ಆಕ್ಷೇಪಾರ್ಹ ಪೋಸ್ಟ್‌ಗೆ 3 ವರ್ಷ ಜೈಲು, ದಂಡ
ಕೇರಳದ ವಿವಾದಿತ ಪೊಲೀಸ್ ಕಾಯ್ದೆ ತಿದ್ದುಪಡಿಗೆ ಅಂಕಿತ
Team Udayavani, Nov 23, 2020, 6:32 AM IST
ತಿರುವನಂತಪುರ: ವಾಕ್ ಸ್ವಾತಂತ್ರ್ಯ, ನಿಷ್ಪಕ್ಷಪಾತ ಪತ್ರಿಕೋದ್ಯಮದ ಹಕ್ಕಿಗೆ ಚ್ಯುತಿ ತರಲಿದೆ ಎನ್ನಲಾದ ವಿವಾದಿತ ಪೊಲೀಸ್ ತಿದ್ದುಪಡಿ ಕಾಯ್ದೆಗೆ ಕೇರಳ ಸರಕಾರ ತೀವ್ರ ವಿರೋಧದ ನಡುವೆಯೇ ಅಂಕಿತ ಒತ್ತಿದೆ.
ಕೇರಳ ಕ್ಯಾಬಿನೆಟ್ ಅನುಮೋದಿಸಿದ್ದ 2011ರ “118 ಎ’ ಪೊಲೀಸ್ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಸಹಿ ಹಾಕಿದ್ದಾರೆ. ಇದರ ಅನ್ವಯ, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಸೈಬರ್ ಬೆದರಿಕೆಯೊಡ್ಡುವವರಿಗೆ ಕನಿಷ್ಠ 3 ವರ್ಷ ಜೈಲು ಅಥವಾ 10 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಎಲ್‌ಡಿಎಫ್ ಸರಕಾರ ಮುಂದಾಗಿದೆ.
ಜಾರಿ ಆಗಿದ್ದೇಕೆ?: “ಪ್ರಸ್ತುತವಿರುವ ಕಾನೂನಿನಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಸೈಬರ್ ಬೆದರಿಕೆಯೊಡ್ಡುವ ಅಪರಾಧಿಗಳಿಗೆ ನಿರ್ದಿಷ್ಟ ಶಿಕ್ಷೆಗಳಿಲ್ಲ. ಐಪಿಸಿ ಸೆಕ್ಷನ್ 499, 500ರಲ್ಲಿ ಮಾನಹಾನಿ ಮೊಕದ್ದಮೆ ಹೂಡಲು ಅವಕಾಶವಿದ್ದರೂ, ಇಲ್ಲಿ ಅರ್ಜಿದಾರರೇ ಖುದ್ದಾಗಿ ಕೋರ್ಟ್ ಮೆಟ್ಟಿಲೇರಬೇಕು’ ಎನ್ನುವುದು ಕೇರಳ ಸರಕಾರದ ವಾದ. ಆದರೆ, ತಿದ್ದುಪಡಿ ತರಲಾದ ಪೊಲೀಸ್ ಕಾಯ್ದೆಯಲ್ಲಿ ಸಂತ್ರಸ್ತರ ಪರ ಯಾವುದೇ ವ್ಯಕ್ತಿ ದೂರು ಸಲ್ಲಿಸಬಹುದು ಅಥವಾ ಪೊಲೀಸ್ ಅಧಿಕಾರಿಯೇ ಖುದ್ದಾಗಿ ಆರೋಪಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಬಹುದು. ನೋಟಿಸ್ ನೀಡದೆ ಪೊಲೀಸರು ಆರೋಪಿಯನ್ನು ಬಂಧಿಸಬಹುದು. ಆದರೆ ಸಿಎಂ ಕಚೇರಿ ಹೊರಡಿಸಿರುವ ಪ್ರಕಟನೆಯಲ್ಲಿ ಈ ತಿದ್ದುಪಡಿ ಕಾಯ್ದೆ ಕೇವಲ ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಲ್ಲ ಎಂಬುದೂ ಸ್ಪಷ್ಟವಾಗಿದೆ. “ಮುದ್ರಣ, ದೃಶ್ಯ ಮಾಧ್ಯಮ, ಪೋಸ್ಟರ್ ಮತ್ತು ಬಿಲ್‌ಬೋರ್ಡ್‌ಗಳ ವಿರುದ್ಧವೂ ಕ್ರಮ ಜರಗಿಸಲು ಅವಕಾಶವಿದೆ’ ಎಂದಿದೆ.
