ಸದೃಢ ಭಾರತ, ರಾಷ್ಟ್ರ ರಕ್ಷಣೆಗಾಗಿ ಮತದಾನ
Team Udayavani, Mar 26, 2019, 11:49 AM IST
“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತ್ತಿದ್ದಾರೆ. ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.
ಶ್ರೇಷ್ಠ ನಾಯಕನ ಆಯ್ಕೆಗೆ ಮತದಾನ ಸನಾರ್ಗ
ಮತ ಚಲಾಯಿಸದೇ, ಪ್ರಭಾವಿ ನಾಯಕ ನಮಗೆ ದೊರೆತಿಲ್ಲ. ದೇಶ ಪ್ರಗತಿಯಾಗಿಲ್ಲ ಎಂದು ಜರೆಯುವುದು ಸರಿಯಲ್ಲ. ಬದಲು ಮತ ಚಲಾಯಿಸಿ ಶ್ರೇಷ್ಠ ನಾಯಕನನ್ನು ಆರಿಸುವುದು ಸನ್ಮಾರ್ಗ. ಒಂದು ಉತ್ತಮ ಸಮಾಜ, ಶೈಕ್ಷಣಿಕ ಬೆಳವಣಿಗೆ, ಆರ್ಥಿಕ ಅಭಿವೃದ್ಧಿ ಮಾದರಿ ನಾಯಕನ ಆವಶ್ಯಕತೆ ಇದೆ. ಆದ್ದರಿಂದ ನಾವು ಯೋಚಿಸಿ ನಮ್ಮ ಅಮೂಲ್ಯ ಮತ ಚಲಾಯಿಸುವುದು ಅತೀ ಆವಶ್ಯಕ.
ಶ್ರುತಿ ಬಿ.ಎಸ್. ಮಿತ್ತೂರು, ದ್ವಿತೀಯ ಅರ್ಥಶಾಸ್ತ್ರ ವಿಭಾಗ, ಸಂತ
ಫಿಲೋಮಿನಾ ಕಾಲೇಜು, ಪುತ್ತೂರು
ಮತ ಹಾಕಿ ಅಭಿವೃದ್ಧಿಯಲ್ಲಿ ಪಾಲುದಾರರಾಗೋಣ
ಯೋಗ್ಯ, ಸಮರ್ಥ ಜನನಾಯಕನ ಆಯ್ಕೆ ನಮ್ಮ ಕರ್ತವ್ಯ. ಮತ ಚಲಾಯಿಸದೇ ಇದ್ದಲ್ಲಿ ಸರಕಾರದಿಂದ ಸಿಗುವ ಸವಲತ್ತುಗಳನ್ನು
ಪಡೆಯುವ ಮತ್ತು ನಮ್ಮ ಬೇಡಿಕೆಗಳನ್ನು ಅವರ ಮುಂದಿಡುವ ಅರ್ಹತೆ ನಮಗಿರುವುದಿಲ್ಲ. ಆದ್ದರಿಂದ ನಾವು ಯಾವುದೇ ಆಮಿಷಕ್ಕೆ
ಒಳಗಾಗದೆ ಮತ ಹಾಕಿ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗೋಣ.
ಅಖೀಲಾ, ದ್ವಿತೀಯ ಬಿ.ಕಾಂ., ಶ್ರೀ ರಾಮಕುಂಜೇಶ್ವರ ಕಾಲೇಜು, ರಾಮಕುಂಜ
ದೇಶದ ಅಭಿವೃದ್ಧಿಗೆ ಸಹಕರಿಸಲು ಮತ ಚಲಾಯಿಸಿ
ಭಿನ್ನ ಮನಸ್ಸಿನ, ಭಿನ್ನ ವ್ಯಕ್ತಿತ್ವದ ಜನರಿಗೆ ಸ್ವಹಿತಾಸಕ್ತಿಯ, ಒಂದೇ ಧ್ಯೇಯ ಹೊಂದಿರುವ ನಾಯಕನ ಆರಿಸಬೇಕಾದರೆ ಮತದಾನ ಅನಿವಾರ್ಯ. ದೇಶದ ಅಭಿವೃದ್ಧಿಗೆ ನಾವು ದೇಶವನ್ನುಮುನ್ನಡೆಸಬೇಕೆಂದಿಲ್ಲ.ಉತ್ತಮ ನಾಯಕನಿಗೆ ಮತ ನೀಡಿದರೂ ದೇಶದ ಅಭಿವೃದ್ಧಿಗೆ ಸಹಕರಿಸಿದಂತೆ.
