18 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಮ್ಮನನ್ನು ಪತ್ತೆ ಹಚ್ಚಲು ನೆರವಾಗಿದ್ದು ಆ ಮುರಿದ ಹಲ್ಲು
Team Udayavani, Jun 29, 2024, 5:03 PM IST
ಉತ್ತರಪ್ರದೇಶ: ಸುಮಾರು ಹದಿನೆಂಟು ವರ್ಷಗಳ ಹಿಂದೆ ಕೆಲಸ ಅರಸಿ ಮನೆ ಬಿಟ್ಟು ಹೋಗಿ ಬಳಿಕ ನಾಪತ್ತೆಯಾಗಿದ್ದ ಅಣ್ಣನನ್ನು ಆತನ ತಂಗಿಯೇ ಮುರಿದ ಹಲ್ಲಿನ ಮೂಲಕ ಗುರುತು ಪತ್ತೆಹಚ್ಚಿರುವ ಅಪರೂಪದ ಘಟನೆಯೊಂದು ಉತ್ತರಪ್ರದೇಶದ ಕಾನ್ಪುರದಲ್ಲಿ ಬೆಳಕಿಗೆ ಬಂದಿದೆ.
ಏನಿದು ಘಟನೆ:
ಉತ್ತರಪ್ರದೇಶದ ಕಾನ್ಪುರದ ಹಾಥಿಪುರ ಗ್ರಾಮದ ನಿವಾಸಿಯಾಗಿರುವ ರಾಜ್‌ಕುಮಾರಿ ಹಾಗೂ ಸಹೋದರ ಬಾಲ ಗೋವಿಂದನ್ ಚಿಕ್ಕವರಿದ್ದಾಗ ತಂದೆ ತಾಯಿ ಜೊತೆ ಒಟ್ಟಿಗೆ ಇದ್ದರು ಇದಾದ ಕೆಲ ಸಮಯದ ಬಳಿಕ ಗೋವಿಂದನ್ ತನ್ನ ಗೆಳೆಯರ ಜೊತೆ ಕೆಲಸ ಅರಸಿಕೊಂಡು ಮುಂಬೈಗೆ ತೆರಳುತ್ತಾರೆ ಇದಾದ ಕೆಲ ಸಮಯದ ಬಳಿಕ ಗೆಳೆಯರು ತಮ್ಮ ಊರಿನತ್ತ ಹೆಜ್ಜೆ ಹಾಕುತ್ತಾರೆ ಆದರೆ ಗೋವಿಂದನ್ ಮಾತ್ರ ಅಲ್ಲೇ ಉಳಿದುಕೊಂಡಿದ್ದ ಕೆಲಸ ವರ್ಷದ ಬಳಿಕ ಆತನಿಗೆ ಊರಿಗೆ ಬರುವ ಮನಸ್ಸಾಗಿದೆ ಅದರಂತೆ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಕಾನ್ಪುರ ರೈಲು ಹತ್ತಿದ್ದಾನೆ ಈ ನಡುವೆ ಆತನ ಆರೋಗ್ಯದಲ್ಲಿ ಏರುಪೇರಾದ ಕಾರಣ ಕಾನ್ಪುರಕ್ಕೆ ಹೋಗಬೇಕಿದ್ದ ಬಾಲಗೋವಿಂದ್ ದಾರಿ ತಪ್ಪಿ ಜೈಪುರ ತಲುಪಿದ್ದಾರೆ. ಅಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರು ಆತನನ್ನು ಕರೆದುಕೊಂಡು ಹೋಗಿ ಉಪಚರಿಸಿದ್ದಾನೆ. ಅವನು ಚೇತರಿಸಿಕೊಂಡಾಗ, ಅವನ ಕಾರ್ಖಾನೆಯಲ್ಲಿ ಅವನಿಗೆ ಕೆಲಸವನ್ನೂ ನೀಡಿದ್ದಾನೆ.
ಇತ್ತ ಮುಂಬೈಯಲ್ಲಿರುವ ವೇಳೆ ಮನೆಗೆ ಕರೆ ಮಾಡುತ್ತಿದ್ದ ಗೋವಿಂದನ್ ಅರೋಗ್ಯ ಸಮಸ್ಯೆಯ ಬಳಿಕ ತನ್ನ ಮನೆಯವರ ಸಂಪರ್ಕವನ್ನು ಕಳೆದುಕೊಂಡಿದ್ದ, ಪೋಷಕರು ಆತನ ಗೆಳೆಯರ ಬಳಿ ಕೇಳಿದರೆ ಅವರಿಗೂ ಈತನ ಬಗ್ಗೆ ಮಾಹಿತಿ ಸಿಗಲಿಲ್ಲ.
ಇತ್ತ ಜೈಪುರದಲ್ಲಿ ಬದುಕು ಕಟ್ಟಿಕೊಂಡ ಬಾಲಗೋವಿಂದ್ ಅದೇ ಪ್ರದೇಶದ ಈಶ್ವರ ದೇವಿ ಎಂಬುವರನ್ನು ಮದುವೆಯಾಗಿದ್ದಾನೆ ಅಲ್ಲದೆ ದಂಪತಿಗೆ ಇಬ್ಬರೂ ಮುದ್ದಾದ ಮಕ್ಕಳೂ ಇದ್ದಾರೆ.
