ಓವರ್‌ ಟು ಇಂಗ್ಲೆಂಡ್‌

ವರ್ಲ್ಡ್ ಕಪ್‌ ಕ್ರಿಕೆಟ್

Team Udayavani, May 30, 2019, 6:00 AM IST

TEAM-INDIA

ಲಂಡನ್‌: ‘ಕ್ರಿಕೆಟ್ ಎಂಬುದು ಕವಿತೆಯಂತೆ…ಇದು ಚೆಂಡು-ದಾಂಡಿನ ಕ್ರೀಡೆಯನ್ನು ಕ್ರಿಕೆಟ್ ಪಿತಾಮಹ ಡಾ| ಡಬ್ಲ್ಯು.ಜಿ. ಗ್ರೇಸ್‌ ಶತಮಾನದ ಹಿಂದೆ ಬಣ್ಣಿಸಿದ ಪರಿ. ಅಂದು ಕ್ರಿಕೆಟ್ ಹಾಗಿತ್ತು… ಹಲವು ದಿನಗಳ ಕಾಲ ಸಾಗುವ ಕ್ರಿಕೆಟ್ ಪಂದ್ಯವೊಂದು ನಿಧಾನವಾಗಿ ಮನಸ್ಸನ್ನು ಆವರಿಸಿಕೊಳ್ಳುತ್ತಲೇ ಹೃದಯವನ್ನು ತಟ್ಟುತ್ತದೆ ಎಂಬುದು ಗ್ರೇಸ್‌ ಮಾತಿನ ಮರ್ಮ.

ಆದರೆ ಕಾಲ ಬದಲಾಗಿದೆ. ಇದರೊಂದಿಗೆ ಕ್ರಿಕೆಟ್ ಕೂಡ ದೊಡ್ಡ ಮಟ್ಟದಲ್ಲಿ ಪರಿವರ್ತನೆಗೊಂಡಿದೆ. ಟೆಸ್ಟ್‌ ಕ್ರಿಕೆಟನ್ನು ಮೀರಿಸಿ ಸೀಮಿತ ಓವರ್‌ಗಳ ಕ್ರಿಕೆಟ್ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಕವಿತೆಯಂತಿದ್ದ ಕ್ರಿಕೆಟ್ ಹೊಡಿ-ಬಡಿ ಸ್ಪರ್ಶ ಪಡೆದುಕೊಂಡಿದೆ. ಇದಕ್ಕೆಲ್ಲ ಕಿರೀಟವೆಂಬಂತೆ ವಿಶ್ವಕಪ್‌ ಕೂಟಗಳು ಕಾಲ ಕಾಲಕ್ಕೆ ನಡೆದು ಕ್ರಿಕೆಟ್ ಪ್ರೇಮಿಗಳಲ್ಲಿ ರೋಮಾಂಚನ ಮೂಡಿಸುತ್ತಿವೆ. ಇಂಥದೇ ಒಂದು ಕ್ರಿಕೆಟ್ ಜಾತ್ರೆಗೆ ಇಂಗ್ಲೆಂಡ್‌ ಸಜ್ಜಾಗಿದೆ.

12ನೇ ವಿಶ್ವಕಪ್‌ ಸಡಗರ
ಗುರುವಾರದಿಂದ ಮೊದಲ್ಗೊಂಡು ಜುಲೈ 14ರ ತನಕ ಇಂಗ್ಲೆಂಡ್‌ ಮತ್ತು ವೇಲ್ಸ್ಗಳಲ್ಲಿ 12ನೇ ಏಕದಿನ ವಿಶ್ವಕಪ್‌ ಸಡಗರ, ಸಂಭ್ರಮ, ರೋಮಾಂಚನ. ಕ್ರಿಕೆಟಿನ ಅತೀ ದೊಡ್ಡ ಹಾಗೂ ಪ್ರತಿಷ್ಠಿತ ಕೂಟದ ಮಹಾಕುಂಭ; ಚೆಂಡು-ದಾಂಡಿನ ನಡುವಿನ ಮಹಾಯುದ್ಧ.

ಗುರುವಾರದ ಉದ್ಘಾಟನಾ ಪಂದ್ಯ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ನಡುವೆ ಲಂಡನ್ನಿನ ಓವಲ್ ಅಂಗಳದಲ್ಲಿ ನಡೆಯಲಿದೆ. ಭಾರತದ ಅಭಿಯಾನ ಆರಂಭವಾಗುವುದು ಜೂ. 5ರಂದು. ಕೊಹ್ಲಿ ಪಡೆಯ ಮೊದಲ ಎದುರಾಳಿ ಕೂಡ ದಕ್ಷಿಣ ಆಫ್ರಿಕಾ.