–ಸಂಜಯ್ ಎಸ್. ನಾರಾವಿ, ದ್ವಿತೀಯ ಬಿ.ಕಾಂ., ಸೈಂಟ್ ಆ್ಯಂಟನಿ ಕಾಲೇಜ್ ಆಫ್ ಕಾಮರ್ಸ್, ನಾರಾವಿ
ಸದೃಢ ಭಾರತ, ರಾಷ್ಟ್ರ ರಕ್ಷಣೆಗಾಗಿ ಮತದಾನ ಮಾಡಿ
ಸದೃಢಭಾರತ ನಿರ್ಮಾಣಕ್ಕಾಗಿ, ಸಶಕ್ತ ಭಾರತವನ್ನು ಮುನ್ನಡೆಸಲು ಯೋಗ್ಯ ವ್ಯಕ್ತಿಯನ್ನು ಆರಿಸಲು ಮತದಾನ ಅತ್ಯಗತ್ಯ. ಜನರು ಸ್ವಇಚ್ಛೆಯಿಂದ ಮತದಾನ ಮಾಡಬೇಕು. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲು, ನಮ್ಮ ದೇಶದ ರಕ್ಷಣೆಗಾಗಿ, ಪ್ರಜೆಗಳ ಉತ್ತಮ ಭವಿಷ್ಯಕ್ಕಾಗಿ ಮತ್ತು ರೈತರ ಬೆವರ ಹನಿಯನ್ನು ಗೌರವಿಸುವುದಕ್ಕಾದರೂ ಪ್ರತಿಯೊಬ್ಬ ವ್ಯಕ್ತಿಯೂ ಮತ ಚಲಾಯಿಸಲೇಬೇಕು.
–ಅಶ್ವಿನಿ, ಬೋರುಗುಡ್ಡೆ, ತೃತೀಯ ಬಿ.ಕಾಂ., ಸೈಂಟ್ ಆ್ಯಂಟನಿ ಕಾಲೇಜ್ ಆಫ್ ಕಾಮರ್ಸ್, ನಾರಾವಿ
ಭವಿಷ್ಯದ ಅಭಿವೃದಿಯ ನಿರೂಪಣೆಗಾಗಿ ಮತದಾನ
ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆಯನ್ನಿಟ್ಟು ನಾಯಕನನ್ನು ಆರಿಸುವುದೇ ಮತದಾನ ಪದ್ಧತಿ. ಪವಿತ್ರ ಕರ್ತವ್ಯವಾದ ಇದು ಭವಿಷ್ಯದ ಜನನಾಯಕರ, ಅಭಿವೃದ್ಧಿಯ ನಿರೂಪಣೆಗೆ ಅಗತ್ಯ. ಮತ ಹಾಕುವಂತಹದ್ದು ನಮ್ಮೆಲ್ಲರ ಹಕ್ಕು ಮತ್ತು ಮೂಲ ಕರ್ತವ್ಯ. ಸರ್ವ
ಅರ್ಹರೂ ತಪ್ಪದೆ ಮತ ಚಲಾಯಿಸೋಣ.
