ಶತಕಕ್ಕಿಂತ ತಂಡದ ಗೆಲುವು ಮುಖ್ಯ: ಧವನ್‌


Team Udayavani, Apr 14, 2019, 9:33 AM IST

Udayavani Kannada Newspaper

ಕೋಲ್ಕತಾ: ಅಜೇಯ 97 ರನ್‌ ಬಾರಿಸಿ ಐಪಿಎಲ್‌ನಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿದ ಶಿಖರ್‌ ಧವನ್‌ಗೆ ಶುಕ್ರವಾರ ರಾತ್ರಿ “ಈಡನ್‌ ಗಾರ್ಡನ್ಸ್‌’ನಲ್ಲಿ ಶತಕವೊಂದು ಮಿಸ್‌ ಆಯಿತು. ಸೆಂಚುರಿ ಹೊಡೆಯುವ ಎಲ್ಲ ಅವಕಾಶಗಳಿದ್ದರೂ ಕಾಲಿನ್‌ ಇನ್‌ಗಾಮ್‌ ಭರ್ಜರಿ ಸಿಕ್ಸರ್‌ ಒಂದನ್ನು ಬಾರಿಸಿ ಡೆಲ್ಲಿ ಗೆಲುವನ್ನು ಸಾರಿದರು. ಆಗ ಧವನ್‌ ಅಜೇಯ 97 ರನ್‌ ಮಾಡಿ ಇನ್ನೊಂದು ತುದಿಯಲ್ಲಿದ್ದರು.

ಐಪಿಎಲ್‌ನಲ್ಲಿ ಮೊದಲ ಶತಕದ ಅವಕಾಶ ಜಾರಿಹೋದ ಬಗ್ಗೆ ಪ್ರತಿಕ್ರಿಯಿಸಿದ ಶಿಖರ್‌ ಧವನ್‌, “ನಿಜ, ನಾನಿಂದು ಮೊದಲ ಟಿ20 ಶತಕದ ನಿರೀಕ್ಷೆಯಲ್ಲಿದ್ದೆ. ಆದರೆ ಇದು ಸಾಧ್ಯವಾಗಲಿಲ್ಲ. ಯಾವತ್ತೂ ವೈಯಕ್ತಿಕ ದಾಖಲೆಗಿಂತ ತಂಡದ ಗುರಿ, ತಂಡದ ಗೆಲುವು ಮುಖ್ಯ. ಬಹುಶಃ ನಾನು ಆ ಸಿಂಗಲ್‌ ತೆಗೆದುಕೊಳ್ಳುವ ಬದಲು ದೊಡ್ಡ ಹೊಡೆತದ ರಿಸ್ಕ್ ತೆಗೆದುಕೊಂಡಿದ್ದರೆ ಸೆಂಚುರಿ ಸಾಧ್ಯವಾಗುತ್ತಿತ್ತು…’ ಎಂದರು.

105 ರನ್‌ ಜತೆಯಾಟ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆತಿಥೇಯ ಕೆಕೆಆರ್‌ 7 ವಿಕೆಟಿಗೆ 178 ರನ್‌ ಪೇರಿಸಿದರೆ, ಡೆಲ್ಲಿ ಆರಂಭದಿಂದಲೇ ಬಿರುಸಿನ ಆಟಕ್ಕಿಳಿದು 18.5 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 180 ರನ್‌ ಬಾರಿಸಿ ಗೆದ್ದು ಬಂದಿತು.

ಅಂತಿಮ 2 ಓವರ್‌ಗಳಲ್ಲಿ ಡೆಲ್ಲಿ ಗೆಲುವಿಗೆ 12 ರನ್‌ ಅಗತ್ಯವಿತ್ತು. ಆಗ 95 ರನ್‌ ಮಾಡಿ ಆಡುತ್ತಿದ್ದ ಧವನ್‌ಗೆ ಶತಕದ ಅವಕಾಶ ತೆರೆದಿತ್ತು. ಚಾವ್ಲಾ ಅವರ 19ನೇ ಓವರಿನ ಮೊದಲ ಎಸೆತದಲ್ಲಿ ಧವನ್‌ ಸಿಂಗಲ್‌ ತೆಗೆದರು. 2ನೇ ಎಸೆತಕ್ಕೆ ಇನ್‌ಗಾಮ್‌ ಫೋರ್‌ ಹೊಡೆದರು. ಮುಂದಿನ ಎಸೆತದಲ್ಲಿ ಒಂದು ರನ್‌ ತೆಗೆದು ಧವನ್‌ಗೆ ಸ್ಟ್ರೈಕ್‌ ನೀಡಿದರು. ಆದರೆ ಧವನ್‌ಗೆ ಗಳಿಸಲು ಸಾಧ್ಯವಾದದ್ದು ಒಂದೇ ರನ್‌. 5ನೇ ಎಸೆತವನ್ನು ಇನ್‌ಗಾಮ್‌ ಸಿಕ್ಸರ್‌ಗೆ ಅಟ್ಟುವುದರೊಂದಿಗೆ ಡೆಲ್ಲಿ ಗೆದ್ದಿತು, ಧವನ್‌ಗೆ ಶತಕ ತಪ್ಪಿತು!