ಹತ್ತೇ ತಂಡಗಳ ಹೋರಾಟ
ಇದು ಇಂಗ್ಲೆಂಡ್‌ ಆತಿಥ್ಯದಲ್ಲಿ ದಾಖಲೆ 5ನೇ ಸಲ ನಡೆಯುವ ವಿಶ್ವಕಪ್‌. ಹತ್ತೇ ತಂಡ ಗಳಿಗೆ ಈ ವಿಶ್ವಕಪ್‌ ಸೀಮಿತಗೊಂಡಿದೆ.

ಇವು ರೌಂಡ್‌ ರಾಬಿನ್‌ ಮಾದರಿಯಲ್ಲಿ ಲೀಗ್‌ ಪಂದ್ಯಗಳನ್ನು ಆಡಲಿವೆ. ಅಂದರೆ ಎಲ್ಲ ತಂಡಗಳೂ ಉಳಿದ ತಂಡಗಳೆದುರು ಒಂದೊಂದು ಪಂದ್ಯವನ್ನು ಆಡಬೇಕು. ಇಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲಿಗೆ ಏರಲಿವೆ. 1992ರ ಬಳಿಕ ಮೊದಲ ಬಾರಿಗೆ ಈ ಮಾದರಿಯನ್ನು ಅಳವಡಿಸಲಾಗುತ್ತಿದೆ.

ಭಾರತಕ್ಕೆ ಒಲಿದೀತೇ ಕಪ್‌?
ಈ ಬಾರಿಯ ವಿಶ್ವಕಪ್‌ ಯಾರ ಪಾಲಾಗಬಹುದು ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ. ಜಗತ್ತಿಗೇ ಕ್ರಿಕೆಟ್ ಪಾಠ ಹೇಳಿಕೊಟ್ಟ ಇಂಗ್ಲೆಂಡ್‌ ಈ ಬಾರಿ ಹೆಚ್ಚು ಬಲಿಷ್ಠವಾಗಿದ್ದು, ಮೊದಲ ಸಲ ಕಪ್‌ ಎತ್ತೀತೇ ಎಂಬ ನಿರೀಕ್ಷೆ ಗರಿಗೆದರಿದೆ. ಅದು ಈ ಕೂಟದ ಫೇವರಿಟ್ ತಂಡ. ·ಅಂಡರ್‌-19 ವಿಶ್ವಕಪ್‌ ತಂದಿತ್ತ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಭಾರತ ಸೀನಿಯರ್‌ ಹಂತದಲ್ಲೂ ಮಿಂಚಿ 3ನೇ ಸಲ ಚಾಂಪಿಯನ್‌ ಆಗಿ ಮೂಡಿಬರಲಿ ಎಂಬುದು ನಮ್ಮವರ ಹಾರೈಕೆ. ಇದು ಅಷ್ಟು ಸುಲಭವಲ್ಲ. ಆದರೆ ನಿರೀಕ್ಷೆಗೆ ಮಿತಿ ಇಲ್ಲ. ·ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಕೂಡ ಕಪ್‌ ಉಳಿಸಿಕೊಳ್ಳಲು ಸ್ಕೆಚ್ ಹಾಕಿದೆ. ಟೂರ್ನಿ ಸಮೀಪಿಸುತ್ತಿದ್ದಂತೆಯೇ ಕಾಂಗರೂ ಪಡೆ ಚಿಗುರಿ ನಿಂತಿದೆ. ·ಚೋಕರ್ ದಕ್ಷಿಣ ಆಫ್ರಿಕಾ ಈ ಕಳಂಕವನ್ನು ಮೆಟ್ಟಿನಿಂತು ಮೊದಲ ಸಲ ಚಾಂಪಿಯನ್‌ ಆಗುವ ಕನಸು ಕಾಣುತ್ತಿದೆ. ಇಂಥದೊಂದು ಸಾಮರ್ಥ್ಯ ಕೂಡ ಹರಿಣಗಳ ಪಡೆ ಹೊಂದಿದೆ. ·ದೈತ್ಯ ಕ್ರಿಕೆಟಿಗರನ್ನು ಹೊಂದಿರುವ ವೆಸ್ಟ್‌ ಇಂಡೀಸ್‌ ಶಿಸ್ತು ಮತ್ತು ಬದ್ಧತೆಯಿಂದ ಆಡಿದರೆ ಬಹಳ ದೂರ ಸಾಗುವ ನಿರೀಕ್ಷೆ ಮೂಡಿಸಿದೆ. ·ಪಾಕಿಸ್ಥಾನ ಅನಿಶ್ಚಿತ ಆಟಕ್ಕೆ ಹೆಸರುವಾಸಿಯಾಗಿರುವ ಅಪಾಯಕಾರಿ ತಂಡ. ಇಂಗ್ಲೆಂಡಿಗೆ ಆಗಮಿಸಿದ ಮೇಲೆ ಸೋಲನ್ನೇ ಕಾಣುತ್ತಿದೆ ಯಾದರೂ ವಿಶ್ವಕಪ್‌ನಲ್ಲಿ ಮೇಲೆದ್ದು ನಿಲ್ಲುವ ಸಾಧ್ಯತೆ ಇಲ್ಲದಿಲ್ಲ. ·ಕಳೆದ ಸಲ ಸ್ವಲ್ಪದರಲ್ಲೇ ಕಪ್‌ ಕಳೆದುಕೊಂಡ ನ್ಯೂಜಿಲ್ಯಾಂಡ್‌ ಮತ್ತೂಮ್ಮೆ ಫೈನಲ್ನತ್ತ ಮುಖ ಮಾಡುವ ಬಗ್ಗೆ ಖಾತ್ರಿ ಇಲ್ಲ. ಶ್ರೀಲಂಕಾ ತೀರಾ ದುರ್ಬಲವಾಗಿ ಗೋಚರಿಸುತ್ತಿದೆ. ·ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ಒಂದೆರಡು ತಂಡಗಳಿಗಾದರೂ ಬಿಸಿ ಮುಟ್ಟಿಸಿ ಪಂದ್ಯದ ಚಿತ್ರಣವನ್ನು ಬದಲಿಸುವ ತಾಕತ್ತು ಹೊಂದಿವೆ.

