ಕಲೆಕ್ಷನ್ ನಲ್ಲಿ ಚಾರ್ಲಿ ಭರ್ಜರಿ ಓಟ: ಮೂರು ದಿನದಲ್ಲಿ ರಕ್ಷಿತ್ ಚಿತ್ರ ಗಳಿಸಿದ್ದೆಷ್ಟು?
Team Udayavani, Jun 14, 2022, 8:52 AM IST
ನಿರೀಕ್ಷೆಯಂತೆಯೇ ರಕ್ಷಿತ್ ಶೆಟ್ಟಿ ನಟನೆ, ನಿರ್ಮಾಣದ “777 ಚಾರ್ಲಿ’ ಚಿತ್ರ ಹಿಟ್ ಲಿಸ್ಟ್ ಸೇರಿದೆ. ದಿನದಿಂದ ದಿನಕ್ಕೆ ಸಿನಿಮಾದತ್ತ ಆಕರ್ಷಿತರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಣಾಮ ಚಿತ್ರದ ಕಲೆಕ್ಷನ್ ಕೂಡಾ ಜೋರಾಗಿದೆ. ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲೇ ಚಾರ್ಲಿ 20ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಭರ್ಜರಿ ಹಿಟ್ ಆಗಿದೆ. ಅಂದಹಾಗೆ, ಇದು ಕೇವಲ ಕರ್ನಾಟಕ ಮಾರುಕಟ್ಟೆಯಲ್ಲಿ ಮಾಡಿರುವ ಕಲೆಕ್ಷನ್.
ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನ ಕಲೆಕ್ಷನ್ ಸೇರಿಸಿದರೆ ಸಂಖ್ಯೆ ದೊಡ್ಡದಾಗುತ್ತದೆ. ರಕ್ಷಿತ್ ಸಿನಿ ಕೆರಿಯರ್‌ನಲ್ಲಿ “777 ಚಾರ್ಲಿ’ ದೊಡ್ಡ ಹಿಟ್ ಎನ್ನಬಹುದು. ರೆಗ್ಯುಲರ್ ಕಮರ್ಷಿಯಲ್ ಶೈಲಿಯನ್ನು ಬಿಟ್ಟು ಒಂದು ಎಮೋಶನಲ್ ಜರ್ನಿಯಲ್ಲಿ ಸಾಗುವ ಈ ಸಿನಿಮಾ ಫ್ಯಾಮಿಲಿ ಆಡಿಯನ್ಸ್ ಅನ್ನು ಸೆಳೆಯುತ್ತಿದೆ.
ಇನ್ನು, ಚಿತ್ರತಂಡ ದೊಡ್ಡ ಮಟ್ಟದಲ್ಲಿ ಟಿಕೆಟ್ ರೇಟ್ ಕೂಡಾ ಏರಿಸಿಲ್ಲ. ಟಿಕೆಟ್ ರೇಟ್ ಏರಿಸದೇ ಇಷ್ಟೊಂದು ಕಲೆಕ್ಷನ್ ಆಗಿರೋದು ಸಿನಿಮಾಕ್ಕಿರುವ ಕ್ರೇಜ್ ಅನ್ನು ತೋರಿಸುತ್ತದೆ. ದಿನದಿಂದ ದಿನಕ್ಕೆ ಚಾರ್ಲಿ ನೋಡುವವರ ಸಂಖ್ಯೆ ಕೂಡಾ ಹೆಚ್ಚಾಗಿದೆ. ಶುಕ್ರವಾರಕ್ಕಿಂತ ಶನಿವಾರ, ಭಾನುವಾರ ಭರ್ಜರಿ ಕಲೆಕ್ಷನ್ ಆಗಿದ್ದು, ಹೌಸ್ ಫುಲ್‌ನೊಂದಿಗೆ ಚಿತ್ರ ಪ್ರದರ್ಶನವಾಗುತ್ತಿದೆ.
ಇದನ್ನೂ ಓದಿ:ಡ್ರಗ್ ಕೇಸ್: ಜಾಮೀನಿನ ಮೇಲೆ ಬಿಡುಗಡೆಯಾದ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್
ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ-ವಿತರಕರೊಬ್ಬರು ಹೇಳುವಂತೆ, 777 ಚಾರ್ಲಿ ಚಿತ್ರದ ಕಲೆಕ್ಷನ್ ಅದ್ಭುತವಾಗಿದೆ. “ಚಾರ್ಲಿ ಸಿನಿಮಾ ಯಾವುದೇ ಟಿಕೆಟ್ ರೇಟ್ ಹೆಚ್ಚಿಸದೆಯೂ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಿದೆ. ಮೂರು ದಿನಗಳಲ್ಲಿ 20 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ಇಲ್ಲಿಗೆ ಮುಗಿಯುವುದಿಲ್ಲ. ಎಮೋಶನಲ್ ಜರ್ನಿಯನ್ನು ಜನ ಇಷ್ಟಪಟ್ಟಿದ್ದು, ಇನ್ನೂ ಎರಡೂ¾ರು ವಾರ ಚಾರ್ಲಿ ಇದೇ ಓಟದಲ್ಲಿ ಸಾಗಲಿದೆ’ ಎನ್ನುತ್ತಾರೆ.
ಬಿಝಿನೆಸ್ ವಿಚಾರದಲ್ಲಿ “777 ಚಾರ್ಲಿ’ ರಿಲೀಸ್‌ಗೆ ಮುಂಚೆಯೇ ಸೇಫ್ ಆಗಿತ್ತು. ಚಿತ್ರದ ಕನ್ನಡ ವರ್ಶನ್ ಸ್ಯಾಟ್‌ಲೈಟ್ ಹಾಗೂ ಡಿಜಿಟಲ್ ರೈಟ್ಸ್ 21 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಇದರ ಜೊತೆಗೆ ಚಿತ್ರದ ಪರಭಾಷಾ ರೈಟ್ಸ್‌ಗಳಿಗೂ ಬೇಡಿಕೆ ಬಂದಿದ್ದು, “777 ಚಾರ್ಲಿ’ ಭರ್ಜರಿ ಬಿಝಿನೆಸ್ ಮಾಡಿದಂತಾಗುತ್ತದೆ.
ರಕ್ಷಿತ್ ಶೆಟ್ಟಿ ನಿರ್ಮಾಣ, ನಟನೆಯ ಈ ಚಿತ್ರವನ್ನು ಕಿರಣ್ ರಾಜ್ ನಿರ್ದೇಶಿಸಿ ದ್ದಾರೆ. ಚಿತ್ರದಲ್ಲಿ ರಕ್ಷಿತ್ ಜೊತೆಗೆ ನಟಿಸಿರುವ ಶ್ವಾನವೊಂದರ ಪರ್‌ಫಾರ್ಮೆನ್ಸ್‌ಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
MUST WATCH
ಹೊಸ ಸೇರ್ಪಡೆ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.