ತೀವ್ರ ಆಕ್ಷೇಪ: ಸರಕಾರ ಜಾರಿಗೆ ತಂದಿರುವ ಪೊಲೀಸ್ ತಿದ್ದುಪಡಿ ಕಾಯ್ದೆಗೆ ವಿಪಕ್ಷ ಯುಡಿಎಫ್ ಅಲ್ಲದೆ, ಎಲ್‌ಡಿಎಫ್ನ ಒಬ್ಬ ಸದಸ್ಯ, ಹಲವು ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಬೆದರಿಕೆಗೆ ಕಡಿವಾಣ
ಕನಿಷ್ಠ ಮೂರು ವರ್ಷ ಜೈಲು ಅಥವಾ 10 ಸಾವಿರ ರೂ. ದಂಡ ಅಥವಾ ಎರಡೂ ಶಿಕ್ಷೆ
ಯಾರಿಗೆ ಕಾಯ್ದೆ ಬಿಸಿ?
ಸಾಮಾಜಿಕ ಜಾಲತಾಣ, ಸಮೂಹ ಮಾಧ್ಯಮಗಳಲ್ಲಿ ಮಹಿಳೆ- ಮಕ್ಕಳ ವಿರುದ್ಧ ಬೆದರಿಕೆ ಒಡ್ಡುವವರಿಗೆ.
ಸಾರ್ವಜನಿಕ ಪ್ರದೇಶಗಳಲ್ಲಿ ಲೈಂಗಿಕ ಸನ್ನೆ ಮಾಡುವವರಿಗೆ.
ಸ್ತ್ರೀ ಗೌರವಕ್ಕೆ ಚ್ಯುತಿ ತರುವವರಿಗೆ.
ಮಹಿಳೆಯ ಖಾಸಗೀತನಕ್ಕೆ ಧಕ್ಕೆ ತರುವ ಫೋಟೋ, ವೀಡಿಯೋ ಚಿತ್ರೀಕರಿಸುವವರಿಗೆ.
ಬೇರೆ ರಾಜ್ಯಗಳಲ್ಲಿ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ 354, 354 ಎ ಜತೆಗೆ ಐಟಿ ಆ್ಯಕ್ಟ್ ಅನ್ವಯ ಶಿಕ್ಷೆ ವಿಧಿಸಲಾ ಗುತ್ತದೆ. ಅಪರಾಧದ ಗಂಭೀರತೆ ಆಧರಿಸಿ, ಕನಿಷ್ಠ 2 ವರ್ಷ ಜೈಲು ಶಿಕ್ಷೆ ಜಾರಿ ಮಾಡಲಾಗುತ್ತದೆ.
ಪ.ಬಂಗಾಲ ಮಹಿಳೆ ವಿರುದ್ಧದ ಸೈಬರ್ ಅಪರಾಧವನ್ನು “ವರ್ಚು ವಲ್ ರೇಪ್’ ಅಂತಲೇ ಪರಿಗಣಿಸಿದೆ.
ಮಹಾರಾಷ್ಟ್ರದಲ್ಲಿ ಐಟಿ ಆ್ಯಕ್ಟ್ ಅನ್ವಯ 5-7 ವರ್ಷ ಜೈಲು
ಪೊಲೀಸ್ ತಿದ್ದುಪಡಿ ಕಾಯ್ದೆ ಪ್ರತಿಯೊಬ್ಬರ ಖಾಸಗಿ ಹಕ್ಕುಗಳನ್ನು ಸಂರಕ್ಷಿಸುತ್ತದೆ. ಇದರಿಂದ ವಾಕ್ ಸ್ವಾತಂತ್ರ್ಯ ಅಥವಾ ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಯಾವುದೇ ಧಕ್ಕೆ ಇಲ್ಲ.
ಪಿಣರಾಯ್ ವಿಜಯನ್, ಕೇರಳ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.