್ ಬುಧವಾರ ನಡೆಯಲಿದೆ. ಗಮನಿಸಬೇಕಾದ ಸಂಗತಿಯೆಂದರೆ, ಭಾರತಕ್ಕೆ ಒಂದೂ ಡೇ-ನೈಟ್ ಪಂದ್ಯ ಇಲ್ಲದಿರುವುದು! ಭಾರತೀಯ ಕಾಲಮಾನ ಪ್ರಕಾರ ಡೇ-ನೈಟ್ ಪಂದ್ಯ ಮುಗಿಯುವಾಗ ರಾತ್ರಿ 1.45 ಆಗುತ್ತದೆ. ಈ ಸಮಯದಲ್ಲಿ ನೇರ ಪ್ರಸಾರದಿಂದ ಆರ್ಥಿಕ ಲಾಭ ಇಲ್ಲದಿರುವುದೂ ಇದಕ್ಕೆ ಕಾರಣವಿರಬಹುದು. ಅಂದಹಾಗೆ, ಜು. 14ರ ಲಾರ್ಡ್ಸ್ ಫೈನಲ್ ಕೂಡ ಹಗಲಿನಲ್ಲೇ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.