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಡೆಲ್ಲಿ ಕೇವಲ 2ನೇ ಸಲ ಕೆಕೆಆರ್‌ ವಿರುದ್ಧ “ಈಡನ್‌ ಗಾರ್ಡನ್ಸ್‌’
ನಲ್ಲಿ ಗೆಲುವು ಸಾಧಿಸಿತು. ಮೊದಲ ಜಯ ದಾಖಲಿಸಿದ್ದು 2012ರಲ್ಲಿ. ಉಳಿದಂತೆ ಇಲ್ಲಿ ಆಡಲಾದ 9 ಪಂದ್ಯಗಳಲ್ಲಿ ಡೆಲ್ಲಿ ಪರಾಭವಗೊಂಡಿದೆ. ಈ ಪಂದ್ಯಕ್ಕೂ ಮುನ್ನ ಆಡಲಾದ ಸತತ 5 ಪಂದ್ಯಗಳಲ್ಲಿ ಡೆಲ್ಲಿ ಸೋಲನುಭವಿಸಿತ್ತು.
* ಶಿಖರ್‌ ಧವನ್‌ ಐಪಿಎಲ್‌ನಲ್ಲಿ 3 ಸಲ 90ರ ಮೊತ್ತ ದಾಖಲಿಸಿ ಜಂಟಿ 2ನೇ ಸ್ಥಾನಿಯಾದರು. ಉಳಿದಿಬ್ಬರೆಂದರೆ ಕೊಹ್ಲಿ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌. ಡೇವಿಡ್‌ ವಾರ್ನರ್‌ 5 ಸಲ 90-99ರ ಮೊತ್ತ ಗಳಿಸಿದ್ದು ಐಪಿಎಲ್‌ ದಾಖಲೆ.
* ಶಿಖರ್‌ ಧವನ್‌ ಟಿ20ಯಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶಿಸಿದರು (ಅಜೇಯ 97). 2011ರಲ್ಲಿ ಡೆಕ್ಕನ್‌ ಚಾರ್ಜರ್ ಪರ ಆಡುತ್ತ ಪಂಜಾಬ್‌ ವಿರುದ್ಧ ಅಜೇಯ 95 ರನ್‌ ಹೊಡೆದದ್ದು ಅವರ ಈ ವರೆಗಿನ ಅತ್ಯುತ್ತಮ ಬ್ಯಾಟಿಂಗ್‌ ಸಾಧನೆಯಾಗಿತ್ತು.
* ಧವನ್‌ ಟಿ20ಯಲ್ಲಿ 50ನೇ ಅರ್ಧ ಶತಕ ಹೊಡೆದರು. ಅವರು ಈ ಸಾಧನೆಗೈದ 10ನೇ ಆಟಗಾರ.
* ಟಿ20ಯಲ್ಲಿ 750 ಬೌಂಡರಿ ಬಾರಿಸಿದ ಮೊದಲ ಭಾರತೀಯ ನೆಂಬ ದಾಖಲೆ ಶಿಖರ್‌ ಧವನ್‌ ಅವರದಾಯಿತು. ಈ ಸಂದರ್ಭದಲ್ಲಿ ಅವರು 747 ಬೌಂಡರಿ ಹೊಡೆದ ಗೌತಮ್‌ ಗಂಭೀರ್‌ ದಾಖಲೆ ಮುರಿದರು.
* ಆ್ಯಂಡ್ರೆ ರಸೆಲ್‌ ಈ ಐಪಿಎಲ್‌ನ ಎಲ್ಲ 6 ಪಂದ್ಯಗಳಲ್ಲಿ 40 ಪ್ಲಸ್‌ ರನ್‌ ಹೊಡೆದರು. ಅವರು ಈ ಸಾಧನೆ ಮಾಡಿದ 2ನೇ ಆಟಗಾರ. ರಾಬಿನ್‌ ಉತ್ತಪ್ಪ ಮೊದಲಿಗ. ಅವರು ಕೆಕೆಆರ್‌ ಪರ 2014ರಲ್ಲಿ ಈ ಸಾಧನೆ ಮಾಡಿದ್ದರು.

ಟಾಪ್ ನ್ಯೂಸ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.