ಹೀಗೆ ಜೀವನ ಸಾಗುತ್ತಿರುವ ವೇಳೆ ಗೋವಿಂದನ್ ಗೆ ಮೊಬೈಲ್ ನಲ್ಲಿ ರೀಲ್ಸ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾನೆ ಅದರಂತೆ ಅವನು ಹೋದ ದೇವಸ್ಥಾನ, ಪ್ರವಾಸಿ ತಾಣ ಹೀಗೆ ಅನೇಕ ಕಡೆಗಳ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣವಾದ ಇಸ್ಟಾ ಗ್ರಾಮ್ ನಲ್ಲಿ ಹಾಕುತಿದ್ದ. ಹೀಗೆ ದಿನಗಳು ಕಳೆಯುತ್ತಿದ್ದಂತೆ ಒಂದು ಬಾರಿ ಗೋವಿಂದನ್ ಸಹೋದರಿ ರಾಜಕುಮಾರಿ ತನ್ನ ಮೊಬೈಲ್ ನಲ್ಲಿ ರೀಲ್ಸ್ ನೋಡುತ್ತಿರುವಾಗ ಗೋವಿಂದನ್ ಹಾಕಿರುವ ರೀಲ್ಸ್ ನೋಡಿದ್ದಾಳೆ ಆದರೆ ರಾಜಕುಮಾರಿಗೆ ರೀಲ್ಸ್ ನಲ್ಲಿರುವ ವ್ಯಕ್ತಿಯನ್ನು ನೋಡಿದಾಗ ತನ್ನ ಸಹೋದರನ ನೆನಪಾಗುತಿತ್ತು ಬಳಿಕ ಆತನ ಇನ್ನಷ್ಟು ವಿಡಿಯೋ ಗಳನ್ನು ನೋಡಿದಾಗ ಇಟ ತನ್ನ ಸಹೋದರ ಇರಬಹುದು ಅಲ್ಲದೆ ಆ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಮುಖ್ಯ ಕಾರಣವಾಗಿರುವುದು ಸಹೋದರನ ತುಂಡಾಗಿರುವ ಹಲ್ಲುಇದರ ಆಧಾರದ ಮೇಲೆ ಅನುಮಾನ ವ್ಯಕ್ತಪಡಿಸಿ ಬಳಿಕ ಇಸ್ಟಾಗ್ರಾಮ್ ಮೂಲಕ ಆತನ ಮೊಬೈಲ್ ನಂಬರ್ ಪಡೆದು ವಿಚಾರಿಸಿದಾಗ ಆತ ತನ್ನ ಸಹೋದರ ಎಂಬುದು ಗೊತ್ತಾಗಿದೆ.
ಇತ್ತ ತನ್ನ ಸಹೋದರ ಪತ್ತೆಯಾದ ವಿಚಾರವನ್ನು ಮನೆಯವರ ಬಳಿ ರಾಜಕುಮಾರಿ ಹೇಳಿಕೊಂಡಿದ್ದಾಳೆ ಅಲ್ಲದೆ ಆತನ ಬಳಿ ಹೆಚ್ಚು ಮಾತನಾಡಲು ಸಂಕೋಚ ಇದರ ನಡುವೆ ಸಹೋದರಿ ಗೋವಿಂದನ್ ಗೆ ಕರೆ ಮಾಡಿ ತನ್ನ ಊರಿಗೆ ಒಮ್ಮೆ ಬರುವಂತೆ ಕೇಳಿಕೊಂಡಿದ್ದಾಳೆ ಅದರಂತೆ ಗೋವಿಂದನ್ ತನ್ನ ಹುಟ್ಟೂರಿಗೆ ದಂಪತಿ ಮಕ್ಕಳು ಸಮೇತ ಆಗಮಿಸಿ ಸಹೋದರಿ ಹಾಗೂ ಮನೆಯವರ ಜೊತೆಗೆ ಇದ್ದು ಬಳಿಕ ಜೈಪುರಕ್ಕೆ ತೆರಳಿದ್ದಾನೆ.
ಹೀಗೆ ಹದಿನೆಂಟು ವರ್ಷದ ಹಿಂದೆ ನಾಪತ್ತೆಯಾಗಿದ್ದ ಸಹೋದರನನ್ನು ಪತ್ತೆ ಹಚ್ಚಲು ಇಸ್ಟಾ ಗ್ರಾಮ್ ರೀಲ್ಸ್ ಸಹಾಯ ಮಾಡಿದೆ, ಜೊತೆಗೆ ಸಹೋದರನ ಮುರಿದ ಹಲ್ಲು ಪ್ರಮುಖ ಪಾತ್ರ ವಹಿಸಿದೆ.
ಇದನ್ನೂ ಓದಿ: Mudigere: ಹೇಮಾವತಿ ನದಿಗೆ ಬಿದ್ದ ಮತ್ತೊಂದು ಕಾರು… ನಾಲ್ವರಿಗೆ ಸಣ್ಣ ಪುಟ್ಟ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.