- ಪ್ರತೀಕ್ಷಾ ಶೆಟ್ಟಿ, ತೃತೀಯ, ಬಿ.ಕಾಂ., ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು
ದೇಶದ ಸಮಗ್ರತೆ, ಅಭಿವೃದ್ಧಿಗೆ ನಾವು ಮತ ಹಾಕೋಣ
ಮತ ಚಲಾಯಿಸುವ ಮೂಲಕ ದೇಶದ ಸಮಗ್ರತೆಗೆ ಹಾಗೂ ಅಭಿವೃದ್ಧಿಗೆ ಪೂರಕವಾಗಿರುವ ನಾಯಕನ ಆಯ್ಕೆ ಮಾಡಬೇಕು. ಮತದಾನದಿಂದ ದೂರ ಉಳಿದರೆ ನಮ್ಮನ್ನಾಳುವವರನ್ನು ಪ್ರಶ್ನಿಸುವ ನೈತಿಕತೆಯೂ ಇರುವುದಿಲ್ಲ. ಮತದಾನಮಾಡಿದರೆ ಆಡಳಿತದಿಂದ ಸಮಸ್ಯೆಯಾದಾಗ ಪ್ರಶ್ನಿಸಲೂ ಅರ್ಹತೆ ಪಡೆಯುತ್ತೇವೆ.
-ಪ್ರಿಯಾ ಎಸ್.ಎಂ., ಬಿ.ಕಾಂ. ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು
ದೇ ಶದ ಏಳ್ಗೆಗೆ ನಮ ಮತ ಪೂರಕವಾಗಿರಲಿ
ನಾವು ಹಾಕುವ ಮತ ಕೇವಲ ವ್ಯಕ್ತಿಗೆ ಸಂಬಂಧಪಟ್ಟದ್ದಲ್ಲ. ಅದು ಇಡೀ ದೇಶಕ್ಕೆ ಸಂಬಂಧಪಟ್ಟದ್ದು. ನಾವು ನೀಡುವ ಮತ ದೇಶದ ಅಭಿವೃದ್ಧಿಗೂ ಕಾರಣವಾಗಬಹುದು. ಶಾಲೆಯ ತರಿಗತಿಗೆ ನಾಯಕನನ್ನು ಹೇಗೆ ಆಯ್ಕೆ
ಮಾಡುತ್ತೇವೆಯೋ ಹಾಗೆಯೇ ದೇಶದ ಏಳಿಗೆಗೆ, ಉತ್ತಮ ನಾಯಕನ ಆಯ್ಕೆಗೆ ನಮ್ಮ ಮತ ಪೂರಕವಾಗಿರಬೇಕು.
–ರಾಕೇಶ್ ಆಚಾರ್ಯ ಬೆಳಂದೂರು, ದ್ವಿತೀಯ ಬಿ.ಕಾಂ, ವಿದ್ಯಾರ್ಥಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು
ಸ್ವಾರ್ಥ ರಹಿತ ಉತ್ತಮ ನಾಯಕನ ಆಯ್ಕೆ ನನ್ನದು
ಮತದಾನದಿಂದ ದೇಶದ ಅಭಿವೃದ್ಧಿ ಸಾಧ್ಯ. ನನ್ನ ಒಂದು ನಿರ್ದಿಷ್ಟ ಮತದಾನದಿಂದ ದೇಶದ ಮುಂದಿನ ಭವಿಷ್ಯ ನಿಂತಿರುತ್ತದೆ ಎನ್ನುವುದನ್ನು ಅರಿಯೋಣ. ಯಾರು ನಮ್ಮ ದೇಶಕ್ಕಾಗಿ ಸ್ವಾರ್ಥ ರಹಿತವಾಗಿ ದುಡಿಯುತ್ತಾರೋ, ಅವರನ್ನು ಆಯ್ಕೆ ಮಾಡೋಣ. ಯಶಸ್ಸಿನ ಕನಸನ್ನು ಹೊತ್ತ ಭಾರತಕ್ಕೆ ಮತದಾನ ಅಮೂಲ್ಯ.
–ಚೇತನ್ ರಾಜ್, ಪ್ರಥಮ ಬಿ.ಕಾಂ., ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.