‘ದುರ್ಬಲ’ ತಂಡಗಳಿಗೆ ಕೊಕ್‌!
ಈ ಕೂಟದಲ್ಲಿ ಐಸಿಸಿ ಅಸೋಸಿಯೇಟ್ ತಂಡಗಳನ್ನು ದೂರವಿಟ್ಟಿದ್ದರಿಂದ ಇಲ್ಲಿ ‘ವೀಕ್‌ ಟೀಮ್‌’ ಎಂಬ ಮಾತೇ ಇಲ್ಲ. ಹತ್ತೂ ತಂಡಗಳು ಬಲಿಷ್ಠವಾಗಿವೆ. ಮೇಲ್ನೋಟಕ್ಕೆ ಒಂದೆರಡು ತಂಡಗಳು ದುರ್ಬಲವಾಗಿ ಗೋಚರಿಸುತ್ತಿವೆಯಾದರೂ ಅಂಗಳಕ್ಕಿಳಿದ ಮೇಲೆ ಈ ತಂಡಗಳ ಪ್ರದರ್ಶನ ಯಾವ ಹಂತ ಮುಟ್ಟೀತು ಎಂದು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಒಂದು ಹೆಜ್ಜೆ ಜಾರಿದರೂ ತಂಡಕ್ಕೆ ಗಂಡಾಂತರ ಎದುರಾಯಿತೆಂದೇ ಅರ್ಥ. ದುರ್ಬಲ ತಂಡಗಳ ವಿರುದ್ಧ ಆಡಿ ಪರಿಸ್ಥಿತಿಯನ್ನು ನಿಭಾಯಿಸುವ ಅವಕಾಶ ಇಲ್ಲಿಲ್ಲ!

ಟಾಪ್ ನ್ಯೂಸ್

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

Agarwal

Vijay Hazare Trophy; ಮಯಾಂಕ್‌ ಅಗರ್ವಾಲ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

ಅಡ್ಡಹೊಳೆಯಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

ಅಡ್ಡಹೊಳೆ ಗ್ರಾಮದಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

13(1

Udupi: ಕೊರಗ ಸಮುದಾಯಕ್ಕೆ ಸಮಸ್ಯೆಗಳ ಸರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.