ಮೇ 1ರಿಂದ ತಿರುಪತಿಗೆ ದಿನಕ್ಕೆ 15 ಸಾವಿರ ಭಕ್ತರಿಗೆ ಮಾತ್ರ ಅವಕಾಶ
Team Udayavani, Apr 20, 2021, 6:55 AM IST
ತಿರುಮಲ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನಮ್ಸ್ (ಟಿಟಿಡಿ) ಮೇ 1ರಿಂದ ದಿನಕ್ಕೆ 15 ಸಾವಿರ ಮಂದಿಗೆ ಮಾತ್ರ ವೆಂಕಟೇಶ್ವರ ದೇಗುಲ ಭೇಟಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ.
ಸದ್ಯ ಭಕ್ತರ ಮಿತಿ 25 ಸಾವಿರ ಇದೆ. ಟಿಟಿಡಿ ಎ.1ರಿಂದಲೇ ಉಚಿತ ದೇವರ ದರ್ಶನ ಟಿಕೆಟ್ ವ್ಯವಸ್ಥೆ ರದ್ದು ಮಾಡಿದೆ. ಆದರೆ ವಿಐಪಿ ದರ್ಶನ ಮತ್ತು ಟ್ರಸ್ಟ್ ಸದಸ್ಯರು, ಶಿಫಾರಸು ಪತ್ರಗಳನ್ನು ಪರಿಗಣಿಸಲು ಟಿಟಿಡಿ ನಿರ್ಧರಿಸಿದೆ. ಅಂಥ ದರ್ಶನ ಪ್ರತೀ ದಿನಕ್ಕೆ 2 ಸಾವಿರ ದಾಟುವುದಿಲ್ಲ.
ಚಿತ್ತೂರು ಜಿಲ್ಲೆಯಲ್ಲಿ ಮತ್ತು ತಿರುಪತಿ ನಗರ ವ್ಯಾಪ್ತಿಯಲ್ಲಿ ಕೂಡ ಸೋಂಕಿನ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿರುವುದೂ ಟಿಟಿಡಿ ನಿರ್ಧಾರಕ್ಕೆ ಕಾರಣ. ರವಿವಾರಕ್ಕೆ ಮುಕ್ತಾಯವಾಗಿರುವ ಮೂರು ದಿನಗಳ ಅವಧಿಯಲ್ಲಿ ಚಿತ್ತೂರು ಜಿಲ್ಲೆಯಲ್ಲಿ 1 ಸಾವಿರ ಕೇಸುಗಳು ದೃಢಪಟ್ಟಿವೆ. ಈ ಪೈಕಿ ಹೆಚ್ಚಿನ ಪ್ರಕರಣ ಇರುವುದು ತಿರುಪತಿ ವ್ಯಾಪ್ತಿಯಲ್ಲಿಯೇ.
21-29 ಬ್ರಹ್ಮೋತ್ಸವ: ಸೋಂಕಿನ ಹಿನ್ನೆಲೆಯಲ್ಲಿ ಬ್ರಹ್ಮೋತ್ಸವವನ್ನು ಎ.21-ಎ.29ರ ವರೆಗೆ ವೊಂಟಿಮಿತ್ತ ದೇಗುಲದಲ್ಲಿ ನಡೆಸಲಾಗುತ್ತದೆ. ಏಕನಾಥಂನಲ್ಲಿ ಶ್ರೀ ಸೀತಾರಾಮ ಕಲ್ಯಾಣಂ ಉತ್ಸವ ನಡೆಸಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.