ಶಿಕ್ಷಣದಿಂದ ಮಹಿಳೆಯರ ಅಭಿವೃದ್ಧಿ: ಪಾರ್ವತಮ್ಮ
Team Udayavani, Apr 5, 2019, 5:19 PM IST
ಎನ್.ಆರ್.ಪುರ: ಮಹಿಳೆಯರ ಅಭಿವೃದ್ಧಿಗೆ ಶಿಕ್ಷಣ ಅತೀ ಮುಖ್ಯ ಎಂದು ಶಿವಮೊಗ್ಗ ಕಮಲಾ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ| ಕೆ.ಟಿ.ಪಾರ್ವತಮ್ಮ ಹೇಳಿದರು. ಇಲ್ಲಿನ ಸಹರಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ 22ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ
ಅವರು ಮಾತನಾಡಿದರು.
ಇಂದು ಪುರುಷ, ಮಹಿಳೆ ಇಬ್ಬರೂ ವಿದ್ಯುನ್ಮಾನ ಯಂತ್ರಗಳನ್ನು ಸರಿಸಮಾನವಾಗಿ ಬಳಸುತ್ತಿದ್ದಾರೆ. ಹೆಣ್ಣನ್ನು ಸಮಾಜದ ಕಟ್ಟುಪಾಡುಗಳಿಗೆ ಕಟ್ಟಿ ಹಾಕದೆ ಸ್ವತಂತ್ರ್ಯವಾಗಿ ಬದುಕಲು ಪೋಷಕರು ಬಿಡಬೇಕು. ರಾಷ್ಟ್ರೀಯ ಅನನ್ಯತೆ ಕೊಡಬೇಕು. ಸಮಾಜ ಸಾಮಾಜಿಕವಾಗಿ ಆರೋಗ್ಯಕರವಾಗಿರಲು ಹೆಣ್ಣನ್ನು ಸಮಾನವಾಗಿ ಬೆಳೆಸಬೇಕು ಎಂದರು.
ಮಹಿಳೆಯರಲ್ಲಿ ತಮ್ಮ ಆಂತರಿಕ ಬೌದ್ಧಿಕ ಸಾಮರ್ಥ್ಯವಿದ್ದು, ಉನ್ನತ ಶಿಕ್ಷಣ ಹೊಂದಿದರೆ ವೈಚಾರಿಕವಾಗಿ ಬೆಳೆದರೆ ಮಾತ್ರ ಇಂದು ಬದಲಾವಣೆಗಳು ಸಾಧ್ಯ. ಹೆಣ್ಣು ಶೋಷಣೆಗಳಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ನೆಹರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಕೆ.ಸಿ. ದ್ರಾಕ್ಷಾಯಿಣಿ, ಇಂದು ಮಹಿಳೆಯರು ಕ್ರಿಯಾಶೀಲರಾಗಿದ್ದಾರೆ. ಖಾಲಿತನದ ಭಾವನೆ ಮಹಿಳೆಯರನ್ನು ಕಾಡುತ್ತಿದೆ. ಆದ್ಯತೆ ಇಲ್ಲದ, ಪ್ರತಿಫಲವಿಲ್ಲದ ಕ್ಷೇತ್ರ ಗೃಹಿಣಿಯದ್ದಾಗಿದೆ. ಹಿಂದೆ ಪುರುಷರ
ಜೇಬುಗಳೇ ಮಹಿಳೆಯರ ಬ್ಯಾಂಕಾಗಿತ್ತು. ಈ ಎಲ್ಲಾ ಪರಿಸ್ಥಿತಿಗಳನ್ನು ಮಹಿಳೆ ಇಂದು ಮೀರಿ ಬಂದಿದ್ದಾಳೆ. ಪ್ರಸ್ತುತ ದಿನಗಳಲ್ಲಿ ವಿದ್ಯೆ ಎಂಬ ಮಾನದಂಡದಿಂದ ಮಹಿಳೆಯರ ಸ್ಥಾನಮಾನ ಬದಲಾಗಿದೆ. ಸಾಂಸಾರಿಕ ಜಗತ್ತಿನಿಂದ ಇಂದು ಮಹಿಳೆಯರು ವ್ಯಾವಹಾರಿಕ ಜಗತ್ತಿಗೆ ಕಾಲಿಟ್ಟಿದ್ದಾಳೆ ಎಂದರು.
ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ವೇತಾ ರಾಜೇಂದ್ರ ಮಾತನಾಡಿ, ನಮ್ಮ ಶಾಶ್ವತ ಮಹಿಳಾ ಒಕ್ಕಲಿಗರ ಸಂಘವು ಅನೇಕ ಏಳು ಬೀಳುಗಳ ನಡುವೆ 22 ವರ್ಷಗಳ ಕಾಲದ ಸುದೀರ್ಘ ಪಯಣದತ್ತ ಸಾಗಿದೆ. ಇದಕ್ಕೆ ಸಂಘದ ಎಲ್ಲ ಪದಾ ಧಿಕಾರಿಗಳ ಶ್ರಮ ಮಹತ್ವದ್ದಾಗಿದೆ ಎಂದರು.
ಸಂಘದ ಕಾರ್ಯದರ್ಶಿ ಭವಾನಿ ಶಿವಾನಂದ್ ಸಂಘದ ವಾರ್ಷಿಕ ವರದಿ ಮಂಡಿಸಿದರು. ಸಮಾರಂಭದಲ್ಲಿ ವಾರ್ಷಿಕೋತ್ಸವ ಅಂಗವಾಗಿ ಜರುಗಿದ ವಿವಿಧ ಕ್ರೀಡಾಕೂಟಗಳಲ್ಲಿ ಜಯ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು. ಖಜಾಂಚಿ ಸವಿತಾ ರತ್ನಾಕರ್, ಚೈತ್ರಾ ರಮೇಶ್, ಲೇಖಾ ವಸಂತ್, ವಸಂತ ದಿವಾಕರ